ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂತ್ ಬಾಕ್ಸಿಂಗ್‌: ನಾಲ್ಕರ ಘಟ್ಟಕ್ಕೆ ಮುಸ್ಕಾನ್, ತಮನ್ನಾ

Last Updated 23 ನವೆಂಬರ್ 2022, 19:46 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಿಶ್ವ ಯೂತ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾರತೀಯರು ಉತ್ತಮ ಸಾಮರ್ಥ್ಯ ಮಂದುವರಿಸಿದ್ದಾರೆ. ಮುಸ್ಕಾನ್, ತಮನ್ನಾ ಸೇರಿದಂತೆ ಮತ್ತೆ ನಾಲ್ವರು ಬಾಕ್ಸರ್‌ಗಳು ಸೆಮಿಫೈನಲ್‌ ತಲುಪಿದ್ದು ಪದಕ ಖಚಿತಪಡಿಸಿದ್ದಾರೆ.

ಸ್ಪೇನ್‌ನ ಲಾ ನೂಸಿಯಾದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಕೀರ್ತಿ ಮತ್ತು ದೇವಿಕಾ ಘೋರ್ಪಡೆ ಬುಧವಾರ ನಾಲ್ಕರ ಘಟ್ಟ ತಲುಪಿದ ಇನ್ನಿಬ್ಬರು ಬಾಕ್ಸರ್‌ಗಳು. ಈ ನಾಲ್ವರು ಸೆಮಿ ತಲುಪುವದರೊಂದಿಗೆ ಭಾರತ ಇದುವರೆಗೆ 11 ಪದಕಗಳನ್ನು ಖಚಿತಪಡಿಸಿದೆ. ಮಹಿಳೆಯರ 50 ಕೆಜಿ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ತಮನ್ನಾ 5–0ಯಿಂದ ಜಪಾನ್‌ನ ಜುನಿ ಟೊನೆಗವಾ ಅವರನ್ನು ಪರಾಭವಗೊಳಿಸಿದರು. ದೇವಿಕಾ (52 ಕೆಜಿ) ಕೂಡ ಇದೇ ಅಂತರದಿಂದ ಜರ್ಮನಿಯ ಅಸ್ಯಾ ಅರಿ ಎದುರು ಗೆದ್ದರು. 75 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿರುವ ಮುಸ್ಕಾನ್‌ ಎಂಟರಘಟ್ಟದಲ್ಲಿ ಮಂಗೋಲಿಯಾದ ಜಿನೆಯಪ್‌ ಅಜಿಂಬಯಿ ಎದುರು ಕೀರ್ತಿ (+81 ಕೆಜಿ) ಅವರು ರುಮೇನಿಯಾದ ಲಿವಿಯಾ ಬೊಟಿಕಾ ಅವರನ್ನು ಸೋಲಿಸಿದರು. ಭಾರತದ ಬಾಕ್ಸರ್‌ಗಳು ಆರ್‌ಎಸ್‌ಸಿ (ರೆಫರಿಯಿಂದ ಪಂದ್ಯ ಸ್ಥಗಿತ) ಆಧಾರದಲ್ಲಿ ಗೆಲುವು ಸಾಧಿಸಿದರು.

ಪ್ರೀತಿ ದಹಿಯಾ (57 ಕೆಜಿ), ರಿಧಮ್‌ (+92 ಕೆಜಿ), ಜಾದೂಮಣಿ ಸಿಂಗ್‌ ಮಂದೆಂಗಬಮ್‌ (51 ಕೆಜಿ) ಸೋಲು ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT