ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ‘ಭಾರತ್‌ 22 ಇಟಿಎಫ್‌’ನ ಎರಡನೇ ಕಂತು

Last Updated 17 ಜೂನ್ 2018, 18:44 IST
ಅಕ್ಷರ ಗಾತ್ರ

ನವದೆಹಲಿ: ಕೋಲ್‌ ಇಂಡಿಯಾ ಷೇರು ವಿಕ್ರಯ ಉದ್ದೇಶದ ‘ಭಾರತ್‌–22 ವಿನಿಮಯ ವಹಿವಾಟು ನಿಧಿ’ಯ (ಇಟಿಎಫ್‌ನ) ಎರಡನೇ ಕಂತಿನ ಕೊಡುಗೆಯು ಜೂ. 19ರಂದು ಬಿಡುಗಡೆಯಾಗಲಿದೆ.

ಮಾರುಕಟ್ಟೆಯಿಂದ ₹ 8,400 ಕೋಟಿ ಸಂಗ್ರಹಿಸಲು ಇದು ನೆರವಾಗಲಿದೆ ಎಂದು ನಿರೀಕ್ಷಿಸಲಾಗಿದೆ. 19ರಂದು ಹೊಸ ಹೂಡಿಕೆದಾರರಿಗೆ, ಮರುದಿನ ಚಿಲ್ಲರೆ ಹೂಡಿಕೆದಾರರಿಗೆ ಅವಕಾಶ ಕಲ್ಪಿಸಿಕೊಡಲಾಗುವುದು. ಪೂರಕ ಕೊಡುಗೆ ಜೂನ್ 22ರವರೆಗೆ ಇರಲಿದೆ. ಹೂಡಿಕೆದಾರರಿಗೆ ನೀಡಿಕೆ ಬೆಲೆಯ
ಶೇ 2.5ರಷ್ಟು ರಿಯಾಯ್ತಿ ದೊರೆಯಲಿದೆ.

ಈ ಕೊಡುಗೆಯಿಂದ, ಕೋಲ್ ಇಂಡಿಯಾದಂತಹ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಲ್ಲಿ ಜನರ ಕನಿಷ್ಠ ಪಾಲುದಾರಿಕೆ ಕಾಯ್ದುಕೊಳ್ಳಲು ಸಾಧ್ಯವಾಗಲಿದೆ. ಕೇಂದ್ರೋದ್ಯಮಗಳ 22 ಕಂಪನಿಗಳನ್ನು ಒಳಗೊಂಡಿರುವ ‘ಭಾರತ್‌–22 ಇಟಿಎಫ್‌’ ಅನ್ನು 2017ರ ನವೆಂಬರ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ಮೊದಲ ಕಂತಿನಲ್ಲಿ ಉತ್ತಮ ಉತ್ತಮ ಸ್ಪಂದನೆ ದೊರೆತು ₹ 14,500 ಕೋಟಿ ಸಂಗ್ರಹವಾಗಿತ್ತು.

ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಕೇಂದ್ರ ಸರ್ಕಾರ ಹೊಂದಿರುವ ಪಾಲು ಬಂಡವಾಳ ಕಡಿಮೆ ಮಾಡಿಕೊಳ್ಳಲು ಇಟಿಎಫ್‌ ಒಂದು ಸುರಕ್ಷಿತ ಮಾರ್ಗ
ವಾಗಿದೆ.

2017–18ರಲ್ಲಿ ಷೇರು ವಿಕ್ರಯದಿಂದ ₹ 1 ಲಕ್ಷ ಕೋಟಿಗೂ ಅಧಿಕ ಸಂಗ್ರಹವಾಗಿತ್ತು. 2018–19ರಲ್ಲಿ ಷೇರು ವಿಕ್ರಯದಿಂದ ₹ 80,000 ಕೋಟಿ ಸಂಗ್ರಹಿಸುವ ನಿರೀಕ್ಷೆ ಹಾಕಿಕೊಂಡಿದೆ.

20ರಂದು ಐಪಿಒ: ರೈಲ್ವೆ ಸಲಹಾ ಸಂಸ್ಥೆ ಆರ್‌ಐಟಿಇಎಸ್‌ನಲ್ಲಿನ ಶೇ 12ರಷ್ಟು ಪಾಲು ಬಂಡವಾಳವನ್ನು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಮಾರಾಟ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಇದೇ 20ರಂದು ಇದು ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT