ಶುಕ್ರವಾರ, ಮೇ 14, 2021
31 °C
ವಿಶ್ವ ಯೂತ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌

ಸೆಮಿಫೈನಲ್‌ಗೆ ವಿಂಕಾ, ಅಲ್ಫಿಯಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಏಷ್ಯನ್ ಚಾಂಪಿಯನ್‌ ವಿಂಕಾ ಹಾಗೂ ಅಲ್ಫಿಯಾ ಪಠಾಣ್ ಸೇರಿದಂತೆ ಭಾರತದ ನಾಲ್ವರು ಮಹಿಳಾ ಬಾಕ್ಸರ್‌ಗಳು ಪೋಲೆಂಡ್‌ನ ಕಿಯಲ್ಸೆಯಲ್ಲಿ ನಡೆಯುತ್ತಿರುವ ವಿಶ್ವ ಯೂತ್ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್ ತಲುಪಿದ್ದಾರೆ.

ಗೀತಿಕಾ ಹಾಗೂ ಪೂನಮ್ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟ ಇನ್ನಿಬ್ಬರು ಬಾಕ್ಸರ್‌ಗಳಾಗಿದ್ದು, ಪದಕಗಳನ್ನು ಖಚಿತಪಡಿಸಿದ್ದಾರೆ.

ಪಾಣಿಪತ್‌ನ ಬಾಕ್ಸರ್‌ ವಿಂಕಾ 60 ಕೆಜಿ ವಿಭಾಗದ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ 5–0ಯಿಂದ ಕೊಲಂಬಿಯಾದ ಕ್ಯಾಮಿಲೊ ಕ್ಯಾಮೆಲಾ ಅವರನ್ನು ಪ‍ರಾಭವಗೊಳಿಸಿದರೆ, 81+ ಕೆಜಿ ವಿಭಾಗದಲ್ಲಿ ಕಣಕ್ಕಿಳಿದಿದ್ದ ಅಲ್ಫಿಯಾ ಇಷ್ಟೇ ಅಂತರದಿಂದ ಹಂಗರಿಯ ರೆಕಾ ಹೊಫ್‌ಮನ್‌ ಎದುರು ಗೆದ್ದರು.

ಪೂನಮ್‌ (57 ಕೆಜಿ ವಿಭಾಗ) ಅವರಿಗೆ 5–0 ಯಿಂದ ಕಜಕಸ್ತಾನದ ನಜೆಕ್‌ ಸೆರಿಕ್ ವಿರುದ್ಧ, ಗೀತಿಕಾ (48 ಕೆಜಿ) ಅವರಿಗೆ ರುಮೇನಿಯಾದ ಎಲಿಜಬೆತ್‌ ಒಸ್ತನ್‌ ವಿರುದ್ಧ ಜಯ ಒಲಿಯಿತು

ಖುಷಿ (81 ಕೆಜಿ) ಅವರು ಕ್ವಾರ್ಟರ್‌ಫೈನಲ್ ಬೌಟ್‌ನಲ್ಲಿ ಟರ್ಕಿಯ ಬುಸ್ರಾ ಇಸಿಲ್ದಾರ್ ಎದುರು ಎಡವಿದರು.

ಪುರುಷರ 75 ಕೆಜಿ ವಿಭಾಗದಲ್ಲಿ ಮನೀಷ್‌ ಹಾಗೂ ಸುಮಿತ್‌ (69 ಕೆಜಿ) ಅವರೂ ಕ್ವಾರ್ಟರ್‌ಫೈನಲ್‌ಗೆ ಕಾಲಿಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು