ಬುಧವಾರ, ಅಕ್ಟೋಬರ್ 23, 2019
20 °C

ಎಟಿಪಿ ಟೂರ್ನಿ: ಪ್ರಜ್ಞೇಶ್‌ ಮುನ್ನಡೆ

Published:
Updated:

ನಾರ್ತ್‌ ಕೆರೋಲಿನಾ: ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌, ವಿನ್‌ಸ್ಟನ್‌ ಸಲೇಮ್‌ ಓಪನ್‌ ಎಟಿಪಿ ಟೆನಿಸ್‌ ಟೂರ್ನಿಯಲ್ಲಿ ಸೆಡ್ರಿಕ್‌–ಮಾರ್ಸೆಲ್‌ ಸ್ಟೇಬ್‌ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿ ಸೆಮಿಫೈನಲ್‌ ತಲುಪಿದರು.

ವಿಶ್ವ ಕ್ರಮಾಂಕದಲ್ಲಿ 89ನೇ ಸ್ಥಾನದಲ್ಲಿರುವ ಪ್ರಜ್ಞೇಶ್‌ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ 6–3, 6–4 ರಿಂದ ಜರ್ಮನಿಯ ಎದುರಾಳಿಯನ್ನು 1ಗಂಟೆ 43 ನಿಮಿಷಗಳಲ್ಲಿ ಸೋಲಿಸಿದರು. 

ಅವರು ಮುಂದಿನ ಸುತ್ತಿನಲ್ಲಿ ಫ್ರಾನ್ಸ್‌ನ ಬೆನೊಯಿ ಪೈರ್ ಅವರನ್ನು ಎದುರಿಸಲಿದ್ದಾರೆ. ವಿಶ್ವ ಕ್ರಮಾಂದಲ್ಲಿ 30ನೇ ಸ್ಥಾನದಲ್ಲಿರುವ ಪೈರ್‌ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದರು. ಈ ವರುಷದ ಆರಂಭದಲ್ಲಿ, ಫ್ರಾನ್ಸ್‌ನ ಆಟಗಾರನನ್ನು ಇಂಡಿಯನ್‌ ವೆಲ್ಸ್‌ ಟೂರ್ನಿಯಲ್ಲಿ ಸೋಲಿಸಿರುವುದರಿಂದ ಪ್ರಜ್ಞೇಶ್‌ ವಿಶ್ವಾಸದಲ್ಲಿದ್ದಾರೆ. 

ಡಬಲ್ಸ್‌ನಲ್ಲಿ ದಿವಿಜ್‌ ಶರಣ್‌– ರೋಹನ್‌ ಬೋಪಣ್ಣ ಮೊದಲ ಸುತ್ತಿನಲ್ಲೇ ಹೊರಬಿದ್ದರು. ಅಮೆರಿಕದ ನಿಕೋಲಸ್‌ ಮನ್ರೊ– ಟಿ. ಸಾಂಡ್‌ಗ್ರೆನ್‌ ಜೋಡಿ 6–3, 6–3ರಿಂದ ಭಾರತದ ಆಟಗಾರರನ್ನು ಸೋಲಿಸಿತು. 

ವೈಲ್ಡ್‌ ಕಾರ್ಡ್‌ ಎಂಟ್ರಿ ಪಡೆದ ಲಿಯಾಂಡರ್‌ ಪೇಸ್‌ (ಭಾರತ)– ಜೊನಾಥನ್‌ ಎಲ್ರಿಚ್‌ (ಇಸ್ರೇಲ್‌) ಮೊದಲ ಸುತ್ತಿನಲ್ಲಿ ರಾಜೀವ್‌ ರಾಮ್‌– ಜೋ ಸ್ಯಾಲಿಸ್‌ಬರಿ ಜೋಡಿಯನ್ನು ಎದುರಿಸಲಿದ್ದಾರೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)