ಟೆನಿಸ್: ಅಹಿದಾ ಶ್ರೇಯಾಂತ್‌ಗೆ ಪ್ರಶಸ್ತಿ ‘ಡಬಲ್’

ಬೆಂಗಳೂರು: ಉತ್ತಮ ಆಟವಾಡಿದ ಅಹಿದಾ ಸಿಂಗ್ ಹಾಗೂ ಶ್ರೇಯಾಂತ್ ಎಂ. ಅವರು ಎಐಟಿಎ ಸಿಎಸ್7 14 ವರ್ಷದೊಳಗಿನವರ ಟೆನಿಸ್ ಟೂರ್ನಿಯ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದುಕೊಂಡರು.
ಕೆಎಸ್‌ಎಲ್‌ಟಿಎ ಅಂಗಣದಲ್ಲಿ ಶನಿವಾರ ನಡೆದ ಬಾಲಕಿಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಬೆಂಗಳೂರಿನ ಅಹಿದಾ 6-1, 7-6 (5)ರಿಂದ ತಮಿಳುನಾಡಿನ ಮಧುಮಿತಾ ರಮೇಶ್ ಅವರ ಸವಾಲು ಮೀರಿದರು. ಕ್ಲಾರೆನ್ಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯಾಗಿರುವ 12 ವರ್ಷದ ಅಹಿದಾಗೆ ಇದು ಸತತ ನಾಲ್ಕನೇ ಸಿಎಸ್7 14 ವರ್ಷದೊಳಗಿನವರ ವಿಭಾಗದ ಪ್ರಶಸ್ತಿಯಾಗಿದೆ.
ಬಾಲಕಿಯರ ಡಬಲ್ಸ್‌ನಲ್ಲಿ ಅಹಿದಾ ಮತ್ತು ಆದ್ಯಾ ರಿತೇಶ್‌ಕುಮಾರ್ 6-3, 6-4ರಿಂದ ರಿಯಾ ಗಂಗಮ್ಮ ಮತ್ತು ನಭಾ ನಿಶಾನ್ ಅವರನ್ನು ಮಣಿಸಿದರು.
ಬಾಲಕರ ಸಿಂಗಲ್ಸ್ ಫೈನಲ್‌ನಲ್ಲಿ ಶ್ರೇಯಾಂತ್ 6-3, 6-4ರಿಂದ ನಿಹಾರ್ ಸುರೇಶ್ ಕುಮಾರ್ ಅವರನ್ನು ಸೋಲಿಸಿದರು. ಡಬಲ್ಸ್‌ನಲ್ಲಿ ತರುಣ್ ಎಚ್. ಜೊತೆಗೂಡಿದ ಶ್ರೇಯಾಂತ್ 6-2, 3-6, 10-5ರಿಂದ ಮೋಹಿತ್ ರೆಡ್ಡಿ–ಅಯಾನ್ ತಾರೀನ್ ಅವರಿಗೆ ಸೋಲುಣಿಸಿದರು.
ಎಐಟಿಎ 18 ವರ್ಷದೊಳಗಿನವರ ಬಾಲಕರ ವಿಭಾಗ ಸಿಂಗಲ್ಸ್‌ನಲ್ಲಿ ಕೆವಿನ್ ಟೈಟಸ್ 6-0, 6-2ರಿಂದ ತಮಿಳುನಾಡಿದ ಆಕಾಶ್ ಎದುರು ಗೆದ್ದು ಪ್ರಶಸ್ತಿ ತಮ್ಮದಾಗಿಸಿಕೊಂಡರು. ಈ ವಿಭಾಗದ ಬಾಲಕಿಯರ ಫೈನಲ್ ಪಂದ್ಯದಲ್ಲಿ ರಾಜ್ಯದ ಸಿರಿ ಪಾಟೀಲ 6-0, 6-3ರಿಂದ ಕರ್ನಾಟಕದವರೇ ಆದ ಗಗನಾ ಮೋಹನ್ ಕುಮಾರ್ ಎದುರು ಗೆದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.