ಶನಿವಾರ, ಏಪ್ರಿಲ್ 4, 2020
19 °C

ಟೆನಿಸ್‌: ನಡಾಲ್‌ಗೆ ಪ್ರಶಸ್ತಿ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Prajavani

ಅಕಪಲ್ಕೊ, ಮೆಕ್ಸಿಕೊ: ವಿಶ್ವದ ಎರಡನೇ ರ‍್ಯಾಂಕಿನ ಆಟಗಾರ ರಫೆಲ್‌ ನಡಾಲ್‌ ಅಬಿಯರ್ಟೊ ಮೆಕ್ಸಿಕಾನೊ ಟೆಲ್ಸೆಲ್‌ ಪ್ರಸೆಂಟಾಡೊ ಪೊರ್‌ ಎಚ್‌ಎಸ್‌ಬಿಸಿ ಟೆನಿಸ್‌ ಟೂರ್ನಿಯಲ್ಲಿ ಶನಿವಾರ ಚಾಂಪಿಯನ್‌ ಪಟ್ಟ ಧರಿಸಿದರು. ಫೈನಲ್‌ ಪಂದ್ಯದಲ್ಲಿ ಸ್ಪೇನ್‌ನ ಆಟಗಾರ, ಅಮೆರಿಕದ ಟೇಲರ್‌ ಫ್ರಿಟ್ಜ್‌ ಎದುರು 6–3, 6–3ರಿಂದ ಗೆದ್ದರು.

ರಫೆಲ್‌ ಇಲ್ಲಿ ಮೂರನೇ ಬಾರಿ ಪ್ರಶಸ್ತಿ ಒಲಿಸಿಕೊಂಡಿದ್ದಾರೆ. 2005ರಲ್ಲಿ ಮೊದಲ ಬಾರಿ ಗೆದ್ದಿದ್ದ ಅವರು, 2013ರಲ್ಲಿಯೂ ಪಾರಮ್ಯ ಮೆರೆದಿದ್ದರು. ಈ ಆವೃತ್ತಿಯಲ್ಲಿ ಒಂದೂ ಸೆಟ್‌ ಕಳೆದುಕೊಳ್ಳದೆ ಅವರು ಟ್ರೋಫಿಗೆ ಮುತ್ತಿಕ್ಕಿದರು. ಸೋತರೂ ಫ್ರಿಟ್ಜ್‌ ಅವರು ಮೊದಲ ಬಾರಿ ಎಟಿಪಿ 500 ಟೂರ್ನಿಯೊಂದರ ಫೈನಲ್‌ ತಲುಪಿದ ಶ್ರೇಯ ಪಡೆದುಕೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು