ಶನಿವಾರ, ಜೂನ್ 6, 2020
27 °C

ಸಿಂಗಲ್ಸ್‌ ಸ್ಪರ್ಧೆಗಳಿಗಷ್ಟೇ ಅವಕಾಶ: 14 ಪುಟಗಳ ಮಾರ್ಗಸೂಚಿ ಸಿದ್ಧಪಡಿಸಿದ ಎಐಟಿಎ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ : ಅಖಿಲ ಭಾರತ ಟೆನಿಸ್‌ ಸಂಸ್ಥೆಯು (ಎಐಟಿಎ) ಶುಕ್ರವಾರ 14 ಪುಟಗಳ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಸಿಂಗಲ್ಸ್‌ ಸ್ಪರ್ಧೆಗಳಿಗೆ ಹಸಿರು ನಿಶಾನೆ ತೋರಿರುವ ಎಐಟಿಎ, ಸದ್ಯಕ್ಕೆ ಡಬಲ್ಸ್‌ ಸ್ಪರ್ಧೆಗಳನ್ನು ನಡೆಸದಿರುವುದೇ ಒಳಿತು ಎಂದು ಅಭಿಪ್ರಾಯಪಟ್ಟಿದೆ.

‘ಡಬಲ್ಸ್‌ ಸ್ಪರ್ಧೆಯ ವೇಳೆ ಅಂತರ ಕಾಪಾಡಿಕೊಳ್ಳುವುದು ಕಷ್ಟ. ಒಂದೊಮ್ಮೆ ಡಬಲ್ಸ್‌ ವಿಭಾಗಕ್ಕೆ ಅವಕಾಶ ನೀಡಿದರೂ, ಆಟಗಾರರು ಕಿವಿಯಲ್ಲಿ ಪಿಸುಗುಟ್ಟುವುದು, ಎದೆಗೆ ಎದೆ ತಾಗಿಸಿ (ಚೆಸ್ಟ್‌ ಬಂಪ್ಸ್‌) ಸಂಭ್ರಮಿಸುವುದಕ್ಕೆ ಅವಕಾಶ ನೀಡಬಾರದು’ ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.

‘ಆಟಗಾರರು ತರಬೇತಿ ಕೇಂದ್ರ ಪ್ರವೇಶಿಸುವ ಮುನ್ನ, ರ‍್ಯಾಕೆಟ್‌ ಸೇರಿದಂತೆ ಅಭ್ಯಾಸಕ್ಕೆ ಬಳಸುವ ವಸ್ತುಗಳಿಗೆ ಸೋಂಕು ನಿವಾರಕಗಳನ್ನು ಸಿಂಪಡಿಸಬೇಕು’ ಎಂದು ಹೇಳಿದೆ.

‘ಆಟಗಾರರು ತಮಗೆ ನೀಡಿರುವ ಕ್ರಮಸಂಖ್ಯೆಯ ಚೆಂಡುಗಳನ್ನಷ್ಟೇ ಬಳಸಬೇಕು. ಎದುರಾಳಿ ಆಟಗಾರ ಅಥವಾ ಸಹ ಆಟಗಾರ ಬಾರಿಸಿದ ಚೆಂಡು ನಿಮ್ಮ ಅಂಗಳದಲ್ಲಿ ಬಿದ್ದರೆ ಅದನ್ನು ಕೈಯಿಂದ ಮುಟ್ಟದೇ, ರ‍್ಯಾಕೆಟ್‌ ಇಲ್ಲವೇ ಕಾಲಿನಿಂದ ತಳ್ಳಬೇಕು’ ಎಂದು ಸೂಚಿಸಿದೆ.

‘ಎಲ್ಲಾ ಟೆನಿಸ್‌ ಕೇಂದ್ರಗಳಲ್ಲೂ ಕೋವಿಡ್‌–19 ಟಾಸ್ಕ್‌ಫೋರ್ಸ್‌ ರಚಿಸಬೇಕು. ಟೆನಿಸ್‌ ಕೇಂದ್ರ ಹಾಗೂ ಅಂಗಳಗಳಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಬೇಕು’ ಎಂದೂ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು