ಗುರುವಾರ , ಸೆಪ್ಟೆಂಬರ್ 19, 2019
26 °C

ಅಮೆರಿಕ ಓಪನ್‌ ಡಬಲ್ಸ್‌ಗೆ ಆ್ಯಂಡಿ ಅಲಭ್ಯ

Published:
Updated:
Prajavani

ಲಂಡನ್‌ (ಎಎಫ್‌ಪಿ): ಸಿಂಗಲ್ಸ್ ಪಂದ್ಯಗಳತ್ತ ಗಮನಕೊಡುವ ಉದ್ದೇಶದಿಂದ ಅಮೆರಿಕ ಓಪನ್‌ ಡಬಲ್ಸ್ ವಿಭಾಗದಲ್ಲಿ ಆಡುವುದಿಲ್ಲ ಎಂದು ಟೆನಿಸ್‌ ಆಟಗಾರ ಆ್ಯಂಡಿ ಮರೆ ತಿಳಿಸಿದ್ದಾರೆ.

32 ವರ್ಷದ ಇಂಗ್ಲೆಂಡ್‌ನ ಆ್ಯಂಡಿ, ಈ ವಾರದ ಆರಂಭದಲ್ಲಿ ಸಿನ್ಸಿನಾಟಿ ಓಪನ್‌ ಟೂರ್ನಿಯ ಸಿಂಗಲ್ಸ್‌ನಲ್ಲಿ ರಿಚರ್ಡ್‌ ಗಾಸ್ಕೆಟ್‌ ಎದುರು ಸೋತಿದ್ದರು. ಜನವರಿಯಲ್ಲಿ ಹಿಪ್‌ ಸರ್ಜರಿಗೆ ಒಳಗಾದ ನಂತರ ಅವರು ಆಡಿದ ಮೊದಲ ಸ್ಪರ್ಧಾತ್ಮಕ ಸಿಂಗಲ್ಸ್ ಪಂದ್ಯವಾಗಿತ್ತು. ಸರ್ಜರಿಗೆ ಒಳಗಾದ ಬಳಿಕ ಆ್ಯಂಡಿ, ಜೂನ್‌ನಿಂದ ಡಬಲ್ಸ್ ಪಂದ್ಯಗಳಲ್ಲಿ ಆಡಿದ್ದಾರೆ. ಫೆಲಿಸಿಯಾನೊ ಲೊಪೆಜ್‌ ಜೊತೆಗೂಡಿ ಕಣಕ್ಕಿಳಿದಿದ್ದ ಅವರು ಕ್ವೀನ್ಸ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.

‘ನಾನು ಬಯಸಿದ ಮಟ್ಟದಲ್ಲಿ ಸಿಂಗಲ್ಸ್ ಪಂದ್ಯಗಳನ್ನು ಆಡುವುದು ನನ್ನ ಗುರಿಯಾಗಿದೆ. ಎಲ್ಲ ಸಾಮರ್ಥ್ಯವನ್ನು ಈ ಗುರಿಯತ್ತ ಕೇಂದ್ರೀಕರಿಸುವ ಉದ್ದೇಶದಿಂದ ಅಮೆರಿಕ ಓಪನ್‌ ಡಬಲ್ಸ್ ವಿಭಾಗದಲ್ಲಿ ಆಡುವುದಿಲ್ಲ’ ಎಂದು ಬಿಬಿಸಿ ಸ್ಪೋರ್ಟ್ಸ್‌ ನೀಡಿದ ಹೇಳಿಕೆಯಲ್ಲಿ ಆ್ಯಂಡಿ ತಿಳಿಸಿದ್ದಾರೆ.

Post Comments (+)