ಶನಿವಾರ, ಏಪ್ರಿಲ್ 17, 2021
27 °C
14 ವರ್ಷದೊಳಗಿನವರ ಪಂದ್ಯಗಳಲ್ಲಿ ವೆಂಕಟೇಶ್‌, ಮೇಘನಾಗೆ ಗೆಲುವು

ಟೆನಿಸ್‌: ಆಮೋದಿನಿ, ಅದಿತ್‌ಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆರಂಭದಿಂದಲೇ ಅಮೋಘ ಆಟವಾಡಿದ ಆಮೋದಿನಿ ವಿಜಯ ನಾಯಕ್ ಇಲ್ಲಿನ ಫಾರ್ಚೂನ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆದ ಎಐಟಿಎ ಚಾಂಪಿಯನ್ಸ್ ಸೀರಿಸ್‌ನ 18 ವರ್ಷದೊಳಗಿನ ಬಾಲಕಿಯರ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು. ಬಾಲಕರ ವಿಭಾಗದಲ್ಲಿ ಅದಿತ್ ಅಮರ್‌ನಾಥ್ ಚಾಂಪಿಯನ್‌ ಆದರು.

ನಗರದ ನ್ಯೂ ಹೊರೈಜನ್ ಪಬ್ಲಿಕ್ ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಆಮೋದಿನಿ ಏಕಪಕ್ಷೀಯ ಹೋರಾಟದಲ್ಲಿ ಸಿರಿ ಪಾಟೀಲ್ ಅವರನ್ನು 6-0, 6-2ರಲ್ಲಿ ಮಣಿಸಿದರು. ಕಳೆದ ವಾರ ಅವರು 16 ವರ್ಷದೊಳಗಿನವರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. 

ಬಾಲಕರ ವಿಭಾಗದಲ್ಲಿ ಐದನೇ ಶ್ರೇಯಾಂಕದ ಅದಿತ್ ಅಮರ್‌ನಾಥ್ ಮಂಗಳವಾರ ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ರವಿ ನಿನಾದ್ ಎದುರು ಜಯ ಗಳಿಸಿದ್ದರು. ಫೈನಲ್‌ನಲ್ಲಿ ಮನದೀಪ್ ರೆಡ್ಡಿ ಸ್ವಲ್ಪ ಪ್ರತಿರೋಧ ಒಡ್ಡಿದರೂ ಕೊನೆಯಲ್ಲಿ ಅದಿತ್‌ 6-3, 6-1ರಲ್ಲಿ ಗೆಲುವು ಸಾಧಿಸಿದರು.

ವೆಂಕಟೇಶ್‌, ಮೇಘನಾ ಸೆಮಿಫೈನಲ್‌ಗೆ

ರಾಜ್ಯ ಟೆನಿಸ್ ಸಂಸ್ಥೆಯ ಆವರಣದಲ್ಲಿ ನಡೆಯುತ್ತಿರುವ ಇದೇ ಸರಣಿಯ 14 ವರ್ಷದೊಳಗಿನವರ ಟೂರ್ನಿಯಲ್ಲಿ ಬುಧವಾರ ವೆಂಕಟೇಶ್ ಸುಬ್ರಹ್ಮಣ್ಯ ಮತ್ತು ಮೇಘನಾ ಜಿ.ಡಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದ ಸೆಮಿಫೈನಲ್ ಪ್ರವೇಶಿಸಿದರು. ಶೌರ್ಯ ಭಟ್ಟಾಚಾರ್ಯ ವಿರುದ್ಧ ವೆಂಕಟೇಶ್ 6-3, 6-3ರಲ್ಲಿ ಜಯ ಗಳಿಸಿದರೆ ಮೇಘನಾ 7-5, 6-1ರಲ್ಲಿ ಜೈನಾ ಅಂಬೆರ್ ಸಲಾರ್‌ ವಿರುದ್ಧ ಗೆದ್ದರು.

ಬಾಲಕರ ವಿಭಾಗದ ಉಳಿದ ಪಂದ್ಯಗಳಲ್ಲಿ ಗಂಧರ್ವ ಕೊತ್ತಪಲ್ಲಿ 6-4, 6-0ಯಿಂದ ಶ್ರೀಕರ್ ದೋನಿ ವಿರುದ್ಧ, ಕ್ಷಿತಿಜ್ ಆರಾಧ್ಯ 7-6 (2), 6-2ರಲ್ಲಿ ರಾಜೇಶ್ ಕೌಶಿಕ್ ವಿರುದ್ಧ, ಶಿವ ಪ್ರಶಾಂತ್‌ 6-4, 6-4ರಲ್ಲಿ ವಿಷ್ಣು ಮೋಹನ್ ವಿರುದ್ಧ ಗೆದ್ದರು. ಬಾಲಕಿಯರ ವಿಭಾಗದ ಪಂದ್ಯಗಳಲ್ಲಿ ದಿಶಾ ಖಂಡೋಜಿ 6-1, 6-1ರಲ್ಲಿ ಶ್ರೀನಿಧಿ ಚೌಧರಿ ವಿರುದ್ಧ, ಸುಶ್ಮಿತಾ ರವಿ 6-3, 3-0ರಲ್ಲಿ ಆನ್ವಿ ಪುನಂಗಟಿ (ನಿವೃತ್ತಿ) ವಿರುದ್ಧ, ಸ್ನಿಗ್ಧ ಕಾಂತ 6-2, 6-0ರಲ್ಲಿ ಸಂಸ್ಕೃತಿ ಸಂತೋಷ್ ವಿರುದ್ಧ ಗೆದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು