ಶುಕ್ರವಾರ, ಅಕ್ಟೋಬರ್ 23, 2020
21 °C

ಫ್ರೆಂಚ್‌ ಓಪನ್ ಅರ್ಹತಾ ಸುತ್ತಿನಲ್ಲಿ ಸೋತ ಅಂಕಿತಾ ರೈನಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪ್ಯಾರಿಸ್‌: ಭಾರತದ ಅಂಕಿತಾ ರೈನಾ ಅವರು ಫ್ರೆಂಚ್‌ ಓಪನ್ ಟೆನಿಸ್‌ ಟೂರ್ನಿಯ‌ ಅರ್ಹತಾ ಸುತ್ತಿನಿಂದ ಹೊರಬಿದ್ದಿದ್ದಾರೆ. ಗುರುವಾರ ನಡೆದ ಮಹಿಳಾ ಸಿಂಗಲ್ಸ್‌ ಎರಡನೇ ಸುತ್ತಿನ ಪಂದ್ಯದಲ್ಲಿ ಅವರು 3–6, 2–6ರಿಂದ ಜಪಾನ್‌ನ ಕುರುಮಿ ನಾರಾ ಎದುರು ಸೋತರು. ಇದರೊಂದಿಗೆ ಟೂರ್ನಿಯ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಸವಾಲು ಅಂತ್ಯವಾಗಿದೆ.

ಭಾರತದ ಅಗ್ರಕ್ರಮಾಂಕದ ಸಿಂಗಲ್ಸ್‌ ಆಟಗಾರ್ತಿ ಅಂಕಿತಾ, ಒಂದು ತಾಸು 21 ನಿಮಿಷಗಳಲ್ಲಿ ನಾರಾ ಅವರಿಗೆ ಶರಣಾದರು.

‘ನಾನು ಕೆಟ್ಟದಾಗೇನೂ ಆಡಲಿಲ್ಲ. ಸರ್ವಿಸ್‌ ಗೇಮ್‌ನಲ್ಲಿ ಅವಕಾಶಗಳಿದ್ದವು. ಆದರೆ ನಾರಾ ಅವರ ಆಟ ಶ್ರೇಷ್ಠವಾಗಿತ್ತು. ವಾತಾವರಣವೂ ನನಗೆ ಪೂರಕವಾಗಿರಲಿಲ್ಲ‘ ಎಂದು ಪಂದ್ಯದ ಬಳಿಕ ಅಂಕಿತಾ ಹೇಳಿದರು.

ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಿದ್ದ ಭಾರತದ ಸುಮಿತ್‌ ನಗಾಲ್‌, ರಾಮಕುಮಾರ್‌ ರಾಮನಾಥನ್‌ ಹಾಗೂ ಪ್ರಜ್ಞೇಶ್‌ ಗುಣೇಶ್ವರನ್‌ ಅವರು ಈಗಾಗಲೇ ಸೋತು ನಿರ್ಗಮಿಸಿದ್ದಾರೆ.

ರೋಹನ್‌ ಬೋಪಣ್ಣ ಹಾಗೂ ದಿವಿಜ್‌ ಶರಣ್‌ ಅವರು ತಮ್ಮ ಜೊತೆಗಾರರೊಂದಿಗೆ ಡಬಲ್ಸ್‌ ವಿಭಾಗದಲ್ಲಿ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು