ಭಾನುವಾರ, ಸೆಪ್ಟೆಂಬರ್ 22, 2019
22 °C
ಐಟಿಎಫ್‌ ಮಹಿಳಾ ಟೆನಿಸ್‌ ಟೂರ್ನಿ

ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟ ಅಂಕಿತಾ ರೈನಾ

Published:
Updated:
Prajavani

ನವದೆಹಲಿ: ಭಾರತದ ಅಗ್ರಶ್ರೇಯಾಂಕಿತ ಸಿಂಗಲ್ಸ್‌ ಆಟಗಾರ್ತಿ ಅಂಕಿತಾ ರೈನಾ ಚೀನಾದ ಲುವಾನ್‌ನಲ್ಲಿ ನಡೆಯುತ್ತಿರುವ ಐಟಿಎಫ್‌ ಮಹಿಳಾ ಟೆನಿಸ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಚೀನಾದ ಆಟಗಾರ್ತಿ ಯು ಯುವಾನ್‌ ಅವರನ್ನು ಅಂಕಿತಾ ನೇರ ಸೆಟ್‌ಗಳಿಂದ ಮಣಿಸಿದರು. ಈ ಟೂರ್ನಿಯು 60,000 ಅಮೆರಿಕನ್‌ ಡಾಲರ್‌ ಬಹುಮಾನ ಮೊತ್ತದ್ದಾಗಿದೆ.

ವಿಶ್ವದಲ್ಲಿ 175ನೇ ಕ್ರಮಾಂಕ ಹೊಂದಿರುವ 26 ವರ್ಷದ ಅಂಕಿತಾ, 6–2, 6–3 ನೇರ ಸೆಟ್‌ಗಳಿಂದ ಎದುರಾಳಿಗೆ ಸೋಲಿನ ರುಚಿ ತೋರಿಸಿದರು. ಪಂದ್ಯದ ಬಳಿಕ ಮಾತನಾಡಿದ ಭಾರತದ ಆಟಗಾರ್ತಿ, ’ಯುವಾನ್‌ ಆಕ್ರಮಣಕಾರಿಯಾಗಿದ್ದರು ಆದರೆ ನಾನು ಉತ್ತಮವಾಗಿ ಆಡಿದೆ. ಸ್ಕೋರ್‌ ಏಕಪಕ್ಷೀಯವಾಗಿ ಕಂಡುಬಂದರೂ ಪಂದ್ಯ ಪೈಪೋಟಿಯುತವಾಗಿತ್ತು’ ಎಂದರು.

ಆನ್ನಿಂಗ್‌ ಟೂರ್ನಿಯಲ್ಲಿ ಮೂರು ಬಾರಿಯ ಗ್ರ್ಯಾನ್‌ಸ್ಲಾಮ್‌ ಚಾಂಪಿಯನ್‌ ಸಮಂತಾ ಸ್ಟೋಸರ್‌ ಅವರನ್ನು ಅಂಕಿತಾ ಮಣಿಸಿದ್ದರು. ಇಸ್ತಾನ್‌ಬುಲ್‌ ಟೂರ್ನಿಯಲ್ಲಿ ಫೈನಲ್‌ರವರೆಗೆ ಪ್ರವೇಶ ಪಡೆದಿದ್ದರು. 

ಲುವಾನ್‌ ಟೂರ್ನಿಯ ಮುಂದಿನ ಪಂದ್ಯದಲ್ಲಿ ಅಂಕಿತಾ ಹಾಂಕಾಂಗ್‌ನ ಯುಡೈಸ್‌ ಚೊಂಗ್‌ ಅವರನ್ನು ಎದುರಿಸಲಿದ್ದಾರೆ. ಯುಡೈಸ್‌ ವಿಶ್ವ ಕ್ರಮಾಂಕದಲ್ಲಿ 497ನೇ ಸ್ಥಾನ ಹೊಂದಿದ್ದಾರೆ.

Post Comments (+)