ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ಪ್ರಜ್ಞೇಶ್‌ ಶುಭಾರಂಭ

Last Updated 15 ಅಕ್ಟೋಬರ್ 2018, 14:31 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌ ಚೀನಾದ ನಿಂಗ್ಬೊದಲ್ಲಿ ನಡೆಯುತ್ತಿರುವ ಎಟಿಪಿ ಚಾಲೆಂಜರ್‌ ಟೆನಿಸ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಮೂರನೇ ಶ್ರೇಯಾಂಕದ ಆಟಗಾರ ರಾಮಕುಮಾರ್‌ ರಾಮನಾಥನ್‌ ಮೊದಲ ಸುತ್ತಿನಲ್ಲೇ ಸೋತಿದ್ದಾರೆ.

ಸೋಮವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಹಣಾಹಣಿಯಲ್ಲಿ ಪ್ರಜ್ಞೇಶ್‌ 7–6, 6–2ರಲ್ಲಿ ಮೊಹಮ್ಮದ್‌ ಸಫಾವತ್‌ ಅವರನ್ನು ಮಣಿಸಿದರು. ಈ ಹೋರಾಟ ಒಂದು ಗಂಟೆ 29 ನಿಮಿಷ ನಡೆಯಿತು.

ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಪ್ರಜ್ಞೇಶ್‌, ಚೀನಾದ ಜೇ ಲಿ ಇನ್‌ ವಿರುದ್ಧ ಸೆಣಸಲಿದ್ದಾರೆ.

ಇನ್ನೊಂದು ಪಂದ್ಯದಲ್ಲಿ ರಾಮಕುಮಾರ್‌ 6–1, 6–7, 6–7ರಲ್ಲಿ ದಕ್ಷಿಣ ಕೊರಿಯಾದ ಯುನ್‌ಸೆಯೊಂಗ್ ಚುಂಗ್‌ ಎದುರು ಮಣಿದರು. ಈ ಹೋರಾಟ ಎರಡು ಗಂಟೆ 16 ನಿಮಿಷ ನಡೆಯಿತು.

ಮೊದಲ ಸೆಟ್‌ನಲ್ಲಿ ಗೆದ್ದ ರಾಮಕುಮಾರ್‌, ನಂತರದ ಎರಡು ಸೆಟ್‌ಗಳಲ್ಲೂ ಛಲದಿಂದ ಹೋರಾಡಿದರು. ಆದರೆ ‘ಟೈ ಬ್ರೇಕರ್‌’ನಲ್ಲಿ ತಪ್ಪುಗಳನ್ನು ಮಾಡಿ ಕೈಸುಟ್ಟುಕೊಂಡರು.

ಅರ್ಹತಾ ಸುತ್ತಿನ ಹಣಾಹಣಿಯಲ್ಲಿ ಸಾಕೇತ್‌ ಮೈನೇನಿ 6–0, 6–2ರಲ್ಲಿ ರ‍್ಯೋಟೊ ತನುಮಾ ಎದುರು ಗೆದ್ದರು.

ಮುಖ್ಯ ಹಂತದ ಮೊದಲ ಸುತ್ತಿನಲ್ಲಿ ಸಾಕೇತ್, ಜಪಾನ್‌ನ ರೆಂಟಾ ತೋಕುದಾ ಎದುರು ಆಡಲಿದ್ದಾರೆ. ಸುಮಿತ್‌ ನಗಾಲ್‌ ಅವರು ಇಟಲಿಯ ಥಾಮಸ್‌ ಫಾಬಿಯಾನೊ ವಿರುದ್ಧ ಸೆಣಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT