ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಓಪನ್‌: ಪ್ರಜ್ಞೇಶ್‌ ಸವಾಲು ಅಂತ್ಯ

Last Updated 14 ಜನವರಿ 2019, 17:00 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌ ಅವರ ಚೊಚ್ಚಲ ಗ್ರಾನ್‌ಸ್ಲಾಮ್‌ ಪ್ರಶಸ್ತಿಯ ಕನಸು ಸೋಮವಾರ ಕಮರಿತು.

ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಮೊದಲ ಸಲ ಮುಖ್ಯ ಸುತ್ತಿಗೆ ಅರ್ಹತೆ ಗಳಿಸಿದ್ದ ಪ್ರಜ್ಞೇಶ್‌, ಆರಂಭಿಕ ಪಂದ್ಯದಲ್ಲೇ ನಿರಾಸೆ ಕಂಡರು.

ಅಮೆರಿಕದ ಫ್ರಾನ್ಸೆಸ್‌ ತಿಯಾಫೊ 7–6, 6–3, 6–3ರಲ್ಲಿ ಭಾರತದ ಆಟಗಾರರನ್ನು ಸೋಲಿಸಿದರು. ಈ ಹೋರಾಟ ಒಂದು ಗಂಟೆ 52 ನಿಮಿಷ ನಡೆಯಿತು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 39ನೇ ಸ್ಥಾನದಲ್ಲಿರುವ ತಿಯಾಫೊ ಎದುರು ಪ್ರಜ್ಞೇಶ್‌, ಮೊದಲ ಸೆಟ್‌ನಲ್ಲಿ ಮಿಂಚಿನ ಆಟ ಆಡಿ ಗಮನ ಸೆಳೆದರು. ಆದರೆ ‘ಟೈ ಬ್ರೇಕರ್‌’ನಲ್ಲಿ ಅವರಿಗೆ ನಿರಾಸೆ ಎದುರಾಯಿತು.

ಎರಡು ಮತ್ತು ಮೂರನೇ ಸೆಟ್‌ಗಳಲ್ಲಿ ಭಾರತದ ಆಟಗಾರ ಮಂಕಾದರು. ತಿಯಾಫೊ ಅವರ ಶರವೇಗದ ಸರ್ವ್‌ ಮತ್ತು ಬಲಿಷ್ಠ ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ಗಳಿಗೆ ಪ್ರಜ್ಞೇಶ್‌ ನಿರುತ್ತರರಾದರು.

ಮಹಿಳಾ ಸಿಂಗಲ್ಸ್‌ ವಿಭಾಗದ ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಿದ್ದ ಅಂಕಿತಾ ರೈನಾ ಮತ್ತು ಕರ್ಮನ್‌ ಕೌರ್‌ ಕ್ರಮವಾಗಿ ಎರಡು ಮತ್ತು ಮೊದಲ ಸುತ್ತಿನಲ್ಲಿ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT