ಬೆಂಗಳೂರು: ಬೆಲರೂಸ್ನ ಇಲ್ಯಾ ಇವಾಶ್ಕ ಮತ್ತು ಬ್ರಿಟನ್ನ ಹಮಿಶ್ ಸ್ಟುವರ್ಟ್ ಅವರು ಶುಕ್ರವಾರ ನಡೆದ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಚೆಂಡನ್ನು ಬಿರುಸಾಗಿ ಹೊಡೆದಟ್ಟುವ ಪೈಪೋಟಿಯಲ್ಲಿ ತೊಡಗಿದಂತೆ ಕಂಡುಬಂದಿತು. ಅಂತಿಮವಾಗಿ ಆಟವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿದ ಇವಾಶ್ಕ ಜಯಶಾಲಿಯಾಗಿ ಎಸ್.ಎಂ.ಕೃಷ್ಣ ಸ್ಮರಣಾರ್ಥ ಎಟಿಪಿ ಚಾಲೆಂಜರ್ ಟೂರ್ನಿಯ ಫೈನಲ್ ತಲುಪಿದರು

ಕಬ್ಬನ್ಪಾರ್ಕ್ನ ಎಸ್.ಎಂ.ಕೃಷ್ಣ ಟೆನಿಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಶ್ರೇಯಾಂಕರಹಿತ ಆಟಗಾರ ಇವಾಶ್ಕ 6–3, 3–6, 6–2 ರಿಂದ ಮೂರನೇ ಶ್ರೇಯಾಂಕದ ಹಮಿಶ್ ಅವರನ್ನು ಸೋಲಿಸಿದರು. ಈ ಪಂದ್ಯ 2 ಗಂಟೆ 7 ನಿಮಿಷ ನಡೆಯಿತು.

ಹಿಂದೊಮ್ಮೆ ವಿಶ್ವ ಕ್ರಮಾಂಕದಲ್ಲಿ ಅಗ್ರ 50ರೊಳಗೆ ಸ್ಥಾನ ಪಡೆದಿದ್ದ 32 ವರ್ಷ ವಯಸ್ಸಿನ ಇವಾಶ್ಕ ಸತತ ಎರಡನೇ ವಾರ ಚಾಲೆಂಜರ್ ಟೂರ್ನಿಯ ಸೆಮಿಫೈನಲ್ ತಲುಪಿದರು. ಅವರು ತಮ್ಮ ಸರ್ವ್ಗಳಲ್ಲಿ ಕರಾರುವಾಕ್ ಆಗಿದ್ದರು. ಬಿರುಸಾದ ಗ್ರೌಂಡ್ಸ್ಟ್ರೋಕ್ಗಳು ಅವರಿಗೆ ಹೇರಳ ಪಾಯಿಂಟ್ಗಳನ್ನು ತಂದುಕೊಟ್ಟವು.

ಹಮಿಶ್, ಎದುರಾಳಿಯ ಆಟದ ವೇಗವನ್ನು ನಿಭಾಯಿಸುವಲ್ಲಿ ಪರದಾಡಿದರು. ಹೀಗಾಗಿ ಇವಾಶ್ಕ ಅವರಿಗೆ ಮೇಲುಗೈ ಸಾಧಿಸಲು ಸಾಧ್ಯವಾಯಿತು. ಎರಡನೇ ಸೆಟ್ನಲ್ಲಿ ತಂತ್ರ ಬದಲಾಯಿಸಿ ಹೆಚ್ಚು ರ್ಯಾಲಿ ಮತ್ತು ದೂರದ ಹೊಡೆತಗಳನ್ನು ಪ್ರಯೋಗಿಸಿದ ಬ್ರಿಟನ್ನ ಆಟಗಾರ ಎದುರಾಳಿಯ ಮೇಲುಗೈಗೆ ಕೆಲಕಾಲ ತಡೆಯೊಡ್ಡಿದರು. ಕೆಲವು ಲೈನ್ ತೀರ್ಪುಗಳು ಇವಾಶ್ಕ ಅವರ ಏಕಾಗ್ರತೆಗೆ ಸವಾಲೊಡ್ಡಿದವು.

6ಅಡಿ4 ಇಂಚು ಎತ್ತರದ ಬೆಲರೂಸ್ನ ಆಟಗಾರ ಅಂತಿಮ ಸೆಟ್ನಲ್ಲಿ ಸಂಯಮ ವಹಿಸಿ ಆಡಿದರು. ಆರು ಮತ್ತು ಎಂಟನೇ ಗೇಮ್ನಲ್ಲಿ ಎದುರಾಳಿಯ ಸರ್ವ್ ಮುರಿದು ಪಂದ್ಯ ಗೆದ್ದರು.

ವಿಶ್ವ ಕ್ರಮಾಂಕದಲ್ಲಿ ಸದ್ಯ 631ನೇ ಸ್ಥಾನದಲ್ಲಿರುವ ಇವಾಶ್ಕ ಅವರು ಫೈನಲ್ ಫಂದ್ಯದಲ್ಲಿ ರಷ್ಯಾದ ಪೀಟರ್ ಬರ್ ಬಿರ್ಯುಕೋವ್ ಅವರನ್ನು ಎದುರಿಸಲಿದ್ದಾರೆ. 24 ವರ್ಷ ವಯಸ್ಸಿನ ಬಿರ್ಯುಕೋವ್ ಇನ್ನೊಂದು ಸೆಮಿಫೈನಲ್ನಲ್ಲಿ ಎರಡನೇ ಶ್ರೇಯಾಂಕದ ಅಲಸ್ಟರ್ ಗ್ರೇ ಅವರ ಸವಾಲನ್ನು 3–6, 6–4, 7–6 (5) ರಿಂದ ಬದಿಗೊತ್ತಿದರು.

ಡಬಲ್ಸ್: ಅದಿಲ್ ಕಲ್ಯಾಣಪುರ– ಮುಕುಂದ ಶಶಿಕುಮಾರ್ ಜೋಡಿ ಡಬಲ್ಸ್ ಸೆಮಿಫೈನಲ್ನಲ್ಲಿ ಎರಡನೇ ಶ್ರೇಯಾಂಕದ ಚಾರ್ಲ್ಸ್ ಬ್ಯಾರಿ– ಜೋಶುವಾ ಚಾರ್ಲ್ಟನ್ (ಆಸ್ಟ್ರೇಲಿಯಾ) ಅವರನ್ನು ಸೋಲಿಸಿತು. ಇನ್ನೊಂದು ಸೆಮಿಫೈನಲ್ನಲ್ಲಿ ಪೀಟರ್ ಬರ್ ಬಿರ್ಯುಕೋವ್– ಗ್ರಿಗೊರಿ ಲೊಮಾಕಿನ್ (ಕಜಾಕಸ್ತಾನ) ಜೋಡಿ 6–3, 6–4 ರಿಂದ ನಿಕಿ ಕಲಿಯಂಡ ಪೂಣಚ್ಚ– ಸಾಕೇತ್ ಮೈನೇನಿ ಜೋಡಿಯನ್ನು ಹಿಮ್ಮೆಟ್ಟಿಸಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-51-1360268028

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.