ಬೆಂಗಳೂರು: ಚೆನ್ನೈನ ಮುಕುಂದ್ ಶಶಿಕುಮಾರ್ ಅವರು ಇಲ್ಲಿ ನಡೆಯುತ್ತಿರುವ ಎಸ್.ಎಂ.ಕೃಷ್ಣ ಸ್ಮರಣಾರ್ಥ ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್ನಲ್ಲಿ ಹೊರಬಿದ್ದರು. ಇದರೊಂದಿಗೆ ಸಿಂಗಲ್ಸ್ನಲ್ಲಿ ಭಾರತದ ಸವಾಲು ಅಂತ್ಯಗೊಂಡಿತು.

ಕಬ್ಬನ್ ಪಾರ್ಕ್ನ ಎಸ್.ಎಂ. ಕೃಷ್ಣ ಟೆನಿಸ್ ಕ್ರೀಡಾಂಗಣದಲ್ಲಿಗುರುವಾರ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಅಲಸ್ಟೇರ್ ಗ್ರೇ 6-2, 5-7, 7-6 (3)ರ ಮೂರು ಸೆಟ್ಗಳ ಹೋರಾಟದಲ್ಲಿ ಮುಕುಂದ್ ಅವರನ್ನು ಹಿಮ್ಮೆಟ್ಟಿಸಿದರು. ಈ ರೋಚಕ ಪಂದ್ಯ ಎರಡು ಗಂಟೆ 40 ನಿಮಿಷದವರೆಗೆ ಸಾಗಿತು.

ವಿಶ್ವ ಕ್ರಮಾಂಕದಲ್ಲಿ 536ನೇ ಸ್ಥಾನದಲ್ಲಿರುವ ಮುಕುಂದ್ ಆರಂಭದಲ್ಲಿ ಲಯಕ್ಕಾಗಿ ಪರದಾಡಿದರು. ಇದರ ಲಾಭ ಪಡೆದ ಬ್ರಿಟನ್ನ ಅಲಸ್ಟೇರ್ ಮೊದಲ ಸೆಟ್ ಅನ್ನು ನಿರಾಯಾಸವನ್ನು ಗೆದ್ದುಕೊಂಡರು. ಆದರೆ ಎರಡನೇ ಸೆಟ್ನಲ್ಲಿ ಭಾರತದ ಆಟಗಾರ ಪುಟಿದೆದ್ದರು. ಚುರುಕಾದ ಸರ್ವ್ ಮಾಡುವ ಜೊತೆಗೆ ಫೋರ್ಹ್ಯಾಂಡ್ ಹೊಡೆತಗಳಲ್ಲಿ ಯಶಸ್ಸು ಸಾಧಿಸಿದ ಅವರು ಪಂದ್ಯವನ್ನು ನಿರ್ಣಾಯಕ ಸೆಟ್ಗೆ ಕೊಂಡೊಯ್ದರು.

ಮೂರನೇ ಸೆಟ್ನಲ್ಲಿ ಉಭಯ ಆಟಗಾರರಿಂದ ಸಮಬಲದ ಹೋರಾಟ ಕಂಡುಬಂತು. ಆದರೆ, ಅಂತಿಮವಾಗಿ ಟೈಬ್ರೇಕರ್ನಲ್ಲಿ ಬ್ರಿಟನ್ ಆಟಗಾರ ಮೇಲುಗೈ ಸಾಧಿಸಿ, ಸೆಮಿಫೈನಲ್ಗೆ ಮುನ್ನಡೆದರು. ಮುಕುಂದ್ ಪಂದ್ಯದಲ್ಲಿ ಒಟ್ಟು 14 ಏಸ್ಗಳು ಸಿಡಿಸಿದರು. ಆದರೆ, ಬ್ರೇಕ್ ಪಾಯಿಂಟ್ನಲ್ಲಿ ಪದೇ ಪದೇ ಎಡವಿದ್ದು ಅವರಿಗೆ ದುಬಾರಿಯಾಯಿತು.

ಅಲಸ್ಟೇರ್ ನಾಲ್ಕರ ಘಟ್ಟದ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಪೀಟರ್ ಬಾರ್ ಬಿರ್ಯುಕೋವ್ ಅವರನ್ನು ಎದುರಿಸಲಿದ್ದಾರೆ. ರಷ್ಯಾದ ಪೀಟರ್ 6-2, 5-7, 6-3ರಿಂದ ಮಲೇಷ್ಯಾದ ಕಾಂಗ್ ಲಿಯಾಂಗ್ ಅವರನ್ನು ಮಣಿಸಿದರು.

ಮೂರನೇ ಶ್ರೇಯಾಂಕದ ಹ್ಯಾಮಿಶ್ ಸ್ಟೀವರ್ಟ್ (ಬ್ರಿಟನ್) 6-2, 6-1ರಿಂದ ಆರನೇ ಶ್ರೇಯಾಂಕದ ಒಗ್ನೆಂಜನ್ ಮಿಲಿಕ್ (ಸರ್ಬಿಯಾ) ಅವರನ್ನು ಸೋಲಿಸಿದರು. ಹ್ಯಾಮಿಶ್ ಸೆಮಿಫೈನಲ್ನಲ್ಲಿ ಬೆಲರೂಸ್ನ ಇಲ್ಯಾ ಇವಾಶ್ಕ ಅವರನ್ನು ಎದುರಿಸುವರು. ಇವಾಶ್ಕ 6-1, 6-2ರಿಂದ ಮೆಕ್ಸಿಕೊದ ಅಲೆಕ್ಸ್ ಹೆರ್ನಾಂಡೆಜ್ ಅವರನ್ನು ಸೋಲಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-51-1854712080

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.