ಬೆಂಗಳೂರು: ರಷ್ಯಾದ ಪೀಟರ್ ಬರ್ ಬಿರ್ಯುಕೋವ್ ಅವರು ಶನಿವಾರ ನಡೆದ ಫೈನಲ್ನಲ್ಲಿ ಬೆಲರೂಸ್ನ ಇಲ್ಯಾ ಇವಾಶ್ಕ ಅವರನ್ನು ಮಣಿಸಿ ಎಸ್.ಎಂ.ಕೃಷ್ಣ ಸ್ಮರಣಾರ್ಥ ಎಟಿಪಿ ಚಾಲೆಂಜರ್ ಟೂರ್ನಿಯ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡರು.

ಕಬ್ಬನ್ಪಾರ್ಕ್ನ ಎಸ್.ಎಂ.ಕೃಷ್ಣ ಟೆನಿಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಪೀಟರ್ 7-6 (0), 4-6,6-4ರ ಮೂರು ಸೆಟ್ಗಳ ಹಣಾಹಣಿಯಲ್ಲಿ ಶ್ರೇಯಾಂಕ ರಹಿತ ಆಟಗಾರ ಇವಾಶ್ಕ ಅವರನ್ನು ಹಿಮ್ಮೆಟ್ಟಿಸಿದರು. ಈ ಗೆಲುವಿನೊಂದಿಗೆ 50 ಎಟಿಪಿ ಪಾಯಿಂಟ್ಸ್ ಮತ್ತು ₹9.09 ಲಕ್ಷ ಬಹುಮಾನ ಪಡೆದರು.

ಎರಡು ವಾರಗಳ ಹಿಂದೆ ಇದೇ ಕ್ರೀಡಾಂಗಣದಲ್ಲಿ ನಡೆದ ಬೆಂಗಳೂರು ಓಪನ್ ಟೂರ್ನಿಯ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದ 24 ವರ್ಷದ ಪೀಟರ್ ಅವರು ತನ್ನ ತಪ್ಪುಗಳನ್ನು ತಿದ್ದಿಕೊಂಡು ವೃತ್ತಿಜೀವನದ ಮೊದಲ ಎಟಿಪಿ ಪ್ರಶಸ್ತಿಗೆ ಮುತ್ತಿಕ್ಕಿದರು. ಈ ಗೆಲುವಿನೊಂದಿಗೆ ಅವರು ಎಟಿಪಿ ಕ್ರಮಾಂಕದಲ್ಲಿ 335ನೇ ಸ್ಥಾನದಿಂದ 268ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

ಭಾರತದ ಅದಿಲ್ ಕಲ್ಯಾಣಪುರ– ಮುಕುಂದ ಶಶಿಕುಮಾರ್ ಜೋಡಿಯು ಡಬಲ್ಸ್ ಪ್ರಶಸ್ತಿಯನ್ನುಗೆದ್ದುಕೊಂಡಿತು. ಫೈನಲ್ ಹಣಾಹಣಿಯಲ್ಲಿ ಈ ಜೋಡಿಯು (3) 6-7, 6-4, 10-3ರಿಂದ ಪೀಟರ್ ಬರ್ ಬಿರ್ಯುಕೋವ್– ಗ್ರಿಗೊರಿ ಲೊಮಾಕಿನ್ (ಕಜಾಕಸ್ತಾನ) ಅವರನ್ನು ಸೋಲಿಸಿತು. ಭಾರತದ ಆಟಗಾರರು 50 ಎಟಿಪಿ ಪಾಯಿಂಟ್ಸ್ ಮತ್ತು ₹2.85 ಲಕ್ಷ ಬಹುಮಾನ ಗೆದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-4-1602758874

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.