ಬೆಂಗಳೂರು: ಕಬ್ಬನ್ ಪಾರ್ಕ್ನ ಎಸ್.ಎಂ. ಕೃಷ್ಣ ಟೆನಿಸ್ ಕ್ರೀಡಾಂಗಣದಲ್ಲಿ ಸೋಮವಾರ ‘ಎಸ್.ಎಂ. ಕೃಷ್ಣ ಸ್ಮರಣಾರ್ಥ ಓಪನ್’ ಎಟಿಪಿ ಚಾಲೆಂಜರ್ನ ಮುಖ್ಯಸುತ್ತಿನ ಮೊದಲ ದಿನದ ಪಂದ್ಯಗಳಿಗೆ ಮಳೆಯಿಂದಾಗಿ ಅಡಚಣೆ ಉಂಟಾಯಿತು. ಐದು ಸಿಂಗಲ್ಸ್ ಮತ್ತು ಒಂದು ಡಬಲ್ಸ್ ಪಂದ್ಯಗಳನ್ನು ರದ್ದುಗೊಳಿಸಲಾಯಿತು.

ಪುರುಷರ ಸಿಂಗಲ್ಸ್ನ 32ರ ಘಟ್ಟದ ಪಂದ್ಯದಲ್ಲಿ ಭಾರತದ ಕರಣ್ ಸಿಂಗ್ ನಿರ್ಣಾಯಕ ಹೋರಾಟದಲ್ಲಿ ತೊಡಗಿದ್ದರು. ಮಳೆಯಿಂದಾಗಿ ಆಟವನ್ನುಅರ್ಧದಲ್ಲೇ ಸ್ಥಗಿತಗೊಳಿಸಲಾಯಿತು. ಈ ವೇಳೆಗೆ ಏಳನೇ ಶ್ರೇಯಾಂಕದ ಕರಣ್ 5–5 (30–0) ರಿಂದ ಮಲೇಷ್ಯಾದ ಮಿತ್ಸುಕಿ ವೀ ಕಾಂಗ್ ಲಿಯಾಂಗ್ ವಿರುದ್ಧ ಸಮಬಲದ ಹೋರಾಟ ನಡೆಸಿದ್ದರು.

ಇದಕ್ಕೂ ಮೊದಲು 17 ವರ್ಷದ ಆರಾಧ್ಯ ಕ್ಷಿತಿಜ್ ತಮ್ಮ ಗೆಲುವಿನ ಓಟವನ್ನು ಮುಂದುವರಿಸಿ ಮುಖ್ಯ ಸುತ್ತಿಗೆ ಪ್ರವೇಶಿಸಿದರು. ವೈಲ್ಡ್ಕಾರ್ಡ್ ಪ್ರವೇಶ ಪಡೆದ ಬೆಂಗಳೂರಿನ ಈ ಆಟಗಾರ 7-6 (2), 6-4ರಿಂದ ನಿತಿನ್ ಕುಮಾರ್ ಸಿನ್ಹಾ ಅವರನ್ನು ಸೋಲಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-51-588011904

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.