ಬೆಂಗಳೂರು: ಸ್ಪರ್ಧಾ ಕಣದಲ್ಲಿದ್ದ ಭಾರತದ ಅಗ್ರ ಕ್ರಮಾಂಕದ ಆಟಗಾರ ಕರಣ್ ಸಿಂಗ್ ಮತ್ತು ಮೈಸೂರಿನ ಎಸ್.ಡಿ. ಪ್ರಜ್ವಲ್ ದೇವ್ ಅವರು ಮಂಗಳವಾರ ಕರ್ನಾಟಕ ಓಪನ್ ಎಟಿಪಿ 50 ಚಾಲೆಂಜರ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲೇ ಅಭಿಯಾನ ಮುಗಿಸಿದರು.

ಭರವಸೆಯ ಆಟಗಾರರಾದ ಕೃಷ್ ತ್ಯಾಗಿ, ಮುಕುಂದ್ ಶಶಿಕುಮಾರ್ ಮತ್ತು ಮನೀಶ್ ಸುರೇಶ್ಕುಮಾರ್ ಅವರು ಗೆಲುವಿನೊಂದಿಗೆ ಸಿಂಗಲ್ಸ್ನಲ್ಲಿ ಪ್ರಿ ಕ್ವಾರ್ಟರ್ ಫೈನಲ್ ತಲುಪಿದರು.

ಕಬ್ಬನ್ ಪಾರ್ಕ್ನ ಎಸ್.ಎಂ. ಕೃಷ್ಣ ಟೆನಿಸ್ ಕ್ರೀಡಾಂಗಣದಲ್ಲಿ ನಡೆದ 32ರ ಘಟ್ಟದ ಪಂದ್ಯದಲ್ಲಿ ಜಪಾನ್ನ ಕೊಕೊರೊ ಐಸೊಮುರಾ 7–6 (6), 6–3 ರಿಂದ ಆರನೇ ಶ್ರೇಯಾಂಕದ ಕರಣ್ ಅವರಿಗೆ ಆಘಾತ ನೀಡಿದರು. ಹರಿಯಾಣದ ಆಟಗಾರ ಮೊದಲ ಸೆಟ್ನಲ್ಲಿ ತೀವ್ರ ಪೈಪೋಟಿ ನೀಡಿ, ಟೈಬ್ರೇಕರ್ನಲ್ಲಿ ಸೋತರು. ಎರಡನೇ ಸೆಟ್ನಲ್ಲಿ ಜಪಾನ್ ಆಟಗಾರ ನಿರಾಯಾಸವಾಗಿ ಗೆದ್ದು, ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ವೈಲ್ಡ್ ಕಾರ್ಡ್ ಪ್ರವೇಶ ಪಡೆದ ಕ್ರಿಶ್ 6-2, 7-5 ರಿಂದ ಕ್ವಾಲಿಫೈಯರ್ ಆಟಗಾರ ತೈಯೊ ಯಮನಕಾ (ಜಪಾನ್) ಅವರನ್ನು ಮಣಿಸಿದರು. ಸ್ಥಳೀಯ ನೆಚ್ಚಿನ ಆಟಗಾರ ಮುಂದಿನ ಸುತ್ತಿನಲ್ಲಿ ಜಪಾನ್ನ ಯುತಾ ಕವಾಹಶಿ ಅವರನ್ನು ಎದುರಿಸಲಿದ್ದಾರೆ.

ಮುಕುಂದ್ 6-3, 7-6 (1) ರಿಂದ ಮಲೇಷ್ಯಾದ ಮಿತ್ಸುಕಿ ವೀ ಕಾಂಗ್ ಲಿಯಾಂಗ್ ಅವರನ್ನು ಸೋಲಿಸಿದರು. ಹೈದರಾಬಾದ್ನ ಈ ಆಟಗಾರ ಮುಂದಿನ ಸುತ್ತಿನಲ್ಲಿ ಎರಡನೇ ಶ್ರೇಯಾಂಕದ ಹ್ಯಾಮಿಶ್ ಸ್ಟೀವರ್ಟ್ (ಬ್ರಿಟನ್) ಅವರನ್ನು ಎದುರಿಸಲಿದ್ದಾರೆ.

ಮನೀಶ್ 6-4, 7-6 (7) ರಿಂದ ಅಮೆರಿಕದ ಕ್ವಾಲಿಫೈಯರ್ ಆಟಗಾರ ರೋನಿತ್ ಕರ್ಕಿ ಅವರನ್ನು ಹಿಮ್ಮೆಟ್ಟಿ ಸಿದರು. ತಮಿಳುನಾಡಿನ ಈ ಆಟಗಾರ 16ರ ಘಟ್ಟದ ಪಂದ್ಯದಲ್ಲಿ ಬ್ರಿಟನ್ನ ಕ್ವಾಲಿಫೈಯರ್ ಸ್ಪರ್ಧಿ ಅಲಾಸ್ಟೇರ್ ಗ್ರೇ ಅವರೊಂದಿಗೆ ಸೆಣಸಲಿದ್ದಾರೆ.

ಉಳಿದಂತೆ ಅನುಭವಿ ಪ್ರಜ್ವಲ್ ದೇವ್ ಅವರು ತವರಿನಂಗಳದ ಲಾಭ ಪಡೆಯಲು ವಿಫಲರಾದರು. ಅವರು 1-6, 4-6ರಿಂದ ಆಸ್ಟ್ರೇಲಿಯಾದ ಜೋಶುವಾ ಚಾರ್ಟನ್ ಅವರಿಗೆ ಸೋತರು. ದಿಗ್ವಿಜಯ್ ಪ್ರತಾಪ್ ಸಿಂಗ್ (5) 6-7, (5)6-7 ಅಂತರದಲ್ಲಿ ನಾಲ್ಕನೇ ಶ್ರೇಯಾಂಕದ ಫಿಲಿಪ್ ಸೆಕುಲಿಕ್ (ಆಸ್ಟ್ರೇಲಿಯಾ) ವಿರುದ್ಧ ಸೋಲು ಅನುಭವಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-51-1538927409

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.