ಬೆಂಗಳೂರು: ಶಕ್ತಿಶಾಲಿ ಹೊಡೆತಗಳನ್ನು ಆಡಿದ ಅಗ್ರ ಶ್ರೇಯಾಂಕದ ಆಟಗಾರ ಕೀಗನ್ ಸ್ಮಿತ್ ನೇರ ಸೆಟ್ಗಳಿಂದ ನಾಲ್ಕನೇ ಶ್ರೇಯಾಂಕದ ಫಿಲಿಪ್ ಸೆಕುಲಿಕ್ ಅವರನ್ನು ಸೋಲಿಸಿ ಕರ್ನಾಟಕ ಓಪನ್ ಎಟಿಪಿ 50 ಚಾಲೆಂಜರ್ ಟೂರ್ನಿಯಲ್ಲಿ ಶನಿವಾರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು.

ಅಮೆರಿಕದ ಕೀಗನ್ ಅವರು, ಎಸ್.ಎಂ.ಕೃಷ್ಣ ಟೆನಿಸ್ ಕ್ರೀಡಾಂಗಣದಲ್ಲಿ ಒಂದು ಗಂಟೆ 20 ನಿಮಿಷಗಳ ಫೈನಲ್ನಲ್ಲಿ ಆಸ್ಟ್ರೇಲಿಯಾದ ಎದುರಾಳಿಗೆ ಚೇತರಿಸುವ ಅವಕಾಶ ನೀಡದೇ 6–2, 7–5 ರಿಂದ ಪಂದ್ಯ ಗೆದ್ದುಕೊಂಡರು.

ಸ್ಮಿತ್ ಅವರು ಟ್ರೋಫಿ, ₹9.12 ಲಕ್ಷ ನಗದು ಬಹುಮಾನದ ಜೊತೆಗೆ 50 ಎಟಿಪಿ ರ್ಯಾಂಕಿಂಗ್ ಪಾಯಿಂಟ್ಸ್ ಗಳಿಸಿದರು. ರನ್ನರ್ ಅಪ್ ಸೆಕುಲಿಕ್ ಅವರ ಖಾತೆಗೆ 25 ಎಟಿಪಿ ಪಾಯಿಂಟ್ಸ್ ಮತ್ತು ₹5.28 ಲಕ್ಷ ನಗದು ಬಹುಮಾನ ಸೇರಿತು.

ನಿಕಿ ಪೂಣಚ್ಚ– ಸಾಕೇತ್ಗೆ ಪ್ರಶಸ್ತಿ: ಇದಕ್ಕೆ ಮೊದಲು ಭಾರತದ ನಿಕಿ ಕಲಿಯಂಡ ಪೂಣಚ್ಚ ಮತ್ತು ಸಾಕೇತ್ ಮೈನೇನಿ ಅವರು ಫೈನಲ್ನಲ್ಲಿ ನೇರ ಸೆಟ್ಗಳಿಂದ ಪೀಟರ್ ಬರ್ ಬಿರ್ಯುಕೋವ್– ಗ್ರಿಗೋರಿ ಲೊಮಾಕಿನ್ ಅವರನ್ನು ಸೋಲಿಸಿ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡರು.

ವಿಜೇತ ಭಾರತದ ಜೋಡಿ 50 ಎಟಿಪಿ ಪಾಯಿಂಟ್ಸ್ ಜೊತೆಗೆ ₹2.86 ನಗದು ಹಾಗೂ ರನ್ನರ್ ಅಪ್ ಜೋಡಿಗೆ 30 ಎಟಿಪಿ ಪಾಯಿಂಟ್ಸ್ ಮತ್ತು ₹1.67 ಲಕ್ಷ ಬಹುಮಾನ ದೊರೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-51-532172404

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.