ಬೆಂಗಳೂರು: ನಗರದ ಉದಯೋನ್ಮುಖ ಪ್ರತಿಭೆ ಕ್ರಿಶ್ ತ್ಯಾಗಿ ತಮ್ಮ ವೃತ್ತಿ ಜೀವನದಲ್ಲಿ ಅತಿ ದೊಡ್ಡ ಗೆಲುವನ್ನು ದಾಖಲಿಸಿದರು. ವೈಲ್ಡ್ಕಾರ್ಡ್ ಮೂಲಕ ಪ್ರವೇಶ ಪಡೆದಿರುವ ಕ್ರಿಶ್, ಕರ್ನಾಟಕ ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ ಎರಡನೇ ಶ್ರೇಯಾಂಕದ ಹಮಿಶ್ ಸ್ಟುವರ್ಟ್ ಅವರನ್ನು ಸೋಲಿಸಿ ಸೆಮಿಫೈನಲ್ಗೆ ದಾಪುಗಾಲಿಟ್ಟರು.

19 ವರ್ಷ ವಯಸ್ಸಿನ ಕ್ರಿಶ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಿರ್ಭೀತ ಆಟವಾಡಿ ವಿಶ್ವ ಕ್ರಮಾಂಕದಲ್ಲಿ 328ನೇ ಸ್ಥಾನದಲ್ಲಿರುವ ಸ್ಟುವರ್ಟ್ ಅವರನ್ನು 7–6 (7), 5–7, 6–4 ರಿಂದ ಸೋಲಿಸಿ ಸೆಮಿಫೈನಲ್ಗೆ ಲಗ್ಗೆಯಿಟ್ಟರು. 1332ನೇ ಸ್ಥಾನದಲ್ಲಿರುವ ಬೆಂಗಳೂರಿನ ಹುಡುಗ, ಬ್ರಿಟನ್ನ ಅನುಭವಿ ಆಟಗಾರನ ಸವಾಲು ಅಂತ್ಯಗೊಳಿಸಲು 2 ಗಂಟೆ 40 ನಿಮಿಷ ಹೋರಾಡಿದರು.

ಹಮಿಶ್ 19 ಏಸ್ಗಳನ್ನು ಸಿಡಿಸಿದರೆ, ಭಾರತದ ಆಟಗಾರ ಒಂದು ಏಸ್ ಮಾತ್ರ ಹಾಕಿದರು. ಆದರೆ ಹೊಡೆತಗಳನ್ನು ನಿಯಂತ್ರಿಸಲು ಪರದಾಡಿದ ಬ್ರಿಟನ್ ಆಟಗಾರ 71 ತಪ್ಪುಗಳನ್ನು ಎಸಗಿದರು. ಕೃಶ್ 35 ತಪ್ಪುಗಳನ್ನು ಮಾಡಿದರು.

‘ಮೊದಲ ಸಲ ಚಾಲೆಂಜರ್ ಸೆಮಿಫೈನಲ್ ತಲುಪಿದ್ದರಿಂದ ತುಂಬಾ ಸಂಸತವಾಗಿದೆ. ಹಿಂದೆಯೂ ಭರ್ಜರಿ ಸರ್ವ್ಗಳನ್ನು ಎದುರಿಸಿದ್ದೆ. ಆದರೆ ಅವುಗಳನ್ನು ಸರಿಯಾಗಿ ನಿಭಾಯಿಸಿದರೆ ಎದುರಾಳಿಯ ಲಯದ ಮೇಲೆ ಪರಿಣಾಮವಾಗುತ್ತದೆ. ನಾನು ನನ್ನ ಆಟದ ಕಡೆಗಷ್ಟೇ ಗಮನಹರಿಸಿದೆ’ ಎಂದು ಕ್ರಿಶ್ ಹೇಳಿದರು.

ಇದಕ್ಕೆ ಮೊದಲು, ಭಾರತದ ಇನ್ನೊಬ್ಬ ಆಟಗಾರ ಮನೀಶ್ ಸುರೇಶಕುಮಾರ್ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಬೆಲರೂಸ್ನ ಇಲ್ಯಾ ಇವಾಶ್ಕಾ ಅವರಿಗೆ 3–6, 3–6 ರಲ್ಲಿ ಮಣಿದರು.

ಅಗ್ರ ಶ್ರೆಯಾಂಕದ ಕೀಗನ್ ಸ್ಮಿತ್ (ಅಮೆರಿಕ) ಅವರು 7–6 (5), 6–3 ರಿಂದ ಐದನೇ ಶ್ರೇಯಾಂಕದ ಒಗನ್ಯೆನ್ ಮಿಲಿಕ್ (ಸರ್ಬಿಯಾ) ಅವರನ್ನು ಸೋಲಿಸಿರು. ನಾಲ್ಕನೇ ಶ್ರೇಯಾಂಕದ ಫಿಲಿಕ್ ಸೆಕುಲಿಕ್ (ಆಸ್ಟ್ರೇಲಿಯಾ) ಅವರು 6–7 (6), 6–3, 6–1 ರಿಂದ ಏಳನೇ ಶ್ರೇಯಾಂಕದ ಮ್ಯಾಕ್ಸಿಮಸ್ ಜೋನ್ಸ್ ಅವರನ್ನು ಮಣಿಸಿದರು. ಸೆಮಿಫೈನಲ್ ಪಂದ್ಯಗಳಲ್ಲಿ ಕೀಗನ್ ಸ್ಮಿತ್, ಇಲ್ಯಾ ಇವಾಶ್ಕಾ ಅವರನ್ನು, ಫಿಲಿಪ್ ಸೆಕುಲಿಕ್, ಕ್ರಿಶ್ ತ್ಯಾಗಿ ಅವರನ್ನು ಎದುರಿಸಲಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-51-535941303

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.