ಬೆಂಗಳೂರು: ವೈಲ್ಡ್ಕಾರ್ಡ್ ಪ್ರವೇಶ ಪಡೆದ ಮನೀಶ್ ಸುರೇಶ್ ಕುಮಾರ್ ಅವರು ಇಲ್ಲಿ ನಡೆಯುತ್ತಿರುವ ಎಸ್.ಎಂ.ಕೃಷ್ಣ ಸ್ಮರಣಾರ್ಥ ಓಪನ್ ಎಟಿಪಿ ಚಾಲೆಂಜರ್ನಲ್ಲಿ ಅಗ್ರ ಶ್ರೇಯಾಂಕದ ಕೀಗನ್ ಸ್ಮಿತ್ ಅವರಿಗೆ ಆಘಾತ ನೀಡಿದರು.

ಕಬ್ಬನ್ ಪಾರ್ಕ್ನ ಎಸ್.ಎಂ. ಕೃಷ್ಣ ಟೆನಿಸ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಸಿಂಗಲ್ಸ್ನ 32ರ ಘಟ್ಟದ ಪಂದ್ಯದಲ್ಲಿ ತಮಿಳುನಾಡಿನ ಮನೀಶ್ 6-4, 2-6, 6-2ರ ಮೂರು ಸೆಟ್ಗಳ ಹೋರಾಟದಲ್ಲಿ ಅಮೆರಿಕದ ಆಟಗಾರನನ್ನು ಹಿಮ್ಮೆಟ್ಟಿಸಿದರು.

ವಿಶ್ವ ಕ್ರಮಾಂಕದಲ್ಲಿ 245ನೇ ಸ್ಥಾನದಲ್ಲಿರುವ ಕೀಗನ್ ಅವರು ಇದೇ ಕ್ರೀಡಾಂಗಣದಲ್ಲಿ ಮೂರು ದಿನಗಳ ಹಿಂದೆಯಷ್ಟೇ ಕರ್ನಾಟಕ ಓಪನ್ ಎಟಿಪಿ 50 ಚಾಲೆಂಜರ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದರು. 737ನೇ ಕ್ರಮಾಂಕದ ಮನೀಶ್ ಅವರು ಕ್ವಾರ್ಟರ್ ಫೈನಲ್ನಲ್ಲಿ ಹೊರಬಿದ್ದಿದ್ದರು.

‘ಕಳೆದ ವಾರ ಚಾಲೆಂಜರ್ ನಲ್ಲಿ ಮೊದಲ ಬಾರಿ ಕ್ವಾರ್ಟರ್ ಫೈನಲ್ ತಲುಪಿದ್ದೆ. ಆಟದ ಮಟ್ಟಕ್ಕೆ ಈಗ ಒಗ್ಗಿಕೊಳ್ಳುತ್ತಿದ್ದೇನೆ’ ಎಂದು ಗೆಲುವಿನ ನಂತರ ಮನೀಶ್ ಪ್ರತಿಕ್ರಿಯಿಸಿದರು.

ಇತರ ಪಂದ್ಯಗಳಲ್ಲಿ ಸಿದ್ಧಾರ್ಥ್ ರಾವತ್ 7-6(4), 6-3ರಿಂದ ಆಸ್ಟ್ರೇಲಿಯಾದ ಒಮರ್ ಜಸಿಕಾ ವಿರುದ್ಧ; ಮುಕುಂದ್ ಶಶಿಕುಮಾರ್ 7-6 (5), 7-6 (5)ರಿಂದ ಥಾಯ್ಲೆಂಡ್ನ ಮ್ಯಾಕ್ಸಿಮಸ್ ಜೋನ್ಸ್ ವಿರುದ್ಧ; ಕ್ರಿಶ್ ತ್ಯಾಗಿ 7-6 (8), 7-6 (4)ರಿಂದ ತೈವಾನ್ನ ಕುವಾನ್-ಯಿ ಲೀ ವಿರುದ್ಧ; ಆದಿತ್ಯ ವಿಶಾಲ್ 6-4, 6-7 (2), 6-4ರಿಂದ ಮೂರನೇ ಶ್ರೇಯಾಂಕದ ಹಮೀಶ್ ಸ್ಟೀವರ್ಟ್ (ಬ್ರಿಟನ್) ಅವರನ್ನು ಮಣಿಸಿ ಎರಡನೇ ಸುತ್ತು ಪ್ರವೇಶಿಸಿದರು.

ಆರಾಧ್ಯ ಕ್ಷಿತಿಜ್ 6–1, 6–2ರಿಂದ ಬ್ರಿಟನ್ನ ಎರಡನೇ ಶ್ರೇಯಾಂಕದ ಅಲೆಸ್ಟರ್ ಗ್ರೇ ವಿರುದ್ಧ ಸೋತರು. ಉಳಿದಂತೆ ಕರಣ್ ಸಿಂಗ್, ಪ್ರಜ್ವಲ್ ದೇವ್, ದಿಗ್ವಿಜಯ್ ಪ್ರತಾಪ್ ಸಿಂಗ್ ಮತ್ತು ನಿತಿನ್ ಕುಮಾರ್ ಸಿನ್ಹಾ ತಮ್ಮ ತಮ್ಮ ಪಂದ್ಯಗಳಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-51-1536442102

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.