ಬೆಂಗಳೂರು: ಭಾರತದ ಮುಕುಂದ್ ಶಶಿಕುಮಾರ್ ಅವರು ಇಲ್ಲಿ ನಡೆಯುತ್ತಿರುವ ಎಸ್.ಎಂ.ಕೃಷ್ಣ ಸ್ಮರಣಾರ್ಥ ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ ಬುಧವಾರ ಕ್ವಾರ್ಟರ್ಫೈನಲ್ ಪ್ರವೇಶಿಸಿದರು. ಅವರನ್ನು ಹೊರತುಪಡಿಸಿ ಭಾರತದ ಇತರ ಆಟಗಾರರ ಹೋರಾಟ 16ರ ಘಟ್ಟದಲ್ಲಿಯೇ ಅಂತ್ಯಗೊಂಡಿತು.

ಚೆನ್ನೈನ 29 ವರ್ಷ ವಯಸ್ಸಿನ ಆಟಗಾರ ಸೆಂಟ್ರಲ್ ಕೋರ್ಟ್ನಲ್ಲಿ ನಡೆದ ಕ್ವಾರ್ಟರ್ಫೈನಲ್ ಹಣಾಹಣಿಯಲ್ಲಿ 6–4, 7–6(1)ರಲ್ಲಿ ನೇರ ಸೆಟ್ಗಳಿಂದ ಜಪಾನ್ನ ತೈಯೊ ಯಮಾನಕ ಅವರನ್ನು ಮಣಿಸಿದರು. 1 ಗಂಟೆ 54 ನಿಮಿಷಗಳವರೆಗೆ ಸಾಗಿದ ಪಂದ್ಯದಲ್ಲಿ ತಾಳ್ಮೆಯಿಂದಲೇ ಆಡಿದ ಮುಕುಂದ್ ಅವರು ಮೊದಲ ಸೆಟ್ಅನ್ನು ಸುಲಭವಾಗಿ ಗೆದ್ದರು. ಟೈಬ್ರೇಕರ್ವರೆಗೆ ಸಾಗಿದ ಎರಡನೇ ಸೆಟ್ಅನ್ನು ಜಯಿಸಲು ಭಾರತದ ಆಟಗಾರ ಬೆವರು ಹರಿಸಬೇಕಾಯಿತು.

ಎರಡನೇ ಶ್ರೇಯಾಂಕದ ಅಲಸ್ಟೇರ್ ಗ್ರೇ (ಬ್ರಿಟನ್) ಅವರು 6–3, 7–6 (2)ರಿಂದ ಜೆಕ್ ಗಣರಾಜ್ಯದ ಡೊಮಿನಿಕ್ ಪಾಲನ್ ಅವರನ್ನು ಸೋಲಿಸಿದರು. ಆ ಮೂಲಕ, ಗುರುವಾರ ನಡೆಯುವ ಎಂಟರ ಘಟ್ಟದಲ್ಲಿ ಮುಕುಂದ್ ಎದುರು ಸೆಣಸಲು ವೇದಿಕೆ ಸಿದ್ಧಪಡಿಸಿಕೊಂಡರು.

ಆದರೆ, ವೈಲ್ಡ್ಕಾರ್ಡ್ ಮೂಲಕ ಪ್ರವೇಶ ಪಡೆದಿದ್ದ ಬೆಂಗಳೂರಿನ ಕ್ರಿಶ್ ತ್ಯಾಗಿ ಅವರು 6–4, 4–6, 3–6ರಿಂದ ಬ್ರಿಟನ್ನ ಹಮಿಶ್ ಸ್ಟುವರ್ಟ್ ಅವರಿಗೆ ಮಣಿದರು.

ಅಗ್ರ ಶ್ರೇಯಾಂಕದ ಆಟಗಾರ ಕೀಗನ್ ಸ್ಮಿತ್ ಅವರಿಗೆ ಆಘಾತ ನೀಡಿದ್ದ ಮನೀಶ್ ಸುರೇಶ್ಕುಮಾರ್ ಅವರ ಹೋರಾಟವೂ ಕ್ವಾರ್ಟರ್ಫೈನಲ್ನಲ್ಲಿ ಯೇ ಅಂತ್ಯಗೊಂಡಿತು. ತಮಿಳುನಾಡಿನ ಆಟಗಾರ 1–6, 1–6ರಿಂದ ಹೆಚ್ಚು ಪ್ರತಿರೋಧ ತೋರದೆ ಬೆಲರೂಸ್ನ ಇಲ್ಯಾ ಇವಾಶ್ಕ ಎದುರು ಸೋತರು. ಸಿದ್ಧಾರ್ಥ್ ರಾವತ್ ಅವರು 3–6, 1–6ರಿಂದ ಆರನೇ ಶ್ರೇಯಾಂಕದ ಆಟಗಾರ, ಸರ್ಬಿಯಾದ ಒಗ್ನೆಂಜನ್ ಮಿಲಿಕ್ ವಿರುದ್ಧ ಪರಾಭವಗೊಂಡರು.

ನಿಕಿ– ಸಾಕೇತ್ ಜೋಡಿ ಮುನ್ನಡೆ: ಕರ್ನಾಟಕದ ನಿಕಿ ಕಲಿಯಂಡ ಪೂಣಚ್ಚ– ಆಂಧ್ರ ಪ್ರದೇಶದ ಸಾಕೇತ್ ಮೈನೇನಿ ಜೋಡಿ ಎಂಟರ ಘಟ್ಟಕ್ಕೆ ಮುನ್ನಡೆಯಿತು. ಈ ಜೋಡಿ 6–2, 6–3ರಿಂದ ಫ್ರಾನ್ಸಿಸ್ ಕ್ಯಾಸಿ ಅಲ್ಕಂತಾರಾ (ಫಿಲಿಪ್ಪೀನ್ಸ್)– ಮ್ಯಾಕ್ಸಿಮಸ್ ಜೋನ್ಸ್ (ಥಾಯ್ಲೆಂಡ್) ಅವರನ್ನು ಹಿಮ್ಮೆಟ್ಟಿಸಿತು.

ಬೆಂಗಳೂರಿನ ಆದಿಲ್ ಕಲ್ಯಾಣಪುರ– ಮುಕುಂದ್ ಜೋಡಿ 6–3, 7–5ರಿಂದ ಡೊಮಿನಿಕ್ ಪಾಲನ್ ಹಾಗೂ ದಿಗ್ವಿಜಯ್ ಪ್ರತಾಪ್ ಸಿಂಗ್ ಅವರನ್ನು ಸೋಲಿಸಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-44-108211565

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.