7

ವಿಂಬಲ್ಡನ್‌ಗೆ ಥಾಮಸ್‌ ಬರ್ಡಿಕ್‌ ಇಲ್ಲ

Published:
Updated:
ಥಾಮಸ್‌ ಬರ್ಡಿಕ್‌

ಪ್ಯಾರಿಸ್‌: ಜೆಕ್‌ ಗಣರಾಜ್ಯದ ಆಟಗಾರ ಥಾಮಸ್‌ ಬರ್ಡಿಕ್‌ ಅವರು ಪ್ರತಿಷ್ಠಿತ ವಿಂಬಲ್ಡನ್‌ ಟೆನಿಸ್‌ ಟೂರ್ನಿಯಲ್ಲಿ ಆಡುತ್ತಿಲ್ಲ. ‘ಮುಂಬರುವ ವಿಂಬಲ್ಡನ್‌ ಟೂರ್ನಿಯಲ್ಲಿ ಭಾಗವಹಿಸಲು ಆಗುತ್ತಿಲ್ಲ. ಈ ವಿಷಯವನ್ನು ‍ಪ್ರಕಟಿಸಲು ಬಹಳ ನೋವಾಗುತ್ತಿದೆ’ ಎಂದು ಬರ್ಡಿಕ್‌ ಟ್ವೀಟ್‌ ಮಾಡಿದ್ದಾರೆ.

‘ಹಿಂದಿನ ಕೆಲ ತಿಂಗಳುಗಳಿಂದ ಬೆನ್ನು ನೋವಿನಿಂದ ಬಳಲುತ್ತಿದ್ದೇನೆ. ವಿಂಬಲ್ಡನ್‌ನಲ್ಲಿ ಆಡಲೇಬೇಕು ಎಂಬ ಕಾರಣದಿಂದ ಎಲ್ಲಾ ಬಗೆಯ ಚಿಕಿತ್ಸೆಗೂ ಒಳಗಾಗಿದ್ದೆ. ಆದರೆ ನೋವು ಕಡಿಮೆಯಾಗಿಲ್ಲ. ಹೀಗಾಗಿ ಅನಿವಾರ್ಯವಾಗಿ ಟೂರ್ನಿಯಿಂದ ಹಿಂದೆ ಸರಿಯುತ್ತಿದ್ದೇನೆ’ ಎಂದು ವಿವರಿಸಿದ್ದಾರೆ.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 19ನೇ ಸ್ಥಾನದಲ್ಲಿರುವ ಬರ್ಡಿಕ್‌ 2010ರ ವಿಂಬಲ್ಡನ್‌ ಟೂರ್ನಿಯಲ್ಲಿ ರನ್ನರ್‌ ಅಪ್‌ ಆಗಿದ್ದರು. ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಅವರು ಸ್ಪೇನ್‌ನ ರಫೆಲ್ ನಡಾಲ್‌ ಎದುರು ಪರಾಭವಗೊಂಡಿದ್ದರು. 2016 ಮತ್ತು 2017ರಲ್ಲಿ ನಡೆದಿದ್ದ ಟೂರ್ನಿಗಳಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದರು. ಈ ಬಾರಿಯ ವಿಂಬಲ್ಡನ್‌ ಟೂರ್ನಿ ಜುಲೈ ಎರಡರಿಂದ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !