ಭೂಪತಿ ನಾಯಕತ್ವಕ್ಕೆ ಕುತ್ತು?

7

ಭೂಪತಿ ನಾಯಕತ್ವಕ್ಕೆ ಕುತ್ತು?

Published:
Updated:
Prajavani

ನವದೆಹಲಿ: ಭಾರತ ಡೇವಿಸ್‌ ಕಪ್‌ ಟೆನಿಸ್‌ ತಂಡದ ಆಟವಾಡದ ನಾಯಕ, ಮಹೇಶ್‌ ಭೂಪತಿ ಅವರ ಸ್ಥಾನಕ್ಕೆ  ಕುತ್ತು ಬರುವ ಸಾಧ್ಯತೆ ಇದೆ.

ಮುಂದಿನ ವಾರ ನಡೆಯುವ ಇಟಲಿ ಎದುರಿನ ವಿಶ್ವ ಗುಂಪಿನ ಪ್ಲೇ ಆಫ್‌ ಹಣಾಹಣಿಯಲ್ಲಿ ಭಾರತ ಆಡಲಿದೆ. ಇದರಲ್ಲಿ ತಂಡ ಸೋತರೆ, ಅಖಿಲ ಭಾರತ ಟೆನಿಸ್‌ ಫೆಡರೇಷನ್‌ (ಎಐಟಿಎ) ಭೂಪತಿ ಅವರನ್ನು ನಾಯಕತ್ವದಿಂದ ತೆಗೆದುಹಾಕಲಿದೆ ಎಂದು ಹೇಳಲಾಗಿದೆ.

ಫೆಬ್ರುವರಿ 1 ಮತ್ತು 2 ರಂದು ಕಲ್ಕತ್ತ ಸೌತ್‌ ಕ್ಲಬ್‌ನಲ್ಲಿ ಉಭಯ ತಂಡಗಳ ನಡುವಣ ಪಂದ್ಯ ನಡೆಯಲಿದೆ. ಇದರಲ್ಲಿ ಗೆದ್ದವರು ನವೆಂಬರ್‌ನಲ್ಲಿ ಮ್ಯಾಡ್ರಿಡ್‌ನಲ್ಲಿ ನಿಗದಿಯಾಗಿರುವ ವಿಶ್ವ ಗುಂಪಿನ ಫೈನಲ್ಸ್‌ಗೆ ಅರ್ಹತೆ ಗಳಿಸಲಿದ್ದಾರೆ.

ಡೇವಿಸ್‌ ಕಪ್‌ನಲ್ಲಿ ಭಾರತ ಮತ್ತು ಇಟಲಿ ಒಟ್ಟು ಐದು ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ ಗೆದ್ದಿರುವುದು ಒಮ್ಮೆ ಮಾತ್ರ.

‘ಇಟಲಿ ಎದುರಿನ ಪಂದ್ಯದ ಬಳಿಕ ಭೂಪತಿ ಅವರ ಒಪ್ಪಂದ ಮುಗಿಯಲಿದೆ. ಆ ಪಂದ್ಯದಲ್ಲಿ ಭಾರತ ಸೋತರೆ ಎಐಟಿಎ, ಮಹೇಶ್‌ ಅವರ ಒಪ್ಪಂದ ನವೀಕರಿಸುವುದಿಲ್ಲ. ಅವರ ಬದಲು ಬೇರೊಬ್ಬರಿಗೆ ನಾಯಕತ್ವದ ಹೊಣೆ ಹೊರಿಸಲಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2017ರ ಏಪ್ರಿಲ್‌ನಲ್ಲಿ ಆನಂದ್‌ ಅಮೃತ್‌ರಾಜ್‌ ಅವರ ಅವಧಿ ಮುಗಿದಿದ್ದರಿಂದ ಭೂಪತಿ ಅವರನ್ನು ನಾಯಕನನ್ನಾಗಿ ನೇಮಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !