ಶನಿವಾರ, ಮೇ 8, 2021
23 °C

ಟೆನಿಸ್‌: ಏಷ್ಯಾ– ಒಷಾನಿಯಾ ಗುಂಪಿನಲ್ಲೇ ಉಳಿದ ಭಾರತ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಜುರ್ಮಲಾ, ಲಾಟ್ವಿಯಾ: ಭಾರತದ ಅಂಕಿತಾ ರೈನಾ ಅವರು ಲಾಟ್ವಿಯಾ ಎದುರು ನಡೆಯುತ್ತಿರುವ ಬಿಲಿ ಜೀನ್ ಕಿಂಗ್ ಕಪ್ ವಿಶ್ವ ಗುಂಪಿನ ಪ್ಲೇ ಆಫ್ ಟೆನಿಸ್ ಟೂರ್ನಿಯ ಮೂರನೇ ಸಿಂಗಲ್ಸ್ ಪಂದ್ಯದಲ್ಲಿ ಸೋಲು ಅನುಭವಿಸಿದರು. ಗೆಲ್ಲಲೇಬೇಕಿದ್ದ ಈ ಪಂದ್ಯದಲ್ಲಿ ಭಾರತದ ಆಟಗಾರ್ತಿಯು 0–6, 6–7ರಿಂದ ಅನಸ್ತೇಸಿಯಾ ಸೆವಾಸ್ತೊವಾ ಎದುರು ಎಡವಿದರು. ಇದರೊಂದಿಗೆ ಟೂರ್ನಿಯಲ್ಲಿ 0–3 ಹಿನ್ನಡೆ ಕಂಡ ಭಾರತ ತಂಡವು ಏಷ್ಯಾ ಒಷಾನಿಯಾ ಗುಂಪಿನಲ್ಲೇ ಉಳಿಯಿತು.

ಟೂರ್ನಿಯ ಇತಿಹಾಸದಲ್ಲಿ ಭಾರತ ಮೊದಲ ಬಾರಿಗೆ ಪ್ಲೇ ಆಫ್‌ನಲ್ಲಿ ಆಡುವ ಅವಕಾಶ ಗಿಟ್ಟಿಸಿತ್ತು.

ಕರ್ಮನ್ ಕೌರ್ ಥಂಡಿ ಅವರು ಶುಕ್ರವಾರ ರಾತ್ರಿ ನಡೆದ ಸಿಂಗಲ್ಸ್ ಹಣಾಹಣಿಯಲ್ಲಿ ಅವರು 4–6, 0–6ರಿಂದ ಅನಸ್ತೇಸಿಯಾ ಸೆವಾಸ್ತೊವಾ ಎದುರು ಎಡವಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು