ನವದೆಹಲಿ: ಭಾರತ ತಂಡವು ಬಿಲ್ಲೀ ಜೀನ್ ಕಿಂಗ್ ಕಪ್ ಟೆನಿಸ್ ಏಷ್ಯಾ/ ಒಷಾನಿಯಾ ಐ ಗುಂಪಿನ ಪಂದ್ಯದಲ್ಲಿ ಶುಕ್ರವಾರ 3–0ಯಿಂದ ಮಂಗೋಲಿಯಾ ತಂಡವನ್ನು ಮಣಿಸಿತು.

ಡಿಎಲ್ಟಿಎ ಕ್ರೀಡಾಂಗಣದಲ್ಲಿ ನಡೆದ ಮೊದಲ ಸಿಂಗಲ್ಸ್ನಲ್ಲಿ ಜೀಲ್ ದೇಸಾಯಿ 6-0, 6-0 ಅಂತರದಿಂದ 15 ವರ್ಷದ ಅನು ವಿಜಿನ್ ಗ್ಯಾಂಟರ್ ವಿರುದ್ಧ ನೇರ ಸೆಟ್ಗಳ ಗೆಲುವು ಸಾಧಿಸಿದರು. ಎರಡನೇ ಸಿಂಗಲ್ಸ್ ಪಂದ್ಯದಲ್ಲಿ ಸಹಜ ಯಮಲಪಲ್ಲಿ ಕೂಡ ಇದೇ ಅಂತರದಲ್ಲಿ32 ವರ್ಷದ ಜರ್ಗಲ್ ಅಲ್ತಾನ್ಸರ್ನೈ ವಿರುದ್ದ ಜಯ ದಾಖಲಿಸಿದರು.

ಡಬಲ್ಸ್ ಪಂದ್ಯದಲ್ಲಿ ವೈಷ್ಣವಿ ಅಡ್ಕರ್ ಮತ್ತು ಋತುಜಾ ಭೋಸಲೆ ಜೋಡಿಯು 6-1, 6-0ಯಿಂದ ನೇರ ಸೆಟ್ಗಳಲ್ಲಿ ಖೊಂಗೊರ್ಜುಲ್ ಅಲ್ದರ್ಖಿಶಿಗ್ ಮತ್ತು ಜರ್ಗಲ್ ಅವರನ್ನು ಸೋಲಿಸಿತು.

ಮೊದಲ ಪಂದ್ಯದಲ್ಲಿ ಥಾಯ್ಲೆಂಡ್ ಎದುರು 2–1 ರಲ್ಲಿ ಸೋತಿದ್ದ ಭಾರತ, ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 3–0 ಯಿಂದ ಸೋಲಿಸಿತ್ತು. ಗುರುವಾರ 0–3 ರಿಂದ ಇಂಡೊನೇಷ್ಯಾಕ್ಕೆ ಮಣಿದಿತ್ತು. ಟೂರ್ನಿಯ ಕೊನೆಯ ದಿನವಾದ ಶನಿವಾರ ಭಾರತ ತಂಡವು ಕೊರಿಯಾ ವಿರುದ್ಧ ಸೆಣಸಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-51-1270543222

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.