ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ಕ್ಯಾಸ್ಪರ್‌ ರೂಡ್‌ಗೆ ಸೋಲುಣಿಸಿದ ಗರಿನ್‌

Last Updated 13 ಮಾರ್ಚ್ 2023, 23:36 IST
ಅಕ್ಷರ ಗಾತ್ರ

ಇಂಡಿಯನ್ ವೆಲ್ಸ್: ಕ್ವಾಲಿಫೈಯರ್‌ನಿಂದ ಗೆದ್ದು ಬಂದ ಆಟಗಾರ ಕ್ರಿಸ್ಟಿಯನ್ ಗರಿನ್ ಅವರು ಬಿಎನ್‌ಪಿ ಪರಿಬಾಸ್ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಮೂರನೇ ಶ್ರೇಯಾಂಕದ ಆಟಗಾರ ಕ್ಯಾಸ್ಪರ್ ರೂಡ್ ಅವರಿಗೆ ಆಘಾತ ನೀಡಿದರು.

ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಚಿಲಿಯ ಗರಿನ್‌ 6-4, 7-6 (2)ರಿಂದ ನಾರ್ವೆ ಆಟಗಾರನನ್ನು ಮಣಿಸಿದರು.

ರೂಡ್‌ ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. 97ನೇ ಕ್ರಮಾಂಕದಲ್ಲಿರುವ ಗರಿನ್ ಅವರಿಗೆ ಎರಡು ವರ್ಷಗಳ ಬಳಿಕ ಅಗ್ರ 5ರೊಳಗಿನ ಆಟಗಾರನ ವಿರುದ್ಧ ಗೆಲುವು ಲಭಿಸಿದೆ.

ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್‌ 7-5, 1-6, 7-5ರಿಂದ ಫಿನ್‌ಲೆಂಡ್‌ನ ಎಮಿಲ್‌ ರುಸೊರಿ ಎದುರು ಗೆದ್ದರು.

ಇನ್ನೊಂದು ಪಂದ್ಯದಲ್ಲಿ 2021ರ ಇಂಡಿಯನ್ ವೆಲ್ಸ್ ಚಾಂಪಿ ಯನ್‌ ಬ್ರಿಟನ್‌ನ ಕ್ಯಾಮರಾನ್ ನೊರಿ 6-7 (5), 7-5, 6-2ರಿಂದ ಜಪಾನ್‌ನ ತರೊ ಡೇನಿಯಲ್‌ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT