ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

French Open 2022: ಬೋಪಣ್ಣ-ಮಿಡಲ್‌ಕೂಪ್ ಪ್ರಶಸ್ತಿ ಕನಸು ಭಗ್ನ

Last Updated 2 ಜೂನ್ 2022, 14:04 IST
ಅಕ್ಷರ ಗಾತ್ರ

ಪ್ಯಾರಿಸ್: ಫ್ರೆಂಚ್‌ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿರುವ ಭಾರತದ ರೋಹನ್‌ ಬೋಪಣ್ಣ ಹಾಗೂ ನೆದರ್ಲೆಂಡ್ಸ್‌ನ ಮ್ಯಾಟ್‌ವೆ ಮಿಡಲ್‌ಕೂಪ್ ಜೋಡಿ ಪ್ರಶಸ್ತಿ ಕನಸು ಭಗ್ನಗೊಂಡಿದೆ.

ಗುರುವಾರ ನಡೆದ ಪುರುಷರ ಡಬಲ್ಸ್ ಅಂತಿಮ ನಾಲ್ಕರ ಘಟ್ಟದ ಹೋರಾಟದಲ್ಲಿ 16ನೇ ಶ್ರೇಯಾಂಕಿತ ಬೋಪಣ್ಣ-ಮಿಡಲ್‌ಕೂಪ್ ಜೋಡಿಯು 12ನೇ ಶ್ರೇಯಾಂಕಿತರಾದ ಎಲ್‌ ಸಾಲ್ವಡಾರ್‌ನ ಮಾರ್ಸೆಲೊ ಅರೆವಾಲೊ ಹಾಗೂ ನೆದರ್ಲೆಂಡ್ಸ್‌ನ ಜೀನ್-ಜೂಲಿಯನ್ ರೋಜರ್ ವಿರುದ್ಧ 6-3, 3-6, 6-7 (8-10)ರ ಕಠಿಣ ಅಂತರದಲ್ಲಿ ಸೋಲು ಅನುಭವಿಸಿದರು.

ಮೊದಲ ಸೆಟ್ ಗೆದ್ದ ಬೋಪಣ್ಣ ಜೋಡಿ ಫೈನಲ್‌ನತ್ತ ದಿಟ್ಟ ಹೆಜ್ಜೆ ಇಟ್ಟಿದ್ದರು. ಎರಡು ತಾಸು ಏಳು ನಿಮಿಷಗಳವರೆಗೂ ಸಾಗಿದ ಜಿದ್ದಾಜಿದ್ದಿನ ಹಣಾಹಣಿಯ ಕೊನೆಯಲ್ಲಿ ಬೋಪಣ್ಣ ಜೋಡಿ ಎಡವಿದರು.

2013ರಲ್ಲಿ ಅಮೆರಿಕನ್ ಓಪನ್‌ ಪುರುಷರ ಡಬಲ್ಸ್‌ನಲ್ಲಿ ಲಿಯಾಂಡರ್ ಪೇಸ್ ಜೋಡಿ ಫೈನಲ್‌‌ಗೆ ಲಗ್ಗೆಯಿಟ್ಟಿದ್ದರು. ಬಳಿಕ ಒಂಬತ್ತು ವರ್ಷಗಳ ಅವಧಿಯಲ್ಲಿ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಯಾವುದೇ ಭಾರತೀಯ ಆಟಗಾರ ಫೈನಲ್‌ಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿಲ್ಲ.

ರೋಹನ್ ಬೋಪಣ್ಣ ಕೊನೆಯದಾಗಿ 2010ರಲ್ಲಿ ಗ್ರ್ಯಾನ್‌ಸ್ಲಾಮ್ ಫೈನಲ್ ಆಡಿ ರನ್ನರ್-ಅಪ್ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT