ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಪ್ಸ್‌ಗೆ ಬೋಪಣ್ಣ, ಸಾನಿಯಾ

Last Updated 3 ಫೆಬ್ರುವರಿ 2022, 18:11 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತದ ಟೆನಿಸ್ ತಾರೆಯರಾದ ಸಾನಿಯಾ ಮಿರ್ಜಾ, ರೋಹನ್ ಬೋಪಣ್ಣ, ಅಂಕಿತಾ ರೈನಾ ಮತ್ತು ರಾಮಕುಮಾರ್ ರಾಮನಾಥನ್ ಅವರನ್ನು ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ (ಟಾಪ್ಸ್‌) ನಲ್ಲಿ ಸೇರ್ಪಡೆ ಮಾಡಲಾಗಿದೆ.

ಈ ವರ್ಷ ನಡೆಯಲಿರುವ ಏಷ್ಯನ್ ಕ್ರೀಡಾಕೂಟದವರೆಗೆ ಅವರಿಗೆ ಈ ಯೋಜನೆಯ ಲಾಭ ಸಿಗಲಿದೆ. ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ಮಾಡಿದ್ದ ಮನವಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರದ ಕ್ರೀಡಾ ಇಲಾಖೆಯ ಮಿಷನ್ ಒಲಿಂಪಿಕ್ ಘಟಕವು ಈ ಅವಕಾಶ ನೀಡಿದೆ. ಇದಲ್ಲದೇ ಯುವ ಆರ್ಚರಿಪಟು ಮಂಜರಿ ಅವರಿಗೆ ₹ 3.62 ಲಕ್ಷ ಮಂಜೂರು ಮಾಡಲಾಗಿದೆ. ಪ್ಯಾರಾ ಪಿಸ್ತೂಲ್ ಶೂಟರ್ ₹ 4.31 ಲಕ್ಷ ಕೂಡ ನೀಡಲಾಗಿದೆ. ಸ್ಕೀಟ್ ಶೂಟರ್ ಗುರ್ಜೋತ್ ಸಿಂಗ್ ಮತ್ತು ಏರ್‌ರೈಫಲ್ ಶೂಟಿಂಗ್ ಪಟು ರುದ್ರಾಕ್ಷ್ ಪಾಟೀಲ ಅವರು ಕ್ರಮವಾಗಿ ₹ 2.68 ಲಕ್ಷ ಮತ್ತು ₹ 1.03 ಲಕ್ಷ ನೀಡುವಂತೆ ಮಾಡಿದ್ದ ಮನವಿಗೂ ಅನುಮೋದನೆ ನೀಡಲಾಗಿದೆ. ಸಲಕರಣೆಗಳ ಖರೀದಿಗಾಗಿ ಅವರಿಗೆ ಈ ಹಣವನ್ನು ನೀಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT