ನ್ಯೂಯಾರ್ಕ್: ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯವಾಗಿದೆ. ಏಕೈಕ ಭರವಸೆಯಾಗಿದ್ದ ರೋಹನ್ ಬೋಪಣ್ಣ ಹಾಗೂ ಅವರ ಜೊತೆಗಾರ ಕೆನಡಾದ ಡೆನಿಸ್ ಶಪೊವಲೊವ್ ಪುರುಷರ ಡಬಲ್ಸ್ ಕ್ವಾರ್ಟರ್‌ಫೈನಲ್ ಸೋಲು ಅನುಭವಿಸಿದ್ದಾರೆ.
ಬೋಪಣ್ಣ–ಶಪೊವಲೊವ್ ಅವರು 5–7, 5–7ರಿಂದ ನೆದರ್ಲೆಂಡ್ಸ್‌ನ ಜೀನ್ ಜೂಲಿಯನ್ ರೋಜರ್ ಹಾಗೂ ರುಮೇನಿಯಾದ ಹೊರಿಯಾ ಟೆಕಾವು ಜೋಡಿಯ ಎದುರು ಪರಾಭವಗೊಂಡರು. ಸೋಮವಾರ ರಾತ್ರಿ ನಡೆದ ಈ ಪಂದ್ಯ 1 ತಾಸು 26 ನಿಮಿಷಗಳಲ್ಲಿ ಮುಗಿಯಿತು.
ಪ್ರತಿ ಸೆಟ್‌ನಲ್ಲಿ ಒಂದು ಸರ್ವ್‌ಅನ್ನು ಭಾರತ–ಕೆನಡಾ ಜೋಡಿ ಕೈಚೆಲ್ಲಿತು. ಅಲ್ಲದೆ ಎರಡನೇ ಸೆಟ್‌ನಲ್ಲಿ ಸಿಕ್ಕ ಏಕೈಕ್ ಬ್ರೇಕ್ ಅವಕಾಶವನ್ನು ಬಳಸಿಕೊಳ್ಳಲು ವಿಫಲವಾದರು.
2018ರ ಫ್ರೆಂಚ್ ಓಪನ್ ಹಾಗೂ ಅಮೆರಿಕ ಓಪನ್ ಟೂರ್ನಿಗಳಲ್ಲೂ ಬೋಪಣ್ಣ ಕ್ವಾರ್ಟರ್‌ಫೈನಲ್ ತಲುಪಿದ್ದರು.
ಭಾರತದ ದಿವಿಜ್ ಶರಣ್(ಡಬಲ್ಸ್ ವಿಭಾಗ) ಹಾಗೂ ಸುಮಿತ್ ನಗಾಲ್ (ಸಿಂಗಲ್ಸ್) ಅವರು ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.