ಏಷ್ಯನ್‌ ಕ್ರೀಡಾಕೂಟ: ಪ್ರೀ ಕ್ವಾರ್ಟರ್‌ಗೆ ಬೋಪಣ್ಣ ಜೋಡಿ

4

ಏಷ್ಯನ್‌ ಕ್ರೀಡಾಕೂಟ: ಪ್ರೀ ಕ್ವಾರ್ಟರ್‌ಗೆ ಬೋಪಣ್ಣ ಜೋಡಿ

Published:
Updated:

ಜಕಾರ್ತ: ಜಕಾರ್ತ: ಭಾರತದ ಟೆನಿಸ್‌ ಆಟಗಾರರಾದ ರೋಹನ್‌ ಬೋಪಣ್ಣ ಮತ್ತು ದಿವಿಜ್‌ ಶರಣ್‌ ಅವರು ಏಷ್ಯನ್‌ ಕ್ರೀಡಾಕೂಟದಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಜೆಎಸ್‌ಸಿ ಟೆನಿಸ್‌ ಅಂಕಣದಲ್ಲಿ ಮಂಗಳವಾರ ನಡೆದ ಪುರುಷರ ಡಬಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಬೋಪಣ್ಣ ಮತ್ತು ದಿವಿಜ್‌ 6–3, 6–1ರ ನೇರ ಸೆಟ್‌ಗಳಿಂದ ಥಾಯ್ಲೆಂಡ್‌ನ ನುಟ್ಟಾನೊನ್‌ ಕಡಚಾಪನನ್‌ ಮತ್ತು ವಿಷಾಯ ತ್ರೊಂಗ್‌ಚಾರೊಯೆನ್‌ಚೈಕುಲ್‌ ಅವರನ್ನು ಸೋಲಿಸಿದರು.

ಇನ್ನೊಂದು ಪಂದ್ಯದಲ್ಲಿ ಸುಮಿತ್‌ ನಗಾಲ್ ಮತ್ತು ರಾಮಕುಮಾರ್‌ ರಾಮನಾಥನ್‌ 7–6, 7–6ರಲ್ಲಿ ಚೀನಾ ತೈಪೆಯ ಚೆನ್‌ ಟಿ ಮತ್ತು ಪೆಂಗ್‌ ಸಿಯೆನ್‌ಯಿನ್‌ ಅವರನ್ನು ಮಣಿಸಿದರು.

ಮಿಶ್ರ ಡಬಲ್ಸ್‌ ವಿಭಾಗದ 32ರ ಘಟ್ಟದ ಹಣಾಹಣಿಯಲ್ಲಿ ಕರ್ನಾಟಕದ ಬೋಪಣ್ಣ ಮತ್ತು ಅಂಕಿತಾ ರೈನಾ 6–3, 2–6, 11–9ರಲ್ಲಿ ದಕ್ಷಿಣ ಕೊರಿಯಾದ ಕಿಮ್‌ ನಾರಿ ಮತ್ತು ಲೀ ಜೀಮೂನ್‌ ವಿರುದ್ಧ ಗೆದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !