ಟೆನಿಸ್‌: ಫೈನಲ್‌ಗೆ ನಿಕ್ಷೇಪ್‌

ಸೋಮವಾರ, ಮಾರ್ಚ್ 18, 2019
31 °C

ಟೆನಿಸ್‌: ಫೈನಲ್‌ಗೆ ನಿಕ್ಷೇಪ್‌

Published:
Updated:
Prajavani

ಬೆಂಗಳೂರು: ಅಪೂರ್ವ ಆಟ ಆಡಿದ ಕರ್ನಾಟಕದ ಬಿ.ಆರ್‌.ನಿಕ್ಷೇಪ್‌, ಭೋಪಾಲ್‌ನಲ್ಲಿ ನಡೆಯುತ್ತಿರುವ ಎಐಟಿಎ 50ಕೆ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ಮತ್ತು ಡಬಲ್ಸ್‌ ವಿಭಾಗಗಳಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ.

ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ನಿಕ್ಷೇಪ್‌ 6–2, 6–3 ನೇರ ಸೆಟ್‌ಗಳಿಂದ ಮಧ್ಯಪ್ರದೇಶದ ರಾಘವ್‌ ಜೈಸಿಂಘಾನಿ ಎದುರು ಗೆದ್ದರು.

ಬೆಂಗಳೂರಿನ ಸುರಾನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ನಿಕ್ಷೇಪ್‌, ಎರಡು ಸೆಟ್‌ಗಳಲ್ಲೂ ಪ್ರಾಬಲ್ಯ ಮೆರೆದರು.

ಫೈನಲ್‌ನಲ್ಲಿ ಕರ್ನಾಟಕದ ಆಟಗಾರ, ತೆಲಂಗಾಣದ ತಾಹ ಕಪಾಡಿಯಾ ಎದುರು ಸೆಣಸಲಿದ್ದಾರೆ.

ನಾಲ್ಕರ ಘಟ್ಟದ ಇನ್ನೊಂದು ಪೈಪೋಟಿಯಲ್ಲಿ ತಾಹ 6–1, 6–4ರಲ್ಲಿ ಬಾಪ್ಲಿ ಶಿವ ಅವರನ್ನು ಪರಾಭವಗೊಳಿಸಿದರು.

ಡಬಲ್ಸ್‌ ವಿಭಾಗದಲ್ಲಿ ಆಂಧ್ರ ಪ್ರದೇಶದ ಅಪರೂಪ್‌ ರೆಡ್ಡಿ ಜೊತೆಗೂಡಿ ಆಡಿದ ನಿಕ್ಷೇಪ್‌, ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟರು.

ಸೆಮಿಫೈನಲ್‌ನಲ್ಲಿ ನಿಕ್ಷೇಪ್‌ ಮತ್ತು ಅಪರೂಪ್‌ 6–2, 6–3 ನೇರ ಸೆಟ್‌ಗಳಿಂದ ಯಾವೊಲಿಲ್‌ ಮತ್ತು ಅಖಿಲ್‌ ನಂದಲಾಲ್‌ ಎದುರು ಗೆದ್ದರು.

ನಾಲ್ಕರ ಘಟ್ಟದ ಇನ್ನೊಂದು ಹಣಾಹಣಿಯಲ್ಲಿ ತಾಹ ಕಪಾಡಿಯಾ ಮತ್ತು ಪರೀಕ್ಷಿತ್‌ ಸೋಮಾನಿ 6–4, 6–3ರಲ್ಲಿ ರಾಘವ್‌ ಸಿಂಘಾನಿಯಾ ಮತ್ತು ಅಲ್ಬರ್ಟ್‌ ಅವರನ್ನು ಮಣಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !