ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತಾಯಪೂರ್ವಕ ಲೈಂಗಿಕ ಸಂಬಂಧ: ಆರೋಪ ಮಾಡಿಲ್ಲ ಎಂದ ಚೀನಾದ ಟೆನಿಸ್ ತಾರೆ ಪೆಂಗ್

Last Updated 7 ಫೆಬ್ರುವರಿ 2022, 4:07 IST
ಅಕ್ಷರ ಗಾತ್ರ

ಬೀಜಿಂಗ್: ಸೋಮವಾರ ಪ್ರಕಟವಾದ ಸಂದರ್ಶನದ ಪ್ರಕಾರ, ಚೀನಾದ ಟೆನಿಸ್ ತಾರೆ ಪೆಂಗ್ ಶುವಾಯ್ ಅವರು ನಾನು ಯಾರ ಮೇಲೂ ಲೈಂಗಿಕ ದೌರ್ಜನ್ಯದ ಆರೋಪ ಮಾಡಿಲ್ಲ ಎಂದು ಹೇಳಿದ್ದಾರೆ. ಅವರ ಸುರಕ್ಷತೆಯ ಬಗ್ಗೆ ವಿಶ್ವದಾದ್ಯಂತ ಕಳವಳ ಹೆಚ್ಚಾದ ಸಂದರ್ಭದಲ್ಲೇ ಈ ಸಂದರ್ಶನ ಹೊರಬಿದ್ದಿದೆ.

ಬೀಜಿಂಗ್‌ನ ಹೋಟೆಲ್‌ನಲ್ಲಿ ಫ್ರೆಂಚ್ ಪತ್ರಿಕೆ ಎಲ್'ಇಕ್ವಿಪ್‌ಗೆ ನೀಡಿದ ಸಂದರ್ಶನದಲ್ಲಿ ಪೆಂಗ್, ‘ನನ್ನ ಮೇಲೆ ಯಾರೂ ಯಾವುದೇ ರೀತಿಯಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ನಾನು ಎಂದೂ ಹೇಳಿಲ್ಲ’ ಎಂದಿದ್ದಾರೆ.

ಕಳೆದ ನವೆಂಬರ್‌ನಲ್ಲಿ ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ ಚೀನಾದ ಮಾಜಿ ಉಪಾಧ್ಯಕ್ಷ ಜಾಂಗ್ ಗೌಲಿ ನನ್ನ ಜೊತೆ ಒತ್ತಾಯಪೂರ್ವಕವಾಗಿ ವರ್ಷಗಳ ಲೈಂಗಿಕ ಸಂಬಂಧ ಬೆಳೆಸಿದ್ದರು ಎಂದು ಆರೋಪಿಸಿದ್ದರು. ಪೋಸ್ಟ್ ಮಾಡಿದ ಕೆಲವೇ ಸಮಯದಲ್ಲಿ ಅದನ್ನುಅಳಿಸಲಾಗಿತ್ತು ಮತ್ತು ಬಳಿಕ ಸುಮಾರು ಮೂರು ವಾರಗಳವರೆಗೆ ಪೆಂಗ್ ಬಗ್ಗೆ ಯಾವುದೇ ಸುದ್ದಿ ಇರಲಿಲ್ಲ. ಅಂದಿನಿಂದ ಅವರುಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಡಿಸೆಂಬರ್‌ನಲ್ಲಿ ತಾನು ಯಾರ ಮೇಲೂ ಆರೋಪ ಮಾಡಿಲ್ಲ ಎಂದು ನಿರಾಕರಿಸಿದ್ದರು.

ಚೀನಾದಲ್ಲಿ ಸರ್ಕಾರದ ವಿರುದ್ಧದ ಆರೋಪಗಳ ಬಗ್ಗೆ ಕಟ್ಟುನಿಟ್ಟಾದ ಇಂಟರ್ನೆಟ್ ಸೆನ್ಸಾರ್‌ಗಳಿದ್ದು, ಅದನ್ನು ಕೂಡಲೇ ತೆಗೆದುಹಾಕಲಾಗುತ್ತದೆ. ಅದೇ ರೀತಿ ಪೆಂಗ್ ಪೋಸ್ಟ್ ಅನ್ನು ತೆಗೆದಿರಬಹುದು ಎಂದೂ ಸಹ ಹೇಳಲಾಗಿದೆ.

‘ನಾನು ಯಾವುದೇ ಪೋಸ್ಟ್ ಮಾಡಿಲ್ಲ. ಹೊರಗಿನ ಪ್ರಪಂಚದಲ್ಲಿ ಈ ಬಗ್ಗೆ ದೊಡ್ಡ ತಪ್ಪು ತಿಳುವಳಿಕೆ ಸೃಷ್ಟಿಯಾಗಿದೆ ಎಂದು ಟೆನಿಸ್ ಆಟಗಾರ್ತಿ ಪೆಂಗ್ ಹೇಳಿದ್ದಾರೆ. ಹಾಗಿದ್ದರೆ ಇಷ್ಟು ದಿನ ಕಣ್ಮರೆಯಾಗಿದ್ದ ಬಗ್ಗೆ ಕೇಳಿದಾಗ ‘ಎಂದಿಗೂ ಕಣ್ಮರೆಯಾಗಲಿಲ್ಲ’ ಅದು ಕೇವಲ ಮಾಧ್ಯಮ ಸೃಷ್ಠಿ ಎಂದಿದ್ದಾರೆ.

‘ನನ್ನ ಸ್ನೇಹಿತರು ಅಥವಾ ಸಂಬಂಧಿಕರು ನನಗೆ ಸಂದೇಶ ಕಳುಹಿಸಿದ್ದಾರೆ ಮತ್ತು ಹಲವಾರು ಸಂದೇಶಗಳಿಗೆ ಉತ್ತರಿಸಲು ಅಸಾಧ್ಯವಾಗಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT