112ನೇ ಸ್ಥಾನಕ್ಕೇರಿದ ಡ್ಯಾನಿಲೋವಿಚ್‌

7

112ನೇ ಸ್ಥಾನಕ್ಕೇರಿದ ಡ್ಯಾನಿಲೋವಿಚ್‌

Published:
Updated:
Deccan Herald

ಪ್ಯಾರಿಸ್‌ (ಎಎಫ್‌ಪಿ): ಸರ್ಬಿಯಾದ ಟೆನಿಸ್‌ ಆಟಗಾರ್ತಿ ಓಲ್ಗಾ ಡ್ಯಾನಿಲೋವಿಚ್‌ ಅವರು ಸೋಮವಾರ ಬಿಡುಗಡೆಯಾಗಿರುವ ಡಬ್ಲ್ಯುಟಿಎ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 112ನೇ ಸ್ಥಾನಕ್ಕೇರಿದ್ದಾರೆ.

ಭಾನುವಾರ ನಡೆದಿದ್ದ ಮಾಸ್ಕೊ ರಿವರ್‌ ಕಪ್‌ ಟೂರ್ನಿಯಲ್ಲಿ ಡ್ಯಾನಿಲೋವಿಚ್‌ ಪ್ರಶಸ್ತಿ ಗೆದ್ದಿದ್ದರು. ಮಹಿಳೆಯರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಅವರು 7–5, 6–7, 6–4ರಲ್ಲಿ ರಷ್ಯಾದ ಅನಸ್ತೇಸಿಯಾ ಪೊಟಪೋವಾ ಅವರನ್ನು ಸೋಲಿಸಿದ್ದರು.

ಇದರಿಂದಾಗಿ ಅವರು ಒಟ್ಟು 82 ಸ್ಥಾನ ಮೇಲೇರಿದ್ದಾರೆ. ಇದಕ್ಕೂ ಮುನ್ನ 194ನೇ ಸ್ಥಾನದಲ್ಲಿದ್ದರು. ಪೊಟಪೋವಾ ಅವರು 135ನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.

ರುಮೇನಿಯಾದ ಸಿಮೊನಾ ಹಲೆಪ್‌ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಅವರ ಖಾತೆಯಲ್ಲಿ 7571 ಪಾಯಿಂಟ್ಸ್‌ ಇವೆ.

ಡೆನ್ಮಾರ್ಕ್‌ನ ಕ್ಯಾರೋಲಿನ್‌ ವೋಜ್ನಿಯಾಕಿ (6660 ಪಾಯಿಂಟ್ಸ್‌), ಅಮೆರಿಕದ ಸ್ಲೊವಾನ್‌ ಸ್ಟೀಫನ್ಸ್‌ (5463ಪಾ.), ಜರ್ಮನಿಯ ಏಂಜಲಿಕ್‌ ಕೆರ್ಬರ್‌ (5305 ಪಾ.) ಮತ್ತು ಉಕ್ರೇನ್‌ನ ಎಲಿನಾ ಸ್ವಿಟೋಲಿನಾ (5020 ಪಾ.) ಕ್ರಮವಾಗಿ ಎರಡರಿಂದ ಐದನೆ ಸ್ಥಾನಗಳಲ್ಲಿದ್ದಾರೆ.

ಎಟಿಪಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ಸ್ಪೇನ್‌ನ ರಫೆಲ್‌ ನಡಾಲ್‌ ಮೊದಲ ಸ್ಥಾನದಲ್ಲಿದ್ದಾರೆ. ಅವರು ಒಟ್ಟು 9310 ಪಾಯಿಂಟ್ಸ್‌ ಹೊಂದಿದ್ದಾರೆ. ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ (7080 ಪಾ.) ಎರಡನೆ ಸ್ಥಾನದಲ್ಲಿದ್ದಾರೆ.

ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌, ಅರ್ಜೆಂಟೀನಾದ ವುವಾನ್‌ ಮಾರ್ಟಿನ್‌ ಡೆಲ್‌ ‍ಪೊಟ್ರೊ ಮತ್ತು ದಕ್ಷಿಣ ಆಫ್ರಿಕಾದ ಕೆವಿನ್‌ ಆ್ಯಂಡರ್‌ಸನ್‌ ಅವರು ಕ್ರಮವಾಗಿ ಮೂರರಿಂದ ಐದನೆ ಸ್ಥಾನಗಳಲ್ಲಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !