ಡೇವಿಸ್ ಕಪ್: ಮಾದರಿ ಬದಲಿನಿಂದ ಪರಿಣಾಮವಿಲ್ಲ –ವಿಜಯ್ ಅಮೃತರಾಜ್

ಬೆಂಗಳೂರು: ಡೇವಿಸ್ ಕಪ್ನಲ್ಲಿ ಜಾರಿ ಯಾಗಲಿರುವ ಹೊಸ ಮಾದರಿಯಿಂದ ಭಾರತಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹಿರಿಯ ಟೆನಿಸ್ ಆಟಗಾರ ವಿಜಯ್ ಅಮೃತರಾಜ್ ಹೇಳಿದರು.
ಅವರು ಶುಕ್ರವಾರ ಇಲ್ಲಿ ಆರಂಭ ವಾದ ಭಾರತೀಯ ಕ್ರೀಡಾ ಪತ್ರಕರ್ತರ ಸಂಘದ (ಎಸ್ಜೆಎಫ್ಐ) ರಾಷ್ಟ್ರಮಟ್ಟದ ವಾರ್ಷಿಕ ಕ್ರೀಡಾಕೂಟ ಉದ್ಘಾ ಟನೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಭಾರತ ತಂಡವು ಡೇವಿಸ್ ಕಪ್ನ ಒಂದನೇ ಗುಂಪಿನಲ್ಲಿ ಆಡಲಿದೆ. ವಿಶ್ವ ಗುಂಪಿನ ಫೈನಲ್ಗೆ ತಲುಪಿದಾಗ ಹೊಸ ಮಾದರಿಯ ಪರಿಣಾಮ ಗೊತ್ತಾಗಬಹುದು’ ಎಂದರು.
ಲಿಯಾಂಡರ್ ಪೇಸ್ ಅವರು ಡೆವಿಸ್ ಕಪ್ಗೆ ಮರಳಬೇಕೇ ಎಂಬ ಪ್ರಶ್ನೆಗೆ ಅವರು, ‘ಅದರಿಂದ ಹೆಚ್ಚು ವ್ಯತ್ಯಾಸವೇನೂ ಆಗುವುದಿಲ್ಲ. ಇವತ್ತು ನಾವು ಡಬಲ್ಸ್ಗಿಂತ ಸಿಂಗಲ್ಸ್ ಮೇಲೆ ಹೆಚ್ಚು ಗಮನ ನೀಡಬೇಕು. ನಾಲ್ವರು ಸಿಂಗಲ್ಸ್ ಆಟಗಾರರು ಬೆಳೆಯಬೇಕು. ಟೂರ್ನಿ ಆಯೋಜಕರೂ ಡಬಲ್ಸ್ ಅಯೋಜಿಸಲು ಹೆಚ್ಚು ಆಸಕ್ತಿ ತೋರುತ್ತಿಲ್ಲ’ ಎಂದರು.
ಅಂಜಲಿ ಮೆಚ್ಚುಗೆ: ಈ ಸಂದರ್ಭದಲ್ಲಿ ಹಾಜರಿದ್ದ ಒಲಿಂಪಿಯನ್ ಶೂಟರ್ ಅಂಜಲಿ ಭಾಗವತ್, ‘2020ರ ಒಲಿಂಪಿಕ್ಸ್ನಲ್ಲಿ ಭಾರತದ ಶೂಟರ್ ಗಳು ಉತ್ತಮ ಸ್ಪರ್ಧೆ ಒಡ್ಡಲಿದ್ದಾರೆ’ ಎಂದರು. ಹಿರಿಯ ಕ್ರಿಕೆಟಿಗ ಜಿ.ಆರ್. ವಿಶ್ವ ನಾಥ್, ಎಸ್ಜೆಎಫ್ಐ ಅಧ್ಯಕ್ಷ ಸುಭೋದ್ ಬರುವಾ, ಸ್ವಾಬ್ ಅಧ್ಯಕ್ಷೆ ಮನುಜಾ ವೀರಪ್ಪ ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.