ಡೇವಿಸ್ ಕಪ್‌ನಲ್ಲಿ ಬದಲಾವಣೆ: ಹಿರಿಯರ ಆಕ್ಷೇಪ

7

ಡೇವಿಸ್ ಕಪ್‌ನಲ್ಲಿ ಬದಲಾವಣೆ: ಹಿರಿಯರ ಆಕ್ಷೇಪ

Published:
Updated:

ಸಿಡ್ನಿ : ಡೇವಿಸ್‌ ಕಪ್‌ನಲ್ಲಿ ಬದಲಾವಣೆ ತರಲು ಮುಂದಾಗಿರುವ ಅಂತರರಾಷ್ಟ್ರೀಯ ಟೆನಿಸ್ ಫೆಡರೇಷನ್‌ನ ನಿರ್ಧಾರಕ್ಕೆ ಆಸ್ಟ್ರೇಲಿಯಾದ ಹಿರಿಯ ಆಟಗಾರರಾದ ರಾಡ್ ಲೇವರ್‌, ಜಾನ್‌ ನ್ಯೂಕಾಂಬ್‌ ಮತ್ತು ಲೀಟನ್ ಹೆವಿಟ್‌ ಅಕ್ಷೇಪ ವ್ಯಕ್ತಪಡಿಸಿದ್ದಾರೆ.

ಸದ್ಯ, 16 ರಾಷ್ಟ್ರಗಳ ವಿಶ್ವಗುಂಪು ಮತ್ತು ಇತರ ರಾಷ್ಟ್ರಗಳ ಮೂರು ಪ್ರಾದೇಶಿಕ ವಲಯಗಳ ತಂಡಗಳು ಟೂರ್ನಿಯಲ್ಲಿ ಭಾಗವಹಿಸುತ್ತಿವೆ. ಆದರೆ ಕೇವಲ 18 ರಾಷ್ಟ್ರಗಳು ಒಳಗೊಂಡ ಟೂರ್ನಿ ಆಯೋಜಿಸಲು ಫೆಡರೇಷನ್ ಮುಂದಾಗಿದೆ.

ಹೀಗೆ ಮಾಡುವುದರಿಂದ ಪ್ರಮುಖ ಆಟಗಾರರು ಪಾಲ್ಗೊಂಡು ಟೂರ್ನಿ ಆಕರ್ಷಣೀಯವಾಗಲಿದೆ ಎಂಬುದು ಫೆಡರೇಷನ್‌ ಹೇಳಿಕೆ. ಆದರೆ ಬದಲಾವಣೆಯಿಂದಾಗಿ ಐತಿಹಾಸಿಕ ಟೂರ್ನಿಯು ಮಹತ್ವ ಕಳೆದುಕೊಳ್ಳಲಿದೆ ಎಂದು ಲೇವರ್‌, ನ್ಯೂಕಾಂಬ್‌ ಮತ್ತು ಹೆವಿಟ್‌ ಹೇಳಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !