ಮಂಗಳವಾರ, ನವೆಂಬರ್ 12, 2019
27 °C

ತಟಸ್ಥ ಸ್ಥಳದಲ್ಲಿ ಡೇವಿಸ್‌ ಕಪ್‌ ಪಂದ್ಯ

Published:
Updated:

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಣ ಡೇವಿಸ್‌ ಕಪ್‌ ಟೆನಿಸ್‌ ಪಂದ್ಯವನ್ನು ತಟಸ್ಥ ಸ್ಥಳದಲ್ಲಿ ನಡೆಸಲು ಅಂತರರಾಷ್ಟ್ರೀಯ ಟೆನಿಸ್‌ ಫೆಡರೇಷನ್‌ (ಐಟಿಎಫ್‌) ನಿರ್ಧರಿಸಿದೆ.

ಇಸ್ಲಾಮಾಬಾದ್‌ನಲ್ಲಿ ನಿಗದಿಯಾಗಿದ್ದ ಈ ಪಂದ್ಯವನ್ನು ಬೇರೆಡೆ ಸ್ಥಳಾಂತರಿಸುವಂತೆ ಅಖಿಲ ಭಾರತ ಟೆನಿಸ್‌ ಸಂಸ್ಥೆ (ಎಐಟಿಎ), ಐಟಿಎಫ್‌ಗೆ ಮನವಿ ಮಾಡಿತ್ತು.

ಆಟಗಾರರು, ಪಂದ್ಯದ ಅಧಿಕಾರಿಗಳು ಮತ್ತು ಪ್ರೇಕ್ಷಕರ  ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಮಾನ ಕೈಗೊಂಡಿರುವುದಾಗಿ ಐಟಿಎಫ್‌ ಹೇಳಿದೆ.

ಡೇವಿಸ್‌ ಕಪ್‌ ನಿಯಮದ ಪ್ರಕಾರ ಸೂಕ್ತ ಸ್ಥಳ ಆಯ್ಕೆ ಮಾಡಿಕೊಳ್ಳಲು ಪಾಕಿಸ್ತಾನ ಟೆನಿಸ್‌ ಫೆಡರೇಷನ್‌ಗೆ (ಪಿಟಿಎಫ್‌) ಐದು ದಿನ ಕಾಲಾವಕಾಶ ನೀಡಲಾಗುತ್ತದೆ.

ಭಾರತ ಮತ್ತು ಪಾಕ್‌ ನಡುವಣ ಪಂದ್ಯ ಇದೇ ತಿಂಗಳ 29 ಮತ್ತು 30 ರಂದು ನಿಗದಿಯಾಗಿದೆ.

ಪ್ರತಿಕ್ರಿಯಿಸಿ (+)