ಡೆಲ್‌ ಪೊಟ್ರೊಗೆ ಗಾಯ; ರೋಜರ್ಸ್ ಕಪ್‌ನಿಂದ ‘ನಿವೃತ್ತಿ’

7

ಡೆಲ್‌ ಪೊಟ್ರೊಗೆ ಗಾಯ; ರೋಜರ್ಸ್ ಕಪ್‌ನಿಂದ ‘ನಿವೃತ್ತಿ’

Published:
Updated:
Deccan Herald

ಟೊರೊಂಟೊ (ರಾಯಿಟರ್ಸ್‌): ವಿಶ್ವ ರ‍್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಅವರು ರೋಜರ್ಸ್ ಕಪ್‌ ಟೆನಿಸ್ ಟೂರ್ನಿಯಲ್ಲಿ ಆಡದೇ ಇರಲು ನಿರ್ಧರಿಸಿದ್ದಾರೆ. ಅರ್ಜೆಂಟೀನಾದ ಈ ಆಟಗಾರ ಮಣಿಗಂಟಿನ ನೋವಿನಿಂದ ಬಳಲುತ್ತಿದ್ದಾರೆ. ಈ ವಿಷಯವನ್ನು ಅವರು ಟ್ವೀಟ್ ಮಾಡಿ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಟೂರ್ನಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಅವರು ಆಡಬೇಕಾಗಿತ್ತು.

ಒಂದು ಬಾರಿ ಅಮೆರಿಕ ಓಪನ್ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಗೆದ್ದಿದ್ದ ಡೆಲ್‌ ಪೊಟ್ರೊ ಅವರು ಮೆಕ್ಸಿಕೊದ ಲಾಸ್ ಕಾಬೋಸ್‌ನಲ್ಲಿ ಈಚೆಗೆ ನಡೆದಿದ್ದ ಓಪನ್ ಟೂರ್ನಿಯಲ್ಲಿ ರನ್ನರ್ ಅಪ್‌ ಆಗಿದ್ದರು. 29 ವರ್ಷದ ಈ ಆಟಗಾರನಿಗೆ ವೃತ್ತಿಜೀವನದಲ್ಲಿ ನಿರಂತರವಾಗಿ ಗಾಯದ ಸಮಸ್ಯೆ ಕಾಡಿತ್ತು. 2014ರಲ್ಲಿ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು.

ಈ ವರ್ಷ ಅವರ ಆರಂಭ ಉತ್ತಮವಾಗಿಯೇ ಇತ್ತು. ನ್ಯೂಜಿಲೆಂಡ್ ಓಪನ್‌ನಲ್ಲಿ ರನ್ನರ್ ಅಪ್‌ ಆಗಿದ್ದ ಅವರು ಇಂಡಿಯನ್ಸ್ ವೆಲ್ಸ್‌ ಟೂರ್ನಿಯ ಫೈನಲ್‌ನಲ್ಲಿ ರೋಜರ್‌ ಫೆಡರರ್ ಅವರನ್ನು ಸೋಲಿಸಿದ್ದರು. ಆದರೆ ಫ್ರೆಂಚ್ ಓಪನ್‌ನ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !