ಗುರುವಾರ , ಮೇ 13, 2021
18 °C
ಕೆಎಸ್‌ಎಲ್‌ಟಿಎ– ಎಐಟಿಎ 16 ವರ್ಷದೊಳಗಿನವರ ಟ್ಯಾಲೆಂಟ್ ಸಿರೀಸ್ ಟೆನಿಸ್ ಟೂರ್ನಿ

ಕೆಎಸ್‌ಎಲ್‌ಟಿಎ ಟೆನಿಸ್ ಟೂರ್ನಿ: ಸೆಮಿಫೈನಲ್‌ಗೆ ದೇವ್‌ ಶಿವಶಂಕರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಮೋಘ ಆಟವಾಡಿದ ದೇವ್ ಶಿವಶಂಕರ್ ಅವರು ಅಗ್ರಶ್ರೇಯಾಂಕದ ಜೇಸನ್ ಡೇವಿಡ್‌ಗೆ ಸೋಲುಣಿಸಿ ಕೆಎಸ್ಎಲ್‌ಟಿ–ಎಐಟಿಎ 16 ವರ್ಷದೊಳಗಿವರ ಟ್ಯಾಲೆಂಟ್ ಸಿರೀಸ್ ಟೆನಿಸ್ ಟೂರ್ನಿ ಸೆಮಿಫೈನಲ್ ಪ್ರವೇಶಿಸಿದರು.

ಕೆಎಸ್‌ಎಲ್‌ಟಿಎ ಅಂಗಣದಲ್ಲಿ ಬುಧವಾರ ನಡೆದ ಬಾಲಕರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ದೇವ್‌ 6–4, 6–1ರಿಂದ ಜೇಸನ್‌ ಅವರನ್ನು ಮಣಿಸಿದರು. ದೇವ್ ಅರ್ಹತಾ ಸುತ್ತಿನಿಂದ ಗೆದ್ದು ಮುಖ್ಯ ಸುತ್ತು ಪ್ರವೇಶಿಸಿದ್ದರು.

ಬಾಲಕರ ವಿಭಾಗದ ಎಂಟರಘಟ್ಟದ ಇನ್ನುಳಿದ ಪಂದ್ಯಗಳಲ್ಲಿ ಶ್ರೀನಿಕೇತ್ ಕಣ್ಣನ್‌ 7-6 , 6-1ರಿಂದ ಸೂರಜ್ ವಿಜಯಕುಮಾರ್ ವಿರುದ್ಧ, ಕ್ರಿಶ್ ಅಜಯ್ ತ್ಯಾಗಿ 6–1, 6–0ರಿಂದ ಶ್ರೀಕರ ಧೋನಿ ಎದುರು, ಸೆಹಜ್ ಸಿಂಗ್ ಪವಾರ್‌ 6-0, 6-0ರಿಂದ ಅಮನ್ ಪವಾರ್ ವಿರುದ್ಧ ಗೆದ್ದು ನಾಲ್ಕರ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು.

ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿ ಅಗ್ರಶ್ರೇಯಾಂಕದ ಗಗನಾ ಮೋಹನ್ ಕುಮಾರ್ 7-5, 5-7, 6-1ರಿಂದ ಹೃದಯೇಶಿ ಪೈ ಎದುರು, ವನ್ಯಾ ಶ್ರೀವಾಸ್ತವ್‌ 6-3, 6-1ರಿಂದ ಮಹಿಕಾ ಸುರವರಂ ಎದುರು, ಶ್ರೀ ತನ್ವರಿ ದಾಸರಿ 4-6, 6-1, 6-2ರಿಂದ ಮೃಣಾಲಿ ನವಾಡ ವಿರುದ್ಧ, ಅನ್ವಿ ಪುನಗಂಟಿ 3-6, 6-1, 6-4ರಿಂದ ಸುಶ್ಮಿತಾ ರವಿ ಎದುರು ಜಯಿಸಿ ಸೆಮಿಫೈನಲ್ ತಲುಪಿದರು.

ಪುರುಷರ ಡಬಲ್ಸ್‌ನಲ್ಲಿ, ಅನೂಪ್ ಕೇಶವಮೂರ್ತಿ–ಕ್ರಿಶ್ ಅಜಯ್ ತ್ಯಾಗಿ 6-0, 6-0ರಿಂದ ಆಹಿಲ್ ಅಯಾಜ್–ಹರೂನ್ ಸಯ್ಯದ್ ಎದುರು, ದೇವ್ ಶಿವಶಂಕರ್–ಶಿವ ಪ್ರಸಾದ್‌ 7-6 , 6-2ರಿಂದ ಅಮನ್ ರಾವ್– ವಿಷ್ಣು ಬಾಲಚಂದರ್ ವಿರುದ್ಧ, ಪ್ರಕಾಶ್ ಸರನ್‌–ಕುಶಾಲ್ ಎಸ್.ಪಿ. 7-6, 6-0ರಿಂದ ಶಿವಾಜಿ ಪಿಲ್ಲಾ–ಅಕ್ಷತ್ ಹೆನಿಶ್ ಎದುರು, ಜೇಸನ್ ಡೇವಿಡ್‌–ಶ್ರೀನಿಕೇತ್ ಕಣ್ಣನ್‌ 6-2, 6-3ರಿಂದ ಹವಿಶ್ ಕುಮಾರ್ ಬಡ್ಡಿರೆಡ್ಡಿ–ಪವನ್ ಗಣೇಶನ್ ಎದುರು ಗೆದ್ದು ನಾಲ್ಕರ ಘಟ್ಟ ತಲುಪಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು