ಭಾನುವಾರ, ಸೆಪ್ಟೆಂಬರ್ 22, 2019
25 °C
ಅಮೆರಿಕ ಓಪನ್‌ ಟೆನಿಸ್‌: ಸೆಮಿಗೆ ಸೆರೆನಾ

ಫೆಡರರ್‌ಗೆ ಡಿಮಿಟ್ರೊವ್‌ ಆಘಾತ

Published:
Updated:
Prajavani

ನ್ಯೂಯಾರ್ಕ್‌: 20 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ವಿಜೇತ ರೋಜರ್‌ ಫೆಡರರ್‌ ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯ ಪ್ರಶಸ್ತಿ ರೇಸ್‌ನಿಂದ ಹೊರಬಿದ್ದರು. ಮಂಗಳವಾರ ರಾತ್ರಿ ಅರ್ಥರ್‌ ಆ್ಯಷ್‌ ಅಂಗಣದಲ್ಲಿ ನಡೆದ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ಅವರು ಗ್ರಿಗೊರ್‌ ಡಿಮಿಟ್ರೊವ್‌ ವಿರುದ್ಧ ಸೋತರು.

ನಾಟಕೀಯ ಹಣಾಹಣಿಯಲ್ಲಿ 3–6, 6–4, 3–6, 6–4, 6–2 ಸೆಟ್‌ಗಳಿಂದ ಡಿಮಿಟ್ರೊವ್‌ ಗೆದ್ದರು. 78ನೇ ರ‍್ಯಾಂಕಿನ ಬಲ್ಗೇರಿಯಾ ಆಟಗಾರ ಈ ಹಿಂದೆ ಫೆಡರರ್‌ ಎದುರು ಆಡಿದ್ದ ಎಲ್ಲ ಏಳು ಪಂದ್ಯಗಳಲ್ಲೂ ನಿರಾಸೆ ಕಂಡಿದ್ದರು.

ಡಿಮಿಟ್ರೊವ್‌ ಅವರು ಅಮೆರಿಕ ಓಪನ್‌ ಟೂರ್ನಿಯಲ್ಲಿ 28 ವರ್ಷಗಳ ಬಳಿಕ ಅತ್ಯಂತ ಕೆಳ ರ‍್ಯಾಂಕಿನ ಆಟಗಾರನೊಬ್ಬ ಸೆಮಿಫೈನಲ್‌ ತಲುಪಿದ ಸಾಧನೆ ಮಾಡಿದ್ದಾರೆ. 1991ರಲ್ಲಿ 174ನೇ ರ‍್ಯಾಂಕಿನ ಜಿಮ್ಮಿ ಕಾನರ್ಸ್ ನಾಲ್ಕರ ಘಟ್ಟ ಪ್ರವೇಶಿಸಿದ್ದು ಈ ಹಿಂದಿನ ದಾಖಲೆ. ಸೆಮಿಫೈನಲ್‌ ಪಂದ್ಯದಲ್ಲಿ ಡ್ಯಾನಿಲ್‌ ಮೆಡ್ಡೆಡೆವ್‌ ಅವರನ್ನು ಡಿಮಿಟ್ರೊವ್‌ ಎದುರಿಸುವರು. ಅಮೆರಿಕ ಓಪನ್‌ನಲ್ಲಿ ಡಿಮಿಟ್ರೊವ್‌ ಮೊದಲ ಬಾರಿ ಸೆಮಿಫೈನಲ್‌ಗೆ ತಲುಪಿದ್ದಾರೆ.

ಮತ್ತೊಂದು ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ಡ್ಯಾನಿಲ್‌ ಮೆಡ್ಡೆಡೆವ್‌ ಮೂರು ಬಾರಿಯ ಗ್ರ್ಯಾನ್‌ಸ್ಲಾಮ್‌ ಚಾಂಪಿಯನ್‌ ಸ್ಟ್ಯಾನ್‌ ವಾವ್ರಿಂಕಾಗೆ ಆಘಾತ ನೀಡಿದರು. 7–6, 6–3, 3–6, 6–1 ಸೆಟ್‌ಗಳಿಂದ ಗೆದ್ದ ರಷ್ಯಾ ಆಟಗಾರನಿಗೆ ಅವರು ಇದು ಮೊದಲ ಗ್ರ್ಯಾನ್‌ಸ್ಲಾಮ್‌ ನಾಲ್ಕರ ಘಟ್ಟ ಪ್ರವೇಶ.

ಸೆರೆನಾ ಗೆಲುವಿನ ಓಟ: 24ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಹುಡುಕಾಟದಲ್ಲಿರುವ ಅಮೆರಿಕದ ಸೆರೆನಾ ವಿಲಿಯಮ್ಸ್ ಕೂಡ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟಿದ್ದಾರೆ. ಮಂಗಳವಾರ ರಾತ್ರಿ ನಡೆದ ಮಹಿಳಾ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಅವರು ಚೀನಾದ ವಾಂಗ್‌ ಕಿಯಾಂಗ್‌ ವಿರುದ್ಧ 6–1, 6–0 ಸುಲಭ ಜಯ ಸಾಧಿಸಿದರು. ಮತ್ತೊಂದು ಹಣಾಹಣಿಯಲ್ಲಿ ಎಲಿನಾ ಸ್ವಿಟೋಲಿನಾ ಅವರು ಜೊಹಾನ್ನಾ ಕೊಂಟಾ ಎದುರು 6–4, 6–4ರಿಂದ ಗೆದ್ದು ಸೆಮಿಫೈನಲ್‌ಗೆ ಲಗ್ಗೆಯಿಟ್ಟರು.

Post Comments (+)