ಪ್ರಿಸ್ಟಿನಾ (ಕೊಸೊವೊ), (ಪಿಟಿಐ): ಕೇವಲ 15 ವರ್ಷ ವಯಸ್ಸಿನ ದಿವ್ಯಾನ್ಶಿ ಭೌಮಿಕ್ ಅವರು ಡಬ್ಲ್ಯುಟಿಟಿ ಫೀಡರ್ ಟೇಬಲ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ನಲ್ಲಿ ಪದಕ ಗೆದ್ದ ಭಾರತದ ಅತಿ ಕಿರಿಯ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರಳಾದಳು.

ವಿಶ್ವ ಕ್ರಮಾಂಕದಲ್ಲಿ 211ನೇ ಸ್ಥಾನದಲ್ಲಿರುವ ದಿವ್ಯಾನ್ಶಿ ಅಸಾಮಾನ್ಯ ಏಕಾಗ್ರತೆ ಮತ್ತು ಹೋರಾಟದ ಶಕ್ತಿ ಪ್ರದರ್ಶಿಸಿ ವಿಶ್ವ ಕ್ರಮಾಂಕದಲ್ಲಿ 38ನೇ ಸ್ಥಾನದಲ್ಲಿರುವ ಚೀನಾ ತೈಪೆಯ ಯೆ ಯಿ–ತಿಯಾನ್ ಅವರನ್ನು ಐದು ಗೇಮ್ಗಳ ರೋಚಕ ಫೈನಲ್ನಲ್ಲಿ 3–2 ರಿಂದ (8–11, 11–8, 11–5, 7–11, 11–7) ಸೋಲಿಸಿದಳು.

ಜಪಾನ್ನ ಪ್ರತಿಭೆ ಮಿವಾ ಹರಿ ಮೊಟೊ ಅವರ ನಂತರ ಈ (ಡಬ್ಲ್ಯುಟಿಟಿ ಫೀಡರ್ ಸರ್ಕೀಟ್) ಪ್ರಶಸ್ತಿ ಗೆದ್ದ ಅತಿ ಕಿರಿಯ ಆಟಗಾರ್ತಿ ದಿವ್ಯಾನ್ಶಿ ಎನ್ನಲಾಗುತ್ತಿದೆ.

ದಿವ್ಯಾಂಶಿ ಡಬಲ್ಸ್ನಲ್ಲೂ ಪ್ರಶಸ್ತಿ ಗೆದ್ದುಕೊಂಡಳು. ಸ್ವದೇಶದ ಸಿಂಡ್ರೆಲಾ ದಾಸ್ ಅವರ ಜೊತೆಗೂಡಿ 3–2 ರಿಂದ (7–11, 14–12, 12–14, 11–8, 11–7 ರಿಂದ) ಜಪಾನ್ನ ಸಾಚಿ ಅಯೋಕಿ– ಕೊಕೊನಾ ಮುರಾಮತ್ಸು ಅವರನ್ನು ಸೋಲಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-43-1299037796

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.