ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೊಕೊವಿಚ್‌ಗೆ ಮೆಡ್ವೆಡೆವ್ ಎದುರಾಳಿ

ಅಡಿಲೇಡ್‌ ಇಂಟರ್‌ನ್ಯಾಷನಲ್‌ ಟೆನಿಸ್‌ ಟೂರ್ನಿ: ಶಪವಲೊವ್‌ಗೆ ಸೋಲು
Last Updated 6 ಜನವರಿ 2023, 21:25 IST
ಅಕ್ಷರ ಗಾತ್ರ

ಅಡಿಲೇಡ್‌: ಅಗ್ರಶ್ರೇಯಾಂಕದ ಆಟಗಾರ ನೊವಾಕ್ ಜೊಕೊವಿಚ್‌ ಅವರು ಇಲ್ಲಿ ನಡೆಯುತ್ತಿರುವ ಅಡಿಲೇಡ್‌ ಇಂಟರ್‌ನ್ಯಾಷನಲ್‌ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಸರ್ಬಿಯಾದ ಜೊಕೊವಿಚ್‌ 6-3, 6-4ರಿಂದ ಕೆನಡಾದ ಡೆನಿಸ್‌ ಶಪವಲೊವ್ ಅವರ ಸವಾಲು ಮೀರಿದರು. ವೃತ್ತಿಜೀವನದ 92ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಜೊಕೊವಿಚ್‌, ಮುಂಬರುವ ಆಸ್ಟ್ರೇಲಿಯಾ ಓಪನ್ ಟೂರ್ನಿಗೆ ಭರ್ಜರಿ ಸಿದ್ಧತೆ ನಡೆಸಿದರು.

ನಾಲ್ಕರ ಘಟ್ಟದ ಪಂದ್ಯದಲ್ಲಿ ಜೊಕೊವಿಚ್ ಅವರಿಗೆ, ವಿಶ್ವ ರ‍್ಯಾಂಕಿಂಗ್‌ನಲ್ಲಿ ಈ ಹಿಂದೆ ಅಗ್ರಸ್ಥಾನದಲ್ಲಿದ್ದ ಡೇನಿಯಲ್ ಮೆಡ್ವೆಡೆವ್ ಮುಖಾಮುಖಿಯಾಗುವರು.

ಎಂಟರಘಟ್ಟದ ಇನ್ನೊಂದು ಪಂದ್ಯದಲ್ಲಿ ರಷ್ಯಾದ ಮೆಡ್ವೆಡೆವ್‌ 6-3, 6-3ರಿಂದ ತಮ್ಮದೇ ದೇಶದ ಕರೆನ್ ಕಚನೊವ್ ಅವರನ್ನು ಸೋಲಿಸಿದರು.

ಜಪಾನ್‌ನ ಯೊಶಿಹಿಟೊ ನಿಶಿಯೊಕಾ ಮತ್ತು ಅಮೆರಿಕದ ಸೆಬಾಸ್ಟಿಯನ್ ಕೊರ್ಡಾ ಸೆಮಿಫೈನಲ್ ತಲುಪಿದ ಇನ್ನುಳಿದ ಆಟಗಾರರು. ಕ್ವಾರ್ಟರ್‌ಫೈನಲ್‌ನಲ್ಲಿ ಯೊಶಿಹಿಟೊ 7-6 (7/4), 6-7 (8/10), 6-2ರಿಂದ ಆಸ್ಟ್ರೇಲಿಯಾದ ಅಲೆಕ್ಸಿ ಪೊಪಿರಿನ್ ಎದುರು ಗೆದ್ದರೆ, ಕೊರ್ಡಾ 7-5, 6-1ರಿಂದ ಇಟಲಿಯ ಜಾನಿಕ್ ಸಿನ್ನರ್‌ ಎದುರು ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT