ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಬಲ್ಡನ್: ಜೊಕೊವಿಚ್, ಅರಿನಾ ಶುಭಾರಂಭ

Last Updated 28 ಜೂನ್ 2021, 19:12 IST
ಅಕ್ಷರ ಗಾತ್ರ

ಲಂಡನ್: ಹಾಲಿ ಚಾಂಪಿಯನ್, ಸರ್ಬಿಯಾದ ನೊವಾಕ್ ಜೊಕೊವಿಚ್ ವಿಂಬಲ್ಡನ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಜಯ ಗಳಿಸಿದರು. ಬ್ರಿಟನ್‌ನ ಜ್ಯಾಕ್ ಡ್ರಾಪರ್ ಎದುರಿನ ಪಂದ್ಯದ ಮೊದಲ ಸೆಟ್‌ನಲ್ಲಿ ಸೋಲುಂಡರೂ ಚೇತರಿಸಿಕೊಂಡ ಜೊಕೊವಿಚ್4-6, 6-1, 6-2, 6-2ರಲ್ಲಿ ಗೆಲುವು ಸಾಧಿಸಿದರು.

ವಿಶ್ವ ಕ್ರಮಾಂಕದಲ್ಲಿ 253ನೇ ಸ್ಥಾನದಲ್ಲಿರುವ ಡ್ರಾಪರ್ ಅವರಿಗೆ ಪ್ರಮುಖ ಟೂರ್ನಿಯೊಂದರಲ್ಲಿ ಇದು ಐದನೇ ಪಂದ್ಯವಾಗಿತ್ತು. ಮಳೆಯಿಂದಾಗಿ ಒದ್ದೆಯಾಗಿದ್ದ ಅಂಗಣದಲ್ಲಿ 34 ವರ್ಷದ ಜೊಕೊವಿಚ್‌ ಆರಂಭದಲ್ಲಿ ನಿಯಂತ್ರಣ ಕಳೆದುಕೊಂಡರು. ಎಡಗೈ ಆಟಗಾರ ಡ್ರಾಪರ್ ಎಲ್ಲ ಏಲೂ ಬ್ರೇಕ್ ಪಾಯಿಂಟ್‌ಗಳನ್ನು ಉಳಿಸಿಕೊಂಡು ಗಮನ ಸೆಳೆದರು.

ಎರಡನೇ ಸೆಟ್‌ನಿಂದ ಜೊಕೊವಿಚ್ ಲಯ ಕಂಡುಕೊಂಡರು. ಒಟ್ಟು 25 ಏಸ್‌ ಸಿಡಿಸಿದ ಅವರು 19 ವರ್ಷದ ಎದುರಾಳಿಯನ್ನು ಸುಲಭವಾಗಿ ಮಣಿಸಿದರು.

ಮಹಿಳಾ ವಿಭಾಗದಲ್ಲಿ ದ್ವಿತೀಯ ಶ್ರೇಯಾಂಕದ ಆಟಗಾರ್ತಿ ಬೆಲಾರಸ್‌ನ ಅರಿನಾ ಸಬಲೆಂಕಾ ಮೊದಲ ಸುತ್ತಿನ ಪಂದ್ಯದಲ್ಲಿ ರೊಮೇನಿಯಾದ ಮೋನಿಕಾ ನಿಕುಲೆಸ್ಕು ವಿರುದ್ಧ 6-1, 6-4ರಲ್ಲಿ ಜಯ ಗಳಿಸಿದರು.ಮೋನಿಕಾ ಅರ್ಹತಾ ಸುತ್ತಿನಲ್ಲಿ ಆಡಿ ಬಂದಿದ್ದರು.

ಮಳೆಯಿಂದಾಗಿ ಟೂರ್ನಿಯ ಆರಂಭ ತಡವಾಯಿತು. ಹೀಗಾಗಿ ಮೊದಲ ಸುತ್ತಿನ 64 ಪಂದ್ಯಗಳ ಪೈಕಿ 16 ಪಂದ್ಯಗಳನ್ನು ರದ್ದುಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT