ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಓಪನ್ ಎಟಿಪಿ ಟೆನಿಸ್: ಪ್ರಮುಖರ ಹೊರಗಟ್ಟಿದ ಚುನ್‌, ಬೋರ್ನ

ಬೆಂಗಳೂರು ಓಪನ್ ಎಟಿಪಿ ಟೆನಿಸ್ ಟೂರ್ನಿ: ಡಬಲ್ಸ್‌ನಲ್ಲಿ ಭಾರತದ ಆಟಗಾರರಿಗೆ ಜಯ
Last Updated 9 ಫೆಬ್ರುವರಿ 2022, 14:23 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಮುಖ ಆಟಗಾರರನ್ನು ಮಣಿಸಿದ ಚುನ್‌ ಸಿನ್ ಸೆಂಗ್‌ ಮತ್ತು ಬೋರ್ನ ಗೋಜೊ ಅವರು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಅಂಗಣದಲ್ಲಿ ಬುಧವಾರ ಮಿಂಚಿದರು. ಬೆಂಗಳೂರು ಓಪನ್ ಎಟಿಪಿ ಟೆನಿಸ್ ಟೂರ್ನಿಯಲ್ಲಿ ಅವರು ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಟೂರ್ನಿಯ ಮೂರನೇ ದಿನ ನಡೆದ ಪಂದ್ಯದಲ್ಲಿ ಚೀನಾ ತೈಪೆಯ ಚುನ್ ಶಿನ್ ಸೆಂಗ್‌ ಅವರು ಫ್ರಾನ್ಸ್‌ನ ಆಟಗಾರ ನಾಲ್ಕನೇ ಶ್ರೇಯಾಂಕದ ಹ್ಯೂಗೊ ಗ್ರೀನಿಯರ್ ಎದುರು 6-1, 6-4ರಲ್ಲಿ ಜಯ ಗಳಿಸಿದರು. ಅರ್ಹತಾ ಸುತ್ತಿನಲ್ಲಿ ಆಡಿ ಬಂದಿದ್ದ ಕ್ರೊವೇಷ್ಯಾದ ಬೋರ್ನ ಗೋಜೊ ಮೂರನೇ ಶ್ರೇಯಾಂಕದ ಆಸ್ಟ್ರೇಲಿಯಾ ಆಟಗಾರ ಅಲೆಕ್ಸಾಂಡರ್ ವುಕಿಚ್ ಎದುರು 7-5, 6-3ರಲ್ಲಿ ಗೆಲುವು ಸಾಧಿಸಿದರು.

ಬೆಲ್ಜಿಯಂನ ಕಿಮ್ಮರ್ ಕೊಪೆಜನ್ ಪ್ರಬಲ ಸ್ಪರ್ಧೆಯಲ್ಲಿ ಐದನೇ ಶ್ರೇಯಾಂಕದ ಟರ್ಕಿ ಆಟಗಾರ ಅಲ್ಟುಗ್‌ ಸೆಲಿಕ್‌ಬೆಲಿಕ್‌ ವಿರುದ್ಧ 14-12, 6–3ರಲ್ಲಿ ಗೆದ್ದು ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಅರ್ಹತಾ ಸುತ್ತಿನಲ್ಲಿ ಆಡಿ ಬಂದಿರುವ ಮತ್ತೊಬ್ಬ ಆಟಗಾರ ಬ್ರೆಜಿಲ್‌ನ ಗ್ಯಾಬ್ರಿಯಲ್ ಡಿಕಾಂಪ್ಸ್‌ ಇಟಲಿಯ ಗಿಯಾನ್ ಮರ್ಕೊ ಮೊರೊನಿ ಎದುರು 6-2, 5-7, 7-6 (3)ರಲ್ಲಿ ಜಯ ಗಳಿಸಿದರು. ಮೂರು ತಾಸು ಐದು ನಿಮಿಷಗಳ ಕಾದಾಟ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು.

ಪ್ರಜ್ಞೇಶ್‌ಗೆ ಜಿರಿ ಎದುರಾಳಿ

ಟೂರ್ನಿಯಲ್ಲಿ ಉಳಿದುಕೊಂಡಿರುವ ಭಾರತದ ಏಕೈಕ ಆಟಗಾರ ಪ್ರಜ್ಞೇಶ್ ಗುಣೇಶ್ವರನ್ ಅವರು ಗುರುವಾರ ಕಣಕ್ಕೆ ಇಳಿಯುವರು. ಜೆಕ್ ಗಣರಾಜ್ಯದ ಆಟಗಾರ ಅಗ್ರ ಶ್ರೇಯಾಂಕದ ಜಿರಿ ವೆಸೆಲಿ ಅವರು ಪ್ರಜ್ಞೇಶ್‌ಗೆ ಎದುರಾಳಿ.

ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದ ಫಲಿತಾಂಶಗಳು: ಕ್ರೊವೇಷ್ಯಾದ ಬೋರ್ನ ಗೋಜೊಗೆ ಆಸ್ಟ್ರೇಲಿಯಾದ ಅಲೆಕ್ಸಾಂಡರ್ ವುಕಿಚ್ ಎದುರು 7-5, 6-3ರಲ್ಲಿ ಗೆಲುವು; ಚೀನಾ ತೈಪೆಯ ಚುನ್‌ ಸೆಂಗ್‌ಗೆ ಹ್ಯೂಗೊ ಗ್ರೀನಿಯರ್ ಎದುರು 6-1, 6-4ರಲ್ಲಿ ಜಯ; ಬೆಲ್ಜಿಯಂನ ಕಿಮ್ಮರ್‌ ಕೊಪೆಜನ್ಸ್‌ಗೆ ಟರ್ಕಿಯ ಆಲ್ಟಗ್‌ ಸೆಲಿಕ್‌ ಬೆಲಿಕ್‌ ವಿರುದ್ಧ 7-6 (12), 6-3ರಲ್ಲಿ ಜಯ; ಬ್ರೆಜಿಲ್‌ನ ಗ್ಯಾಬ್ರಿಯಲ್‌ ಡಿಕಾಂಪ್ಸ್‌ಗೆ ಇಟಲಿಯ ಜಿಯಾನ್ ಮಾರ್ಕೊ ಮೊರೊನಿ ಎದುರು 6-2, 5-7, 7-6 (3)ರಲ್ಲಿ ಗೆಲುವು.

ಡಬಲ್ಸ್‌ ಪ್ರೀ ಕ್ವಾರ್ಟರ್ ಫೈನಲ್ ಫಲಿತಾಂಶಗಳು: ಭಾರತದ ಜೀವನ್‌ ನೆಡುಂಚೆಳಿಯನ್–ಪುರವ್ ರಾಜಾಗೆ ಕ್ರೊವೇಷ್ಯಾದ ಬೋರ್ನ ಗೋಜೊ– ಬಲ್ಗೇರಿಯಾದ ದಿಮಿತರ್ ಕುಜ್ಮನೊವ್‌ ಎದುರು 6-4, 6-7 (2), 10-8ರಲ್ಲಿ ಜಯ; ಕೆನಡಾದ ಸ್ಟೀವನ್‌ ಡೀಜ್‌–ಟುನೀಷಿಯಾದ ಮಲೆಕ್‌ ಜಜಿರಿಗೆ ಇಟಲಿಯ ರವುಲ್‌ ಬ್ರೆಂಕಾಷಿಯೊ–ಸ್ವಿಟ್ಜೆರ್ಲೆಂಡ್‌ನ ಜೊಹಾನ್ ನಿಕಲ್ಸ್‌ ಎದುರು 5-7, 6-4, 10-6ರಲ್ಲಿ ಜಯ; ಭಾರತದ ಸಾಕೇತ್ ಮೈನೇನಿ–ರಾಮ್‌ಕುಮಾರ್ ರಾಮನಾಥನ್‌ಗೆ ಗ್ರೀಸ್‌ನ ಮಾರ್ಕೊಸ್‌ ಕಲೊವೆಲೊನಿಸ್‌–ಜಪಾನ್‌ನ ತೊಷಿಹಿಡೆ ಮಸುಯಿ ವಿರುದ್ಧ 6-3, 6-3ರಲ್ಲಿ ಗೆಲುವು; ಫ್ರಾನ್ಸ್‌ನ ಹ್ಯೂಗೊ ಗ್ರೀನಿಯರ್–ಅಲೆಕ್ಸಾಂಡರ್ ಮಲ್ಲರ್‌ಗೆ ಫ್ರಾನ್ಸ್‌ನ ಎನ್ಜೊ ಕೊಕಾಡ್‌–ಆಸ್ಟ್ರೇಲಿಯಾದ ಆ್ಯಂಡ್ರ್ಯೂ ಹ್ಯಾರಿಸ್‌ ವಿರುದ್ಧ 6-2, 4-6, 11-9ರಲ್ಲಿ ಜಯ; ಭಾರತದ ಎನ್‌.ಶ್ರೀರಾಮ್‌ ಬಾಲಾಜಿ–ವಿಷ್ಣುವರ್ಧನ್‌ಗೆ ಫ್ರಾನ್ಸ್‌ನ ಮಥಿಯಾಸ್‌ ಬಾರ್ಗ್‌–ಬೆಲ್ಜಿಯಂನ ಕಿಮ್ಮರ್ ಕೊಪೆಜನ್ಸ್‌ ಎದುರು 6-4, 4-6, 10-3ರಲ್ಲಿ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT