ಪ್ಯಾರಿಸ್ (ಎಎಫ್ಪಿ): ದಾಖಲೆಯ 25ನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗೆಲ್ಲುವ ಉತ್ಸಾಹದಲ್ಲಿದ್ದ ಸರ್ಬಿಯಾದ ದಿಗ್ಗಜ ನೊವಾಕ್ ಜೊಕೊವಿಚ್ ಅವರಿಗೆ ಸುಡುಬಿಸಿಲು ಕಾಡಿತು. ಆಯಾಸಗೊಂಡ ಅವರು, ಫ್ರೆಂಚ್ ಓಪನ್ ಟೂರ್ನಿಯ ಮೂರನೇ ಸುತ್ತಿನಲ್ಲಿ ಬ್ರೆಜಿಲ್ನ 19 ವರ್ಷ ವಯಸ್ಸಿನ ಆಟಗಾರ ಜೊವೊ ಫೋನ್ಸೆಕಾ ಎದುರು ಸೋತರು.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದ ಮೊದಲೆರಡು ಸೆಟ್ಗಳಲ್ಲಿ 6–4, 6–4ರಿಂದ ಮುನ್ನಡೆ ಸಾಧಿಸಿದ್ದರು. ಆದರೆ, ಸುಡುಬಿಸಿಲಿ ನಿಂದಾಗಿ ಆಯಾಸಗೊಂಡರು. ಇದರ ಲಾಭ ಪಡೆದ ಜೊವೊ, ನಂತರ ಮೂರು ಸೆಟ್ಗಳಲ್ಲಿ 6–3, 7–5, 7–5ರಿಂದ 39 ವರ್ಷದ ಆಟಗಾರನಿಗೆ ಆಘಾತ ನೀಡಿದರು. ಐದನೇ ಶ್ರೇಯಾಂಕದ ಆಟಗಾರ ಬೆನ್ ಶೆಲ್ಟನ್ ಎರಡನೇ ಸುತ್ತಿನಲ್ಲೇ ಆಘಾತ ಅನುಭವಿಸಿದರು.

ನಾಲ್ಕು ಬಾರಿಯ ಚಾಂಪಿಯನ್ ಇಗಾ ಶ್ವಾಂಟೆಕ್ ಅವರು ಮಹಿಳೆಯರ ಸಿಂಗಲ್ಸ್ನಲ್ಲಿ ನೇರ ಸೆಟ್ಗಳ ಗೆಲುವಿನೊಡನೆ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

‘ಫಿಲಿಪ್ ಶಾಟಿಯೆ’ ಕೋರ್ಟ್ನಲ್ಲಿ ನಡೆದ ಮಹಿಳಾ ಸಿಂಗಲ್ಸ್ ಮೂರನೇ ಸುತ್ತಿನ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಆಟಗಾರ್ತಿ ಶ್ವಾಂಟೆಕ್ (ಪೋಲೆಂಡ್) 6-4, 6-4ರಿಂದ ಸ್ವದೇಶದ ಮ್ಯಾಗ್ಡಾ ಲಿನೆಟ್ ಅವರನ್ನು ಹಿಮ್ಮೆಟ್ಟಿಸಿದರು.

ಆರು ಗ್ರ್ಯಾನ್ಸ್ಲಾಮ್ ಕಿರೀಟಗಳ ಒಡತಿಯಾಗಿರುವ 24 ವರ್ಷದ ಶ್ವಾಂಟೆಕ್ ಅವರಿಗೆ ಮುಂದಿನ ಸುತ್ತಿನಲ್ಲಿ 15ನೇ ಶ್ರೇಯಾಂಕದ ಮಾರ್ಟಾ ಕೊಸ್ತ್ಯುಕ್ ಎದುರಾಳಿಯಾಗಿದ್ದಾರೆ.

ಉಕ್ರೇನ್ನ ಕೊಸ್ತ್ಯುಕ್ 6-4, 6-3ರಿಂದ ಸ್ವಿಟ್ಜರ್ಲೆಂಡ್ನ ವಿಕ್ಟೋರಿಜಾ ಗೊಲುಬಿಕ್ ಅವರನ್ನು ಮಣಿಸಿದರು. 23 ವರ್ಷದ ಅವರು ಈ ಋತುವಿನಲ್ಲಿ ಮಣ್ಣಿನ ಅಂಕಣದಲ್ಲಿ ಗೆಲುವಿನ ಓಟವನ್ನು 15 ಪಂದ್ಯಗಳಿಗೆ ವಿಸ್ತರಿಸಿದರು.

ರಷ್ಯಾದ ಹದಿಹರೆಯದ ಆಟಗಾರ್ತಿ ಮೀರಾ ಅಂದ್ರೆಯೇವಾ 6-4, 6-2ರಿಂದ ಝೆಕ್ ರಿಪಬ್ಲಿಕ್ನ ಮೇರಿ ಬುಜ್ಕೋವಾ ಅವರನ್ನು ಸೋಲಿಸಿ, ಅಂತಿಮ 16ರ ಘಟ್ಟಕ್ಕೆ ಮುನ್ನಡೆದರು. ಜಿಲ್ ಅವರು 6–1, 7–5ರಿಂದ 2023ರ ರನ್ನರ್ಸ್ ಅಪ್ ಕರೋಲಿನಾ ಮುಚೋವಾ (ಝೆಕ್ ರಿಪಬ್ಲಿಕ್) ಅವರಿಗೆ ಆಘಾತ ನೀಡಿದರು.

ಶೆಲ್ಟನ್ ನಿರ್ಗಮನ: ಬೆಲ್ಜಿಯಂನ ಶ್ರೇಯಾಂಕರಹಿತ ಆಟಗಾರ ರಫೆಲ್ ಕೊಲಿಗ್ನಾನ್ 7-5, 6-4, 6-4ರಿಂದ ಅಮೆರಿಕದ ಶೆಲ್ಟನ್ ಅವರನ್ನು ಸೋಲಿಸಿ, ವೃತ್ತಿಜೀವನದ ದೊಡ್ಡ ಗೆಲುವು ದಾಖಲಿಸಿದರು. ವಿಶ್ವ ಕ್ರಮಾಂಕದಲ್ಲಿ 64ನೇ ಸ್ಥಾನದಲ್ಲಿರುವ ರಫೆಲ್ ಅವರು ಮೊದಲ ಬಾರಿ ಫ್ರೆಂಚ್ ಓಪನ್ನಲ್ಲಿ ಮೂರನೇ ಸುತ್ತು ತಲುಪಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-4-783014062

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.