ಪ್ಯಾರಿಸ್ (ಎಎಫ್ಪಿ): ರಷ್ಯಾದ ಟೆನಿಸ್ ತಾರೆ ಮೀರಾ ಅಂದ್ರೆಯೇವಾ ಅವರು ಮಂಗಳವಾರ ನೇರ ಸೆಟ್ಗಳಿಂದ ರೊಮೇನಿಯಾದ ಸೊರಾನಾ ಸಿರ್ಸ್ಟಿಯಾ ಅವರನ್ನು ಸದೆಬಡಿದು ಫ್ರೆಂಚ್ ಓಪನ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದರು. ಮಾರ್ಟಾ ಕೊಸ್ತ್ಯುಕ್ ಅವರು ವೃತ್ತಿಪರ ಯುಗದಲ್ಲಿ ರೋಲ್ಯಾಂಡ್ ಗ್ಯಾರೋಸ್ನಲ್ಲಿ ಅಂತಿಮ ನಾಲ್ಕರ ಘಟ್ಟ ತಲುಪಿದ ಉಕ್ರೇನ್ನ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

‘ಫಿಲಿಪ್ ಶಾಟಿಯೆ’ ಕೋರ್ಟ್ನಲ್ಲಿ ನಡೆದ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್ನಲ್ಲಿ ಎಂಟನೇ ಶ್ರೇಯಾಂಕದ ಮೀರಾ 6-0, 6-3ರಿಂದ 18ನೇ ಶ್ರೇಯಾಂಕದ ಸಿರ್ಸ್ಟಿಯಾ ಅವರನ್ನು ಮಣಿಸಿದರು. ತಮ್ಮ ಚೊಚ್ಚಲ ಗ್ರ್ಯಾನ್ ಸ್ಲಾಮ್ ಕಿರೀಟದ ಪ್ರಯತ್ನದಲ್ಲಿರುವ 19 ವರ್ಷ ವಯಸ್ಸಿನ ಮೀರಾ 2024ರಲ್ಲೂ ಇಲ್ಲಿ ಸೆಮಿಫೈನಲ್ ತಲುಪಿದ್ದರು.

ವರ್ಷಾಂತ್ಯಕ್ಕೆ ಟೆನಿಸ್ ವೃತ್ತಿಜೀವನ ದಿಂದ ನಿವೃತ್ತಿಯಾಗಲಿರುವ 36 ವರ್ಷದ ಸಿರ್ಸ್ಟಿಯಾ ಅವರಿಗೆ ಫ್ರೆಂಚ್ ಓಪನ್ನಲ್ಲಿ ಇದು ಕೊನೆಯ ಪಂದ್ಯವಾಗಿತ್ತು. 2009ರ ನಂತರ ಅವರು ಮೊದಲ ಬಾರಿ ಕ್ವಾರ್ಟರ್ ಫೈನಲ್ ತಲುಪಿದ್ದರು. ಮೀರಾ, ಮುಂದಿನ ಸುತ್ತಿನಲ್ಲಿ 15ನೇ ಶ್ರೇಯಾಂಕದ ಕೊಸ್ತ್ಯುಕ್ ಅವರನ್ನು ಎದುರಿಸಲಿದ್ದಾರೆ.

ರಷ್ಯಾ– ಉಕ್ರೇನ್ ನಡುವಣ ಯುದ್ಧಕಾಲದಲ್ಲಿ ಉಕ್ರೇನ್ ಆಟಗಾರ್ತಿ ಯನ್ನು ಎದುರಿಸುವ ಸವಾಲುಗಳ ಬಗ್ಗೆ ಮೀರಾ ಅವರನ್ನು ಮಾಧ್ಯಮದವರು ಪ್ರಶ್ನಿಸಿ ದಾಗ, ‘ನಾನು ಯಾರೊಂದಿಗೆ ಆಡುತ್ತೇನೆ ಎಂಬುದು ಮುಖ್ಯವಲ್ಲ. ನನ್ನತ್ತ ಬರುವ ಚೆಂಡನ್ನು ಹೊಡೆದಟ್ಟಲು ಪ್ರಯತ್ನಿಸುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

ಇಗಾ ಶ್ವಾಂಟೆಕ್ ಅವರಿಗೆ ನಾಲ್ಕನೇ ಸುತ್ತಿನಲ್ಲಿ ಆಘಾತ ನೀಡಿದ್ದ 23 ವರ್ಷದ ಕೊಸ್ತ್ಯುಕ್, ಗ್ರ್ಯಾನ್ಸ್ಲಾಮ್ ಟೂರ್ನಿ ಯಲ್ಲಿ ಮೊದಲ ಬಾರಿ ನಾಲ್ಕರ ಘಟ್ಟ ಪ್ರವೇಶಿಸಿದರು. ಅವರು ಕ್ವಾರ್ಟರ್ ಫೈನಲ್ನಲ್ಲಿ 6-3, 2-6, 6-2 ರಿಂದ ತಮ್ಮದೇ ದೇಶದ ಎಲಿನಾ ಸ್ವಿಟೋಲಿನಾ ಅವರನ್ನು ಮಣಿಸಿದರು. ಏಳನೇ ಕ್ರಮಾಂಕದ ಸ್ವಿಟೋಲಿನಾ ಅವರಿಗೆ ಇಲ್ಲಿ ಆರನೇ ಬಾರಿಯೂ ಎಂಟರ ಘಟ್ಟವನ್ನು ದಾಟಲು ಸಾಧ್ಯವಾಗಲಿಲ್ಲ.

ಜೇಡಿಮಣ್ಣಿನ ಅಂಕಣದಲ್ಲಿ ಗೆಲುವಿನ ಓಟವನ್ನು 17 ಪಂದ್ಯಗಳಿಗೆ ವಿಸ್ತರಿಸಿದ ಕೊಸ್ತ್ಯುಕ್ ಅವರು ಈ ಗೆಲುವನ್ನು ತಮ್ಮ ದೇಶದ ಜನತೆಗೆ ಅರ್ಪಿಸಿದ್ದಾರೆ.

ಸಬಲೆಂಕಾ ಓಟ: ಅಗ್ರ ಶ್ರೇಯಾಂಕದ ಆಟಗಾರ್ತಿ ಅರಿನಾ ಸಬಲೆಂಕಾ 7-5, 6-3ರಿಂದ ಜಪಾನ್ನ ನವೋಮಿ ಒಸಾಕಾ ಅವರನ್ನು ಹಿಮ್ಮೆಟ್ಟಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

28 ವರ್ಷದ ಸಬಲೆಂಕಾ ಐದನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗೆಲ್ಲುವ ಪ್ರಯತ್ನ ದಲ್ಲಿದ್ದಾರೆ. ಬೆಲರೂಸ್ನ ಆಟಗಾರ್ತಿ ಮುಂದಿನ ಸುತ್ತಿನಲ್ಲಿ ರಷ್ಯಾದ ಡಯಾನಾ ಶ್ನೈಡರ್ ಅವರನ್ನು ಎದುರಿಸಲಿದ್ದಾರೆ. 25ನೇ ಶ್ರೇಯಾಂಕದ ಡಯಾನಾ 6-3, 3-6, 6-0ರಿಂದ ಮ್ಯಾಡಿಸನ್ ಕೀಸ್ ಅವರನ್ನು ಸೋಲಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-51-1373862995

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.