ಪ್ಯಾರಿಸ್ (ಎಎಫ್ಪಿ): ವಿಶ್ವದ ಅಗ್ರಮಾನ್ಯ ಆಟಗಾರ್ತಿ ಅರಿನಾ ಸಬಲೆಂಕಾ ಮತ್ತು ಹಾಲಿ ಚಾಂಪಿಯನ್ ಕೊಕೊ ಗಾಫ್ ಅವರು ಮಂಗಳವಾರ ನೇರ ಸೆಟ್ಗಳ ಗೆಲುವಿನೊಡನೆ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಎರಡನೇ ಸುತ್ತು ಪ್ರವೇಶಿಸಿದರು. ಪುರುಷರ ಸಿಂಗಲ್ಸ್ನಲ್ಲಿ ಆರನೇ ಶ್ರೇಯಾಂಕದ ಡೇನಿಯಲ್ ಮೆಡ್ವೆಡೇವ್ ಅವರು ಆರಂಭಿಕ ಸುತ್ತಿನಲ್ಲೇ ನಿರ್ಗಮಿಸಿದರು.

ಮಹಿಳೆಯರ ಸಿಂಗಲ್ಸ್ನ ಮೊದಲ ಸುತ್ತಿನಲ್ಲಿ ಬೆಲರೂಸ್ನ ಸಬಲೆಂಕಾ 6-4, 6-2ರಿಂದ ಸ್ಪೇನ್ನ ಜೆಸ್ಸಿಕಾ ಬೌಜಾಸ್ ಮನೇರೊ ಅವರನ್ನು ಹಿಮ್ಮೆಟ್ಟಿಸಿದರು. ನಾಲ್ಕು ಗ್ರ್ಯಾನ್ಸ್ಲಾಮ್ ಗೆದ್ದಿರುವ 26 ವರ್ಷದ ಸಬಲೆಂಕಾ ಅವರಿಗೆ 50ನೇ ರ್ಯಾಂಕ್ನ ಜೆಸ್ಸಿಕಾ ಮೊದಲ ಸೆಟ್ನಲ್ಲಿ ಕೊಂಚ ಪ್ರತಿರೋಧ ತೋರಿದರು. ಎರಡನೇ ಸೆಟ್ನಲ್ಲಿ ಬೆಲರೂಸ್ನ ಆಟಗಾರ್ತಿ ಸುಲಭವಾಗಿ ಮೇಲುಗೈ ಸಾಧಿಸಿದರು. ಕಳೆದ ಆವೃತ್ತಿಯಲ್ಲಿ ಫೈನಲ್ ತಲುಪಿದ್ದ ಸಬಲೆಂಕಾ, ಅಮೆರಿಕದ ಕೊಕೊ ಗಾಫ್ ಅವರಿಗೆ ಸೋತಿದ್ದರು.

ರೋಲ್ಯಾಂಡ್ ಗ್ಯಾರೋಸ್ನಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಭಿಯಾನ ಆರಂಭಿಸಿದ ಅಮೆರಿಕದ ಗಾಫ್ 6-4, 6-0ರಿಂದ ಸ್ವದೇಶದ ಟೇಲರ್ ಟೌನ್ಸೆಂಡ್ ಅವರನ್ನು ಮಣಿಸಿದರು. ಮೊದಲ ಸೆಟ್ನಲ್ಲಿ 3–5 ಹಿನ್ನಡೆ ಅನುಭವಿಸಿದ್ದ ಗಾಫ್ ನಂತರ ನೈಜ ಆಟ ಪ್ರದರ್ಶಿಸಿದರು. ಎರಡನೇ ಸೆಟ್ನಲ್ಲಿ ಎದುರಾಳಿಗೆ ಒಂದೂ ಗೇಮ್ ಬಿಟ್ಟುಕೊಡದೆ ಪಾರಮ್ಯ ಮೆರೆದರು. ಮುಂದಿನ ಸುತ್ತಿನಲ್ಲಿ ಅವರಿಗೆ ಈಜಿಪ್ಟ್ನ ಮಾಯರ್ ಶೆರಿಫ್ ಎದುರಾಳಿಯಾಗಿದ್ದಾರೆ.

ರಷ್ಯಾದ ಮೆಡ್ವೆಡೇವ್ ಐದು ಸೆಟ್ಗಳ ಹಣಾಹಣಿಯಲ್ಲಿ ಆಸ್ಟ್ರೇಲಿಯಾದ ಎದುರಾಳಿ ಆ್ಯಡಂ ವಾಲ್ಟನ್ ಅವರಿಗೆ ಶರಣಾದರು. ವೈಲ್ಡ್ಕಾರ್ಡ್ ಪ್ರವೇಶ ಪಡೆದಿರುವ 97ನೇ ಕ್ರಮಾಂಕದ ವಾಲ್ಟನ್ 6-2, 1-6, 6-1, 1-6, 6-4ರಿಂದ ಮೆಡ್ವೆಡೇವ್ ಅವರನ್ನು ಸೋಲಿಸಿದರು. 2021ರಲ್ಲಿ ಅಮೆರಿಕ ಓಪನ್ ಪ್ರಶಸ್ತಿ ಗೆದ್ದಿರುವ ಮೆಡ್ವೆಡೇವ್ ಅವರಿಗೆ ಫ್ರೆಂಚ್ ಓಪನ್ನಲ್ಲಿ ಈತನಕ ಕ್ವಾರ್ಟರ್ ಫೈನಲ್ ಹಂತ ದಾಟಲು ಸಾಧ್ಯವಾಗಿಲ್ಲ.

20ನೇ ಕ್ರಮಾಂಕದ ಕ್ಯಾಮರಾನ್ ನೋರಿ ಅವರು ಪಕ್ಕೆಲುಬಿನ ಗಾಯದಿಂದಾಗಿ ತಮ್ಮ ಮೊದಲ ಸುತ್ತಿನ ಪಂದ್ಯದಿಂದ ಹಿಂದೆ ಸರಿದರು. ಪೆರಗ್ವೆಯ ಡೇನಿಯಲ್ ವ್ಯಾಲೆಜೊ ಅವರು 7-6 (9/7), 2-0ರಿಂದ ಮುನ್ನಡೆಯಲ್ಲಿ ದ್ದಾಗ ಬ್ರಿಟನ್ನ ಕ್ಯಾಮೆರಾನ್ ನಿವೃತ್ತಿ ಪಡೆದರು.

ಐದನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿಯನ್ನು ಎದುರು ನೋಡುತ್ತಿರುವ ಜಪಾನ್ ಅನುಭವಿ ನವೋಮಿ ಒಸಾಕಾ 6-3 7-6(3)ರಿಂದ ಜರ್ಮನಿಯ ಲಾರಾ ಸೀಗೆಮಂಡ್ ಅವರನ್ನು ಸೋಲಿಸಿ, ಎರಡನೇ ಸುತ್ತು ಪ್ರವೇಶಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-44-2101524727

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.