ಪ್ಯಾರಿಸ್ (ಎಎಫ್ಪಿ): ಫ್ರೆಂಚ್ ಓಪನ್ನಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲುವ ವಿಶ್ವದ ಅಗ್ರಮಾನ್ಯ ಆಟಗಾರ್ತಿ ಅರಿನಾ ಸಬಲೆಂಕಾ ಅವರ ಕನಸು ಕ್ವಾರ್ಟರ್ಫೈನಲ್ನಲ್ಲಿಯೇ ಭಗ್ನಗೊಂಡಿತು. 25ನೇ ಶ್ರೇಯಾಂಕದ ಆಟಗಾರ್ತಿ, ರಷ್ಯಾದ ಡಿಯಾನಾ ಶ್ನೈಡರ್ ಅವರು 3–6, 7–5, 6–0ಯಿಂದ ಬೆಲರೂಸ್ನ ಆಟಗಾರ್ತಿಗೆ ಆಘಾತ ನೀಡಿದರು.

ಪುರುಷರ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಆಟಗಾರ ಯಾನಿಕ್ ಸಿನ್ನರ್ ಅವರು ಎರಡನೇ ಸುತ್ತಿನಲ್ಲಿ ನಿರ್ಗಮಿಸಿದ್ದರು. ಇದೀಗ, ಮಹಿಳೆಯರ ಸಿಂಗಲ್ಸ್ನಲ್ಲೂ ಅಗ್ರ ಶ್ರೇಯಾಂಕದ ಆಟಗಾರ್ತಿಯೂ ಟೂರ್ನಿಯಿಂದ ಹೊರಬಿದ್ದಂತಾಯಿತು. ಪುರುಷರ ಅಥವಾ ಮಹಿಳೆಯರ ಸಿಂಗಲ್ಸ್ನಲ್ಲಿ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಜಯಿಸಿದ್ದ ತಾರೆಯರ ಹೋರಾಟವೂ ಅಂತ್ಯಗೊಂಡಿತು. ಅದರೊಂದಿಗೆ, ಈ ಬಾರಿಯ ಫ್ರೆಂಚ್ ಓಪನ್ ಟೆನಿಸ್ ಕಿರೀಟ ಹೊಸಬರ ಮುಡಿಗೇರುವುದು ಖಚಿತವಾಯಿತು.

ಫಿಲಿಪ್ ಶಾಟ್ರಿಯೆ ಕೋರ್ಟ್ನಲ್ಲಿ ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ಎಂಟರ ಘಟ್ಟದ ಪಂದ್ಯದಲ್ಲಿ ಸಬಲೆಂಕಾ ಮೊದಲ ಸೆಟ್ನಲ್ಲಿ ಸುಲಭವಾಗಿ ಮೇಲುಗೈ ಸಾಧಿಸಿದ್ದರು. ಗಾಳಿ ಜೋರಾಗಿ ಬೀಸುತ್ತಿದ್ದು, ಈ ಪಂದ್ಯದ ಎರಡನೇ ಸೆಟ್ನಲ್ಲಿ ಇಬ್ಬರೂ ಆಟಗಾರ್ತಿಯರು ತೀವ್ರ ಹೋರಾಟದಲ್ಲಿ ಭಾಗಿಯಾದರು. ಅಂತಿಮ ಸೆಟ್ ವೇಳೆಗೆ ಆಯಾಸಗೊಂಡಂತೆ ಕಂಡ ಸಬಲೆಂಕಾ, ಪದೇಪದೆ ತಪ್ಪುಗಳನ್ನು ಎಸಗಿದರು. ಒಂದೂ ಗೇಮ್ ಗೆಲ್ಲದೆ ಕೊನೆಯ ಸೆಟ್ ಕಳೆದುಕೊಂಡರು.

ಸಬಲೆಂಕಾ ಅವರು ಸತತ 14ನೇ ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದರು. ಸತತ ಏಳು ‘ಪ್ರಮುಖ ಟೂರ್ನಿ’ಗಳಲ್ಲಿ ನಾಲ್ಕರ ಘಟ್ಟ ಪ್ರವೇಶಿಸಿದ್ದ ಅಮೆರಿಕದ ದಿಗ್ಗಜ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರ ದಾಖಲೆ ಸರಿಗಟ್ಟುವ ಸಬಲೆಂಕಾ ಯತ್ನ ಕೈಗೂಡಲಿಲ್ಲ.

ಮಾಯಾ ಯಶಸ್ಸಿನ ಓಟ: 24 ವರ್ಷ ವಯಸ್ಸಿನ ಶ್ನೈಡರ್ ಅವರು ನಾಲ್ಕರ ಘಟ್ಟದಲ್ಲಿ ಪೋಲೆಂಡ್ನ ಮಾಯಾ ಕಲ್ಹಿನ್ಸ್ಕಾ ಅವರನ್ನು ಎದುರಿಸಲಿದ್ದಾರೆ. ಮಾಯಾ ಅವರು ಇನ್ನೊಂದು ಕ್ವಾರ್ಟರ್ಫೈನಲ್ನಲ್ಲಿ 7–6 (7–3), 6–3ರಿಂದ 22ನೇ ಶ್ರೇಯಾಂಕದ ಆಟಗಾರ್ತಿ ಆನಾ ಕಲಿನ್ಸ್ಕಾಯಾಗೆ ಆಘಾತ ನೀಡಿದರು. ಟೂರ್ನಿಯ ಇತಿಹಾಸದಲ್ಲಿ ಅರ್ಹತಾ ಸುತ್ತು ಆಡಿ, ಸೆಮಿಫೈನಲ್ ತಲುಪಿದ ಎರಡನೇ ಆಟಗಾರ್ತಿ ಎಂಬ ಹಿರಿಮೆಗೂ 24 ವರ್ಷ ವಯಸ್ಸಿನ ಮಾಯಾ ಪಾತ್ರರಾದರು.

ಅರ್ಜೆಂಟೀನಾದ ನಾಡಿಯಾ ಪೊಡೊರೊಸ್ಕಾ ಅವರು 2020ರಲ್ಲಿ ಅರ್ಹತಾ ಸುತ್ತು ಆಡಿ, ಮುಖ್ಯಸುತ್ತಿನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದರು. ರಷ್ಯಾದ ಆಟಗಾರ್ತಿ ಕಲಿನ್ಸ್ಕಾಯ ಅವರು ಈ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-51-1205848147

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.