ಪ್ಯಾರಿಸ್ (ಎಎಫ್ಪಿ): ಬ್ರೆಜಿಲ್ನ ಯುವ ತಾರೆ ಜೋವೊ ಫೋನ್ಸೆಕಾ ಅವರು ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕನಸಿನ ಓಟವನ್ನು ಮುಂದುವರಿಸಿದ್ದಾರೆ. ಸರ್ಬಿಯಾದ ದಿಗ್ಗಜ ನೊವಾಕ್ ಜೊಕೊವಿಚ್ ಅವರಿಗೆ ಆಘಾತ ನೀಡಿದ್ದ 19 ವರ್ಷದ ಫೋನ್ಸೆಕಾ ನಾಲ್ಕನೇ ಸುತ್ತಿನಲ್ಲಿ ಎರಡು ಬಾರಿಯ ರನ್ನರ್ಸ್ ಅಪ್ ಕ್ಯಾಸ್ಪರ್ ರೂಡ್ ಅವರನ್ನು ಹಿಮ್ಮೆಟ್ಟಿಸಿದರು.

28ನೇ ಶ್ರೇಯಾಂಕದ ಫೋನ್ಸೆಕಾ ಪುರುಷರ ಸಿಂಗಲ್ಸ್ನ 16ರ ಘಟ್ಟದ ಪಂದ್ಯದಲ್ಲಿ 7-5, 7-6 (8), 5-7, 6-2 ರಿಂದ ನಾರ್ವೆಯ ರೂಡ್ ಅವರನ್ನು ಮಣಿಸಿ, ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ ಮೊದಲ ಬಾರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. 2022 ಮತ್ತು 2023ರಲ್ಲಿ ಫೈನಲ್ ತಲುಪಿದ್ದ 15ನೇ ಶ್ರೇಯಾಂಕದ ರೂಡ್ ನಿರಾಸೆಯೊಂದಿಗೆ ಹೊರನಡೆದರು.

ಫೋನ್ಸೆಕಾ ಮೂರನೇ ಸುತ್ತಿನಲ್ಲಿ ಜೊಕೊವಿಚ್ ಅವರನ್ನು ಐದು ಸೆಟ್ಗಳ ಹೋರಾಟದಲ್ಲಿ ಮಣಿಸಿದ್ದರು. ಗುಸ್ಟಾವೊ ಕುರ್ಟೆನ್ (2004) ನಂತರ ಇಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ಬ್ರೆಜಿಲ್ನ ಮೊದಲ ಆಟಗಾರ ಎಂಬ ಹಿರಿಮೆಗೆ ಫೋನ್ಸೆಕಾ ಪಾತ್ರರಾದರು.

ಫೋನ್ಸೆಕಾ ಮುಂದಿನ ಸುತ್ತಿನಲ್ಲಿ 20 ವರ್ಷದ ಜೇಕಬ್ ಮೆನ್ಸಿಕ್ ಅವರನ್ನು ಎದುರಿಸಲಿದ್ದಾರೆ. 26ನೇ ಶ್ರೇಯಾಂಕದ ಮೆನ್ಸಿಕ್ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 6-3, 7-6 (6), 4-6, 2-6, 6-3 ಐದು ಸೆಟ್ಗಳ ಹಣಾಹಣಿಯಲ್ಲಿ 11ನೇ ಶ್ರೇಯಾಂಕದ ಆ್ಯಂಡ್ರೆ ರುಬ್ಲೆವ್ ಅವರನ್ನು ಮಣಿಸಿದರು. ಇದರೊಂದಿಗೆ ಇವಾನ್ ಲೆಂಡ್ಲ್ (1980) ಬಳಿಕ ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ ಎಂಟರ ಘಟ್ಟ ಪ್ರವೇಶಿಸಿದ ಝೆಕ್ ರಿಪಬ್ಲಿಕ್ನ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು.

10ನೇ ಶ್ರೇಯಾಂಕದ ಫ್ಲೇವಿಯೊ ಕೊಬೊಲ್ಲಿ 6-2, 6-3, 6-7 (3), 7-6 (5)ರಿಂದ ಅಮೆರಿಕದ ಜಚಾರಿ ಸ್ವಜ್ಡಾ ಅವರನ್ನು ಪರಾಭವಗೊಳಿಸಿದರು. ಇಟಲಿಯ 24 ವರ್ಷದ ಕೊಬೊಲ್ಲಿ ಅವರು 2025ರ ವಿಂಬ್ಡಲನ್ ಬಳಿಕ ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ ಎರಡನೇ ಬಾರಿ ಕ್ವಾರ್ಟರ್ ಫೈನಲ್ ತಲುಪಿದರು.

ಮೀರಾ ಮುನ್ನಡೆ: 2024ರ ಆವೃತ್ತಿಯಲ್ಲಿ ಸೆಮಿಫೈನಲ್ ತಲುಪಿದ್ದ ರಷ್ಯಾದ ಆಟಗಾರ್ತಿ ಮೀರಾ ಅಂದ್ರೆಯೇವಾ ಅವರು ಎಂಟರ ಘಟ್ಟ ಪ್ರವೇಶಿಸಿದರು. ಎಂಟನೇ ಶ್ರೇಯಾಂಕದ ಮೀರಾ 6-3, 6-2ರಿಂದ ಜಿಲ್ ಟೀಚ್ಮನ್ ಅವರನ್ನು ನಿರಾಯಾಸವಾಗಿ ಮಣಿಸಿದರು. ಅವರಿಗೆ ರೊಮೇನಿಯಾದ ಸೊರಾನಾ ಸಿರ್ಸ್ಟಿಯಾ ಮುಂದಿನ ಎದುರಾಳಿಯಾಗಿದ್ದಾರೆ.

ಕೀಸ್ಗೆ ಆಘಾತ: 2025ರ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಮ್ಯಾಡಿಸನ್ ಕೀಸ್ ಅವರಿಗೆ ನಾಲ್ಕನೇ ಸುತ್ತು ದಾಟಲು ಸಾಧ್ಯವಾಗಲಿಲ್ಲ. ರಷ್ಯಾದ 25ನೇ ಶ್ರೇಯಾಂಕದ ಡಯಾನಾ ಶ್ನೈಡರ್ 6-3, 3-6, 6-0ರಿಂದ 19ನೇ ಶ್ರೇಯಾಂಕದ ಕೀಸ್ (ಅಮೆರಿಕ) ಅವರನ್ನು ಸೋಲಿಸಿದರು.

ಹಾಲಿ ಚಾಂಪಿಯನ್ ಕೊಕೊ ಗಾಫ್ಗೆ ಆಘಾತ ನೀಡಿದ್ದ ಅನಸ್ತೇಸಿಯಾ ಪೊಟಪೋವಾ ಅವರ ಓಟಕ್ಕೆ ತೆರೆಬಿತ್ತು. ನಾಲ್ಕನೇ ಸುತ್ತಿನಲ್ಲಿ ರಷ್ಯಾದ ಅನ್ನಾ ಕಲಿನ್ಸ್ಕಯಾ 6-4, 2-6, 7-6 (10-7)ರಿಂದ ರಷ್ಯಾ ಸಂಜಾತೆ, ಆಸ್ಟ್ರಿಯಾದ ಅನಸ್ತೇಸಿಯಾ ಅವರನ್ನು ಮಣಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-4-637176264

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.