ಬೆಂಗಳೂರು: ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ವೀಕ್ಷಕ ವಿವರಣೆಯನ್ನೂ ಇದೇ ಮೊದಲ ಬಾರಿ ಕನ್ನಡದಲ್ಲಿ ನೀಡಲು ಪ್ರಸಾರ ಸಂಸ್ಥೆ ಸೋನಿ ನೋರ್ಟ್ಸ್ ನೆಟ್ವರ್ಕ್ ಸಂಸ್ಥೆಯು ಸಿದ್ಧತೆ ನಡೆಸಿದೆ.

ರೋಲ್ಯಾಂಡ್ ಗ್ಯಾರೋಸ್ನ ಪ್ರಧಾನ ಕೋರ್ಟ್ನಲ್ಲಿ ನಡೆಯುವ ಪಂದ್ಯಗಳ ವೀಕ್ಷಕ ವಿವರಣೆಯನ್ನು ‘ಸೋನಿ ಟೆನ್ 4’ ವಾಹಿನಿಯಲ್ಲಿ ಕನ್ನಡದಲ್ಲೇ ಆಲಿಸಬಹುದಾಗಿದೆ. ಟೆನಿಸ್ ಮಾಜಿ ಆಟಗಾರ, ಏಷ್ಯನ್ ಗೇಮ್ಸ್ ಪದಕ ವಿಜೇತ ಶ್ರೀನಾಥ್ ಪ್ರಹ್ಲಾದ್ ಮತ್ತು ಅನುಭವಿ ಆಟಗಾರ ಮೈಸೂರಿನ ಎಸ್.ಡಿ.ಪ್ರಜ್ವಲ್ ದೇವ್ ಅವರು ಕನ್ನಡದಲ್ಲಿ ಕಮೆಂಟ್ರಿ ನೀಡಲು ಸಜ್ಜಾಗಿದ್ದಾರೆ.

‘ಕರ್ನಾಟಕದ ಟೆನಿಸ್ ಅಭಿಮಾನಿಗಳಿಗೆ ಹೊಸ ಅನುಭವ ನೀಡುವ ಉದ್ದೇಶದಿಂದ ಸೋನಿ ಸಂಸ್ಥೆ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಆ ಸಂಸ್ಥೆಯವರು ನನ್ನನ್ನು ಸಂಪರ್ಕಿಸಿ, ಕನ್ನಡದ ವೀಕ್ಷಕ ವಿವರಣೆ ಪ್ರಸ್ತಾವ ಇಟ್ಟಾಗ ಖುಷಿಯಿಂದ ಒಪ್ಪಿಕೊಂಡೆ. ಈ ಹಿಂದೆ ಇಂಗ್ಲಿಷ್ ಭಾಷೆಯಲ್ಲಿ ವೀಕ್ಷಕ ವಿವರಣೆ ನೀಡಿದ ಅನುಭವವಿದೆ. ಈಗ ಮಾತೃಭಾಷೆಯಲ್ಲಿ ಕಮೆಂಟ್ರಿ ನೀಡಲು ಕಾತರನಾಗಿದ್ದೇನೆ’ ಎಂದು ಪ್ರಜ್ವಲ್ ದೇವ್ ಹೇಳಿದರು.

‘ಪ್ರಾದೇಶಿಕ ಭಾಷೆಯಲ್ಲಿ ಈ ರೀತಿಯ ಪ್ರಯತ್ನ ನಡೆಯುತ್ತಿರುವು ಉತ್ತಮ ಬೆಳವಣಿಗೆ. ಇದೊಂದು ನಮಗೂ ಅಪೂರ್ವ ಅವಕಾಶ. ಸಾಧ್ಯವಾದಷ್ಟು ಕನ್ನಡದ ಪದಗಳ ಪ್ರಯೋಗಕ್ಕೆ ಪ್ರಯತ್ನಿಸುತ್ತೇವೆ. ಆದರೆ, ಕೆಲವೊಂದು ಆಂಗ್ಲ ಪದಗಳನ್ನು ಬಳಸುವ ಅನಿವಾರ್ಯತೆ ಬರಬಹುದು. ಮೊದಲ ಒಂದು ವಾರ ಪ್ರಜ್ವಲ್ ಅವರು ವೀಕ್ಷಕ ವಿವರಣೆ ನೀಡಿದರೆ, ನಂತರ ಫೈನಲ್ವರೆಗೆ ನಾನು ಆ ಕೆಲಸ ನಿರ್ವಹಿಸ ಲಿದ್ದೇನೆ’ ಎಂದು ಶ್ರೀನಾಥ್ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-4-627902869

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.